ವಿಕಲಚೇತನರ ಹಾಗೂ ಹಿರಿಯನಾಗರಿಕರ ಸಬಲೀಕರಣ ಇಲಾಖೆ; ಅರ್ಜಿ ಆಹ್ವಾನ

1 min read

 

ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ

Tumkurnews.in
ತುಮಕೂರು: ವಿಕಲಚೇತನರ ಹಾಗೂ ಹಿರಿಯನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ವಿಕಲಚೇತನರ ಪುನರ್ವಸತಿ ಯೋಜನೆಯಡಿ ತುಮಕೂರು ತಾಲ್ಲೂಕಿನ ಹೊಳಕಲ್ಲು, ಹೊನ್ನುಡಿಕೆ, ಹಿರೇಹಳ್ಳಿ, ಸೀತಕಲ್ಲು ಮತ್ತು ನೆಲಹಾಳ್ ಈ ಐದು ಗ್ರಾಮ ಪಂಚಾಯಿತಿಗಳು ಹಾಗೂ ತುರುವೇಕೆರೆ ತಾಲ್ಲೂಕಿನ ತಂಡಗ, ಭೈತರಹೊಸಹಳ್ಳಿ, ತಾಳೆಕೆರೆ, ಉಲ್ಲೇಕೆರೆ ಮತ್ತು ಆನೇಕೆರೆ ಸೇರಿದಂತೆ 10 ಗ್ರಾಮ ಪಂಚಾಯಿತಿಗಳಲ್ಲಿ ಖಾಲಿಯಿರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ತಾತ್ಕಾಲಿಕ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ತುಮಕೂರು; ಜಿಲ್ಲೆಯ ನ್ಯಾಯಾಲಯಗಳಲ್ಲಿ ಉದ್ಯೋಗ; ಅರ್ಜಿ ಆಹ್ವಾನ
ಮಾಸಿಕ ರೂ.9000 ಗಳ ಗೌರವಧನ ಆಧಾರದಲ್ಲಿ ಭರ್ತಿ ಮಾಡಿಕೊಳ್ಳಲಾಗುವುದು. ಸದರಿ ಹುದ್ದೆಗೆ ಶೇ.40ರ ಮೇಲ್ಪಟ್ಟು ಪ್ರಮಾಣವಿರುವ ವಿಕಲಚೇತನ ಅಭ್ಯರ್ಥಿಗಳು, ಎಸ್.ಎಸ್.ಎಲ್.ಸಿ ಉತ್ತೀರ್ಣ 18-45 ವರ್ಷದೊಳಗಿನ ಹಾಗೂ ಅದೇ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ವಾಸವಿರುವ ಮತ್ತು ಕಡ್ಡಾಯವಾಗಿ ವಿಕಲಚೇತನರ ವಿಶಿಷ್ಠ ಗುರುತಿನ ಚೀಟಿ (ಯು.ಡಿ.ಐ.ಡಿ) ಹೊಂದಿರುವ ವಿಕಲಚೇತನ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಹೆಣ್ಣಿನ ಧ್ವನಿ ಬಳಸಿ 41 ಲಕ್ಷ ಸುಲಿಗೆ! ತುಮಕೂರು ಮೂಲದ ಯುವಕ ಬಂಧನ
ಆಸಕ್ತರು ಅರ್ಜಿ ನಮೂನೆಯನ್ನು ತಾಲ್ಲೂಕು ಪಂಚಾಯಿತಿ ಕಾರ್ಯಾಲಯ ತುರುವೇಕೆರೆ ಮತ್ತು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯನಾಗರಿಕರ ಕಲ್ಯಾಣಾಧಿಕಾರಿಗಳ ಕಚೇರಿ, ಎಂ.ಜಿ.ರಸ್ತೆ, ಜಿಲ್ಲಾ ಬಾಲಭವನ ಆವರಣ, ತುಮಕೂರು ಇಲ್ಲಿ ಪಡೆದು ಅವಶ್ಯಕ ದಾಖಲಾತಿಗಳೊಂದಿಗೆ ಆಗಸ್ಟ್ 19ರೊಳಗಾಗಿ ಸಲ್ಲಿಸತಕ್ಕದ್ದು. ಹೆಚ್ಚಿನ ಮಾಹಿತಿಗೆ ತಾಲ್ಲೂಕು ಎಂ.ಆರ್.ಡಬ್ಲ್ಯೂ ರವರ ದೂರವಾಣಿ 8073752073 ಮತ್ತು 9741572446ನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.

ನಿನ್ನೆ ಅಪ್ಪಚ್ಚು ರಂಜನ್ ಗನ್ ಮ್ಯಾನ್, ಇಂದು ವಿಜಯ ರಾಘವೇಂದ್ರ ಪತ್ನಿ; ಇಬ್ಬರ ಸಾವಿಗೂ ಒಂದೇ ಕಾರಣ!

About The Author

You May Also Like

More From Author

+ There are no comments

Add yours