ತುಮಕೂರು: ಮಳೆ ಹಾನಿ: ಸಹಾಯವಾಣಿ ಸ್ಥಾಪನೆ

1 min read

ಮಳೆ ಹಾನಿ: ಸಹಾಯವಾಣಿ ಸ್ಥಾಪನೆ

Tumkurnews
ತುಮಕೂರು: ಮುಂದಿನ ದಿನಗಳಲ್ಲಿ ಮಳೆಯಿಂದಾಗಿ ಯಾವುದೇ ತೊಂದರೆಯುಂಟಾದಲ್ಲಿ ತುಮಕೂರು ಮಹಾನಗರ ಪಾಲಿಕೆಯ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ: 9449872599ಕ್ಕೆ ಕರೆ ಮಾಡಿ ದೂರು ದಾಖಲಿಸಬಹುದು ಎಂದು ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ತಿಳಿಸಿದ್ದಾರೆ.

ತುಮಕೂರು KSRTC ಹೊಸ ಬಸ್ ನಿಲ್ದಾಣ: ಕಾರ್ಯಾರಂಭಕ್ಕೂ ಮುನ್ನವೇ ಮಳೆ ನೀರು ಸೋರಿಕೆ! ವಿಡಿಯೋ
ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ಉಪ್ಪಾರಹಳ್ಳಿ, ಅಂತರಸನಹಳ್ಳಿ, ದಿಬ್ಬೂರು, ಸದಾಶಿವನಗರ, ಅಮಾನಿಕೆರೆ ಕೋಡಿಹಳ್ಳ, ಶೆಟ್ಟಿಹಳ್ಳಿ, ಶಾಂತಿನಗರ ಹಾಗೂ ಎಲ್ಲಾ ಅಂಡರ್ ಪಾಸ್‍ಗಳು ಮತ್ತು ಇತರೆ ಸ್ಥಳಗಳಲ್ಲಿ ಮಳೆಯಿಂದಾಗಿ ಉಂಟಾದ ಪ್ರವಾಹ, ಹಾನಿಗಳಿಗೆ ಸಂಬಂಧಿಸಿದಂತೆ ಸ್ಥಳೀಯ ಸಾರ್ವಜನಿಕರಿಂದ ಬಂದ ದೂರುಗಳ ಬಗ್ಗೆ ಕ್ರಮಕೈಗೊಂಡು ಪಾಲಿಕೆ ಸಿಬ್ಬಂದಿ, ಜೆಸಿಬಿ, ಜಟ್ಟಿಂಗ್ ಮತ್ತು ಸಕ್ಕಿಂಗ್ ಯತ್ರೋಪಕರಣಗಳಿಂದ ಸಮಸ್ಯೆಗಳನ್ನು ಪರಿಹರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ರಸ್ತೆ ಕುಸಿತ: ಸ್ಥಳಕ್ಕೆ ಶಾಸಕ ಜ್ಯೋತಿಗಣೇಶ್ ಭೇಟಿ: ಸ್ಥಳೀಯರಿಗೆ ಎಚ್ಚರಿಕೆ

 

About The Author

You May Also Like

More From Author

+ There are no comments

Add yours