ತುಮಕೂರು ಲೋಕಸಭೆ: ವಿ.ಸೋಮಣ್ಣಗೆ ವೀರೋಚಿತ ಗೆಲುವು
Tumkurnews
ತುಮಕೂರು: ಲೋಕಸಭೆ ಸದಸ್ಯರಾಗಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದ್ದು, ಅಧಿಕೃತ ಘೋಷಣೆ ಬಾಕಿ ಇದೆ.
ಮಂಗಳವಾರ ನಡೆದ ಮತ ಎಣಿಕೆಯಲ್ಲಿ ಮೊದಲ ಸುತ್ತಿನಿಂದಲೂ ಕೊನೆಯ ಸುತ್ತಿನವರೆಗೂ ವಿ.ಸೋಮಣ್ಣ ಮುನ್ನಡೆ ಕಾಯ್ದುಕೊಂಡು ಬಂದರು. ಕೊನೆಯ 19ನೇ ಸುತ್ತಿನ ಎಣಿಕೆಯಲ್ಲಿ ವಿ.ಸೋಮಣ್ಣ 1,33,020 ಮತಗಳ ಮುನ್ನಡೆ ಮೂಲಕ ಗೆಲುವಿನ ದಡ ಸೇರಿದರು.
18ನೇ ಸುತ್ತಿನ ಮತ ಎಣಿಕೆ ವೇಳೆಗೆ ವಿ.ಸೋಮಣ್ಣ 5,55,527 ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ ಮುದ್ದಹನುಮೇಗೌಡ ಅವರು 4,30,504 ಮತಗಳನ್ನು ಪಡೆದಿದ್ದರು. ವಿ.ಸೋಮಣ್ಣ 1,25,023 ಮತಗಳ ಮುನ್ನಡೆ ಸಾಧಿಸಿದ್ದರು.
ತುಮಕೂರು ಲೋಕಸಭೆ: ವಿ.ಸೋಮಣ್ಣ ಮುನ್ನಡೆ
ವಲಸೆ ಹಕ್ಕಿಗೆ ನೆಲೆ ಕಲ್ಪಿಸಿದ ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ವಲಸೆ ಬಂದು ಸ್ಫರ್ಧೆ ಮಾಡಿದವರು ಗೆಲುವು ಸಾಧಿಸುವುದಿಲ್ಲ ಎಂಬ ಮಾತನ್ನು ವಿ.ಸೋಮಣ್ಣ ಸುಳ್ಳಾಗಿಸಿದರು. ತುಮಕೂರು ಲೋಕಸಭೆ ಈ ಹಿಂದೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಸೋಲಿಗೆ ಸಾಕ್ಷಿಯಾಗಿತ್ತು. ಈ ಬಾರಿ ಬೆಂಗಳೂರಿನಿಂದ ವಲಸೆ ಬಂದು ಸ್ಪರ್ಧೆ ಮಾಡಿದ ವಿ.ಸೋಮಣ್ಣ ವೀರೋಚಿತ ಗೆಲುವು ಸಾಧಿಸಿದ್ದಾರೆ.
ತುಮಕೂರು: ಒಂದು ಲಕ್ಷ ಮತಗಳ ಮುನ್ನಡೆ ಸಾಧಿಸಿದ ವಿ.ಸೋಮಣ್ಣ! ಗೆಲುವಿನ ಸನಿಹಕ್ಕೆ ಕಮಲ
+ There are no comments
Add yours