ಅಟ್ಟಿಕಾ ಬಾಬು ಬಂಧನ: ಕೇಸ್ ಏನು ಗೊತ್ತೇ?
Tumkurnews
ತುಮಕೂರು: ಕದ್ದ ಮಾಲುಗಳನ್ನು ಖರೀದಿ ಮಾಡಿದ ಆರೋಪದ ಮೇಲೆ ಅಟ್ಟಿಕಾ ಗೋಲ್ಡ್ ಕಂಪನಿ ಮಾಲೀಕ ಅಟ್ಟಿಕಾ ಬಾಬುನನ್ನು ಪೊಲೀಸರು ಬಂಧಿಸಿದ್ದಾರೆ.
ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ವೃತ್ತ ನಿರೀಕ್ಷಕ ಲೋಹಿತ್ ಬಿ.ಎನ್ ಮತ್ತು ಸಿಬ್ಬಂದಿ ಹಾಗೂ ಕುಣಿಗಲ್ ಡಿಎಸ್ಪಿ ತಂಡ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಅಟ್ಟಿಕಾ ಗೋಲ್ಡ್ ಕಂಪನಿ ನಿರ್ದೇಶಕ ಬಾಬು ಅಲಿಯಾಸ್ ಪಿ.ಎಸ್ ಅಯ್ಯೂಬ್ ಬಿನ್ ಸೈಯದ್ ಬಾಷಾ(44)ನನ್ನು ಬೆಂಗಳೂರಿನ ಪ್ರೆಜರ್ ಟೌನ್ ಅಪಾರ್ಟ್ಮೆಂಟ್’ನಿಂದ ತುರುವೇಕೆರೆ ಪೊಲೀಸರು ಬಂಧಿಸಿದ್ದಾರೆ.
ಅಟ್ಟಿಕಾ ಬಾಬು, ಕಳ್ಳತನದ ಚಿನ್ನಾಭರಣಗಳನ್ನು ಖರೀದಿ ಮಾಡುತ್ತಿದ್ದರು ಎಂದು ಆರೋಪಿಸಲಾಗಿದ್ದು, ಪೊಲೀಸರು ಬಂಧಿಸಿದ್ದಾರೆ.
+ There are no comments
Add yours