ತುಮಕೂರು: ಏಳು ಮಂದಿ ಮಕ್ಕಳ ಕಳ್ಳರ ಬಂಧನ: 9 ಮಕ್ಕಳ ರಕ್ಷಣೆ
ಒಂದು ಮಗು ಅಪಹರಣ ಕೇಸ್ ಹಿಂದೆ ಹೋದ ಪೊಲೀಸರಿಂದ 9 ಮಕ್ಕಳ ರಕ್ಷಣೆ!: ಮಕ್ಕಳ ಕಳ್ಳರ ಜಾಲ ಪತ್ತೆ
ಚಿತ್ರ: ಮುಬಾರಕ್ ಪಾಷಾ, ಕೆ.ಎನ್ ರಾಮಕೃಷ್ಣ, ಮೆಹಬೂಬ್ ಷರೀಫ್, ಮಹೇಶ್ ಯು.ಡಿ, ಹನುಮಂತ ರಾಜು(ಎಡದಿಂದ)
Tumkurnews
ತುಮಕೂರು: ಜಿಲ್ಲೆಯಲ್ಲಿ ಸಕ್ರಿಯವಾಗಿದ್ದ ಮಕ್ಕಳ ಕಳ್ಳರ ಜಾಲವೊಂದನ್ನು ಪೊಲೀಸರು ಬೇಧಿಸಿದ್ದು, 9 ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ.
ಜಿಲ್ಲೆಯ ಗುಬ್ಬಿ ತಾಲ್ಲೂಕು ಬಿಕ್ಕೇಗುಡ್ಡವಾಸಿ ರಾಮಕೃಷ್ಣ ಹಾಗೂ ತುಮಕೂರು ನಗರ ಭಾರತೀ ನಗರದ ವಾಸಿ ಹನುಮಂತರಾಜು ಬಿನ್ ಲೇಟ್ ಕರಿಯಪ್ಪ, ಈ ಹಿಂದೆ ಕುಣಿಗಲ್ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಟಾಪ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಅಶೋಕ ನಗರದ ವಾಸಿ ಮಹೇಶ್ ಯು.ಡಿ ಬಿನ್ ಯು.ಸಿ ದೊಡ್ಡಯ್ಯ, ದೊಡ್ಡೇರಿ ಆರೋಗ್ಯ ಕೇಂದ್ರದ ಸ್ಟಾಫ್ ನರ್ಸ್ ಪೂರ್ಣಿಮಾ, ಶಿರಾ ನಗರದ ನರ್ಸ್ ಸೌಜನ್ಯ ಎಂಬ 6 ಮಂದಿಯನ್ನು ಮಕ್ಕಳ ಕಳ್ಳತನದ ಆರೋಪದಲ್ಲಿ ಬಂಧಿಸಲಾಗಿದೆ.
ತುಮಕೂರು: ಆಡಳಿಯ ಯಂತ್ರ ಚುರುಕುಗೊಳಿಸಿ: ಸಚಿವ ಪರಮೇಶ್ವರ್
ಬಂಧಿತ ಆರೋಪಿಗಳು 1,75,000 ರೂ.ಗಳಿಗೆ ಮಗುವೊಂದನ್ನು ಬೆಳ್ಳೂರು ಕ್ರಾಸ್’ನ ಮುಬಾರಕ್ ಎಂಬಾತನಿಗೆ ಮಾರಾಟ ಮಾಡಿದ್ದರು. ಮುಬಾರಕ್’ನನ್ನು ಕೂಡ ಬಂಧಿಸಿರುವ ಪೊಲೀಸರು ಆತ ಖರೀದಿಸಿದ್ದ ಮಗುವನ್ನು ರಕ್ಷಿಸಿದ್ದಾರೆ.
9 ಮಕ್ಕಳ ಮಾರಾಟ!: ಬಂಧಿತ ಆರೋಪಿಗಳ ಹೇಳಿಕೆ ಆದರಿಸಿ, ಆರೋಪಿಗಳು ಮಾರಾಟ ಮಾಡಿದ್ದ 09 ಮಕ್ಕಳ ಪೈಕಿ 05 ಮಕ್ಕಳನ್ನು ರಕ್ಷಿಸಿದ್ದು, ಒಂದು ಮಗು ಮೃತ ಪಟ್ಟಿದೆ. ಇನ್ನೊಂದು ಮಗುವನ್ನು ಪೋಷಕರಿಗೆ ಹಿಂದಿರುಗಿಸಲಾಗಿದೆ.
ತುಮಕೂರು: ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರರ ಹುದ್ದೆಗೆ ಅರ್ಜಿ ಆಹ್ವಾನ
ರಕ್ಷಿಸಿರುವ 05 ಮಕ್ಕಳ ಪೈಕಿ ಒಂದು ಮಗುವನ್ನು ಪೋಷಕರಿಗೆ ನೀಡಿದ್ದು, ಉಳಿದ 04 ಮಕ್ಕಳನ್ನು, ಮಕ್ಕಳ ಕಲ್ಯಾಣ ಸಮಿತಿಯ ಆದೇಶದಂತೆ ದತ್ತು ಸ್ವೀಕಾರ ಕೇಂದ್ರದಲ್ಲಿ ಇರಿಸಲಾಗಿದೆ.
ಕಾರು ವಶ: ಆರೋಪಿಗಳಿಂದ ಮಗುವನ್ನು ಅಪಹರಿಸಲು ಬಳಸಿದ್ದ ಮಾರುತಿ 800 ಕಾರು, ನಗದು ಹಣ 50,000 ಮತ್ತು 04 ಮೊಬೈಲ್’ಗಳನ್ನು ವಶಕ್ಕೆ ಪಡೆಯಲಾಗಿದೆ.
ಬಯಲಾಗಿದ್ದು ಹೇಗೆ?: ಜೂನ್ 9ರಂದು ರಾತ್ರಿ ವೇಳೆ ಗುಬ್ಬಿ ಪಟ್ಟಣದ ಚನ್ನಬಸವೇಶ್ವರ ದೇವಸ್ಥಾನದ ಬಳಿ ಮಹಾದೇವಿ ಕೋಂ ಮುಬಾರಕ್ ಅಂತಾಪುರ ಗುಬ್ಬಿ ತಾಲ್ಲೂಕು ಎಂಬುವರು ತನ್ನ ಕುಟುಂಬದೊಂದಿಗೆ ಮಲಗಿದ್ದರು. ಆಗ ಮಹಾದೇವಿ ಅವರ 11 ತಿಂಗಳ ರಾಕಿ ಎಂಬ ಗಂಡು ಮಗುವನ್ನು ಯಾರೋ ದುಷ್ಕರ್ಮಿಗಳು ಅಪಹರಿಸಿದ್ದರು. ಈ ಬಗ್ಗೆ ಜೂನ್ 10 ರಂದು ಗುಬ್ಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತುಮಕೂರು: ಅಟ್ಟಿಕಾ ಬಾಬು ಬಂಧನ: ಕೇಸ್ ಏನು ಗೊತ್ತೇ?
ಗಂಭೀರವಾಗಿ ಪರಿಗಣಿಸಿದ ಎಸ್.ಪಿ: ಮಗು ಅಪಹರಣ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್.ಪಿ ಅಶೋಕ್ ಕೆ.ವಿ ಅವರು, ರಾತ್ರಿ ವೇಳೆಯಲ್ಲಿ ಮಲಗಿದ್ದ 11 ತಿಂಗಳ ಮಗುವನ್ನು ವ್ಯವಸ್ಥಿತ ರೀತಿಯಲ್ಲಿ ಅಪಹರಿಸಿದ್ದ ತಂಡವನ್ನು ಪತ್ತೆ ಮಾಡಲು ತಂಡ ರಚಿಸಿದರು. ದೂರಿನ ಬೆನ್ನತ್ತಿದ ಪೊಲೀಸರು ಮಕ್ಕಳ ಕಳ್ಳರ ಜಾಲವನ್ನೇ ಪತ್ತೆ ಹಚ್ಚಿದ್ದು, ಕಳ್ಳರಿಂದ ಹಣಕ್ಕೆ ಮಾರಾಟವಾಗಿದ್ದ ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ.
ತನಿಖೆ ತಂಡದಲ್ಲಿ ಪೊಲೀಸ್ ಅಧೀಕ್ಷಕರುಗಳಾದ ವಿ.ಮರಿಯಪ್ಪ, ಅಬ್ದುಲ್ ಖಾದರ್ ನೇತೃತ್ವದಲ್ಲಿ ಸಿರಾ ಉಪವಿಭಾದ ಡಿ ವೈ ಎಸ್ ಪಿ ಬಿ.ಕೆ ಶೇಖರ್, ಗುಬ್ಬಿ ವೃತ್ತದ ಸಿ.ಪಿ.ಐ ಗೋಪಿನಾಥ್.ವಿ., ಗುಬ್ಬಿ ಪೊಲೀಸ್ ಠಾಣೆಯ ಪಿ.ಎಸ್.ಐ ಸುನೀಲ್ ಕುಮಾರ್.ಜಿ.ಕೆ ಸಿಬ್ಬಂದಿ ನವೀನ್ ಕುಮಾರ್, ವಿಜಯ್ ಕುಮಾರ್, ಮಧುಸೂಧನ್ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ನರಸಿಂಹರಾಜು ಮತ್ತು ದುಶ್ಯಂತ್’ ಈ ವಿಶೇಷ ತಂಡದಲ್ಲಿದ್ದರು.
+ There are no comments
Add yours