ಲ್ಯಾಪ್ ಟಾಪ್ ಸೇರಿದಂತೆ ವಿವಿಧ ಸೌಲಭ್ಯಕ್ಕಾಗಿ ವಿಕಲಚೇತನರಿಂದ ಅರ್ಜಿ ಆಹ್ವಾನ
Tumkurnews
ತುಮಕೂರು: ಜಿಲ್ಲೆಯಲ್ಲಿ ಸೆಲೆಬ್ರಲ್ ಪಾಲ್ಸಿವುಳ್ಳ (ಬೆನ್ನುಹುರಿ ಅಪಘಾತಕ್ಕೆ ಒಳಗಾದ) ದೈಹಿಕ ವಿಕಲಚೇತನರಿಗೆ ಮೋಟಿವೇಷನಲ್ ವೀಲ್‍ಛೇರ್ ಮತ್ತು ಎಸ್.ಎಸ್.ಎಲ್.ಸಿ. ಗಿಂತ ನಂತರದ ಉನ್ನತ ವ್ಯಾಸಂಗ ಮಾಡುತ್ತಿರುವ ವಿವಿಧ ಬಗೆಯ ವಿಕಲಚೇತನ (ದೃಷ್ಟಿದೋಷವುಳ್ಳ ವಿದ್ಯಾರ್ಥಿಗಳನ್ನು ಹೊರತುಪಡಿಸಿ) ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ಒದಗಿಸಲು ಅರ್ಜಿ ಆಹ್ವಾನಿಸಲಾಗಿದೆ.
ಕೊರಟಗೆರೆ: ತೆಂಗು ಬೆಳೆಗೆ ಪರಿಕರ ವಿತರಣೆಗಾಗಿ ಅರ್ಜಿ ಆಹ್ವಾನ
ಜಿಲ್ಲಾ ಪಂಚಾಯತ್ ವಿವಿಧ ಕಾರ್ಯಕ್ರಮಗಳಡಿ ಕ್ರೋಢೀಕೃತಗೊಂಡಿರುವ ಶೇ.5ರ ಅನುದಾನದಲ್ಲಿ ಈ ಸೌಲಭ್ಯ ನೀಡಲಾಗುತ್ತಿದ್ದು, ಆಸಕ್ತ ವಿಕಲಚೇತನ ವ್ಯಕ್ತಿ, ವಿದ್ಯಾರ್ಥಿಗಳು ಆಗಸ್ಟ್ 3ರೊಳಗಾಗಿ ಆಯಾ ತಾಲ್ಲೂಕು ಪಂಚಾಯಿತಿಗಳಲ್ಲಿನ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರಿಗೆ ತಮ್ಮ ದಾಖಲಾತಿಗಳನ್ನು ಸಲ್ಲಿಸಬೇಕು.
ಮೋಟಿವೇಷನಲ್ ವೀಲ್‍ಚೇರ್ ಪಡೆಯಲು ಸೆಲೆಬ್ರಲ್ ಪಾಲ್ಸಿವುಳ್ಳ (ಬೆನ್ನುಹುರಿ ಅಪಘಾತಕ್ಕೆ ಒಳಗಾದ) ಶೇ.75ಕ್ಕಿಂತ ಹೆಚ್ಚಿನ ದೈಹಿಕ ವಿಕಲತೆ ಪ್ರಮಾಣವಿರುವ ಬಗ್ಗೆ ಯು.ಡಿ.ಐ.ಡಿ, ಬಿ.ಪಿ.ಎಲ್. ಪಡಿತರ ಹೊಂದಿರಬೇಕು, ಇಲಾಖೆ ಅಥವಾ ಇತರೆ ಯಾವ ಮೂಲಗಳಿಂದ ಮೋಟಿವೇಷನಲ್ ವೀಲ್‍ಛೇರ್ ಮತ್ತು ಯಂತ್ರಚಾಲಿತ ವಾಹನವನ್ನು ಪಡೆಯದಿರುವ ಬಗ್ಗೆ ಧೃಢೀಕರಣ ಪತ್ರ ಸಲ್ಲಿಸಬೇಕು.
ಕೊಬ್ಬರಿ ಬೆಳೆಗಾರರಿಗೆ ಸಿಹಿಸುದ್ದಿ ನೀಡಿದ ಕೇಂದ್ರ ಸಚಿವ ವಿ ಸೋಮಣ್ಣ
ಲ್ಯಾಪ್‍ಟಾಪ್ ಪಡೆಯಲು ದೃಷ್ಟಿದೋಷವುಳ್ಳ ವಿಕಲಚೇತನರನ್ನು ಹೊರತುಪಡಿಸಿ ಉಳಿದ ಬಗೆಯ ವಿಕಲಚೇತನ ವಿದ್ಯಾರ್ಥಿಗಳಾಗಿರಬೇಕು, ಎಸ್.ಎಸ್.ಎಲ್.ಸಿ. ಗಿಂತ ನಂತರದ ಉನ್ನತ ವ್ಯಾಸಂಗ ಮಾಡುತ್ತಿರುವ ಬಗ್ಗೆ ಪ್ರಮಾಣ ಪತ್ರ, ಇಲಾಖೆ ಅಥವಾ ಇತರೆ ಯಾವ ಮೂಲಗಳಿಂದ ಲ್ಯಾಪ್‍ಟಾಪ್ ಪಡೆಯದಿರುವ ಬಗ್ಗೆ ಧೃಢೀಕರಣ ಸಲ್ಲಿಸಬೇಕು.
ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವಿಕಲಚೇತನರ ಸಹಾಯವಾಣಿ ಕೇಂದ್ರದ ದೂರವಾಣಿ ಸಂಖ್ಯೆ: 0816-2005053/ 2270029ನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯನಾಗರಿಕರ ಕಲ್ಯಾಣಾಧಿಕಾರಿ ಬಿ.ಎಸ್.ಚಿದಾನಂದಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತುಮಕೂರು ಸೇರಿದಂತೆ ರಾಜ್ಯದ 50ಕ್ಕೂ ಅಧಿಕ ಕಡೆ ಲೋಕಾಯುಕ್ತ ದಾಳಿ
Good
Laptop for education
It is use full for education