ವಿ.ಸೋಮಣ್ಣ ತಮ್ಮ ಗೆಲುವನ್ನು ಅರ್ಪಿಸಿದ್ದು ಯಾರಿಗೆ? ಜೆಡಿಎಸ್ ಬಗ್ಗೆ ಏನಂದ್ರು?
Tumkurnews
ತುಮಕೂರು: ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆ ನೂತನ ಸಂಸದರಾಗಿ ಆಯ್ಕೆಯಾದ ವಿ.ಸೋಮಣ್ಣ ತಮ್ಮ ಗೆಲುವಿಗಾಗಿ ಶ್ರಮಿಸಿದವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರು ಲೋಕಸಭಾ ಕ್ಷೇತ್ರದ ಜನತೆಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಈ ಗೆಲುವನ್ನು ದೇವೇಗೌಡರು ಹಾಗೂ ಪ್ರಧಾನಿ ಮೋದಿ ಅವರಿಗೆ ಸಲ್ಲಿಸುತ್ತೇನೆ. ಎರಡು ಬಾರಿ ಸೋತ ನನಗೆ ಅಮಿತ್ ಶಾ ಅವಕಾಶ ಕೊಟ್ಟರು. ಯಡಿಯೂರಪ್ಪರಿಗೂ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದರು.
ವಿ.ಸೋಮಣ್ಣಗೆ ಯಾವ ಕ್ಷೇತ್ರದಲ್ಲಿ ಎಷ್ಟು ಲೀಡ್? ಇಲ್ಲಿದೆ ಮಾಹಿತಿ
ನನ್ನ ಆರಾಧ್ಯ ದೈವ ಶಿವಕುಮಾರ ಶ್ರೀಗಳು ಹಾಗೂ ಚುಂಚನಗಿರಿ ಶ್ರೀಗಳ ಆಶೀರ್ವಾದದಿಂದ ಮತ್ತೆ ಜನರ ಸೇವೆ ಮಾಡಲು ಅವಕಾಶ ಸಿಕ್ಕಿದೆ. ದೇಶದ ವ್ಯವಸ್ಥೆಯಲ್ಲಿ ಜನಪರ ಕಾರ್ಯಕ್ರಮದಿಂದ ನಾವೆಲ್ಲ ಗೆದ್ದಿದ್ದೇವೆ. ನನಗೆ ಹೊರಗಿನ ಅಭ್ಯರ್ಥಿ ಎಂದು ಪದೇಪದೇ ಎಚ್ಚರಿಕೆ ಕೊಡುತ್ತಿದ್ದರು. ಅದನ್ನು ಎಚ್ಚರಿಕೆ ಗಂಟೆ ಎಂದು ಭಾವಿಸಿ ಹೆಚ್ಚಿಗೆ ದುಡಿದೆ. ಹಾಗಾಗಿ ಗೆಲುವು ಸಾಧಿಸಿದ್ದೇನೆ ಎಂದು ತಿಳಿಸಿದರು.
ವಿ.ಸೋಮಣ್ಣಗೆ ವೀರೋಚಿತ ಗೆಲುವು: ವಲಸೆ ಹಕ್ಕಿಗೆ ನೆಲೆ ಕಲ್ಪಿಸಿದ ತುಮಕೂರು!
ಜೆಡಿಎಸ್’ಗೆ ಧನ್ಯವಾದಗಳು:
ಜೆಡಿಎಸ್ ಮತ್ತು ಬಿಜೆಪಿಯ ಎಲ್ಲಾ ಕಾರ್ಯಕರ್ತರು ಮುಖಂಡರಿಗೆ ಧನ್ಯವಾದ ಸಲ್ಲಿಸುತ್ತೇನೆ. ಕುಮಾರಸ್ವಾಮಿ ಅವರು ಮಂತ್ರಿ ಆಗಲಿ ಅನ್ನೋದು ನನ್ನ ಬಯಕೆ ಎಂದರು.
+ There are no comments
Add yours