ನಿನ್ನೆ ಅಪ್ಪಚ್ಚು ರಂಜನ್ ಗನ್ ಮ್ಯಾನ್, ಇಂದು ವಿಜಯ ರಾಘವೇಂದ್ರ ಪತ್ನಿ; ಇಬ್ಬರ ಸಾವಿಗೂ ಒಂದೇ ಕಾರಣ!

1 min read

ನಿನ್ನೆ ಅಪ್ಪಚ್ಚು ರಂಜನ್ ಗನ್ ಮ್ಯಾನ್, ಇಂದು ವಿಜಯ ರಾಘವೇಂದ್ರ ಪತ್ನಿ; ಇಬ್ಬರ ಸಾವಿಗೂ ಒಂದೇ ಕಾರಣ!

Tumkurnews.in
ಬೆಂಗಳೂರು/ಮಡಿಕೇರಿ; ಸ್ಯಾಂಡಲ್’ವುಡ್ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ
ಸೋಮವಾರ ನಿಧನರಾಗಿದ್ದು, ಅವರ ಹಠಾತ್ ನಿಧನಕ್ಕೆ ಲೋ ಬಿ.ಪಿ ಕಾರಣವೆಂದು ಹೇಳಲಾಗುತ್ತಿದೆ.
ಕಳೆದ ಮೂರು ದಿನಗಳ ಹಿಂದಷ್ಟೇ ಸ್ನೇಹಿತರೊಂದಿಗೆ ಬ್ಯಾಂಕಾಕ್’ಗೆ ತೆರಳಿದ್ದ ಅವರು ಭಾನುವಾರ ರಾತ್ರಿ ಮಲಗಿದ್ದ ಸ್ಥಿತಿಯಲ್ಲೇ ಕೊನೆಯುಸಿರೆಳೆದಿದ್ದಾರೆ. ಸೋಮವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ.

ಸ್ಯಾಂಡಲ್’ವುಡ್ ನಟ ವಿಜಯ ರಾಘವೇಂದ್ರ ಪತ್ನಿ ನಿಧನ
ಲೋ ಬಿ.ಪಿ ಕಾರಣ?; ಸ್ಪಂದನ ಅವರ ದಿಢೀರ್‌ ನಿಧನಕ್ಕೆ ಲೋ ಬಿ.ಪಿ ಕಾರಣವೆಂದು ತಿಳಿದು ಬಂದಿದೆ. ಸ್ಪಂದನ ಪತಿ ವಿಜಯ ರಾಘವೇಂದ್ರ ಅವರ ಸಹೋದರ ನಟ ಶ್ರೀಮುರುಳಿ ಈ ಕುರಿತಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ನಿನ್ನೆ ಲೋಕೇಶ್ ಸಾವು; ಮಡಿಕೇರಿ ಮಾಜಿ ಶಾಸಕ ಅಪ್ಪಚ್ಚು ರಂಜನ್ ಅವರ ಗನ್ ಮ್ಯಾನ್ ಲೋಕೇಶ್ (40) ಒಂದು ದಿನದ ಹಿಂದಷ್ಟೇ ಸಾವನ್ನಪ್ಪಿದ್ದು, ಅವರ ಸಾವು ಕೂಡ ಲೋ ಬಿ.ಪಿ ಯಿಂದಲೇ ಸಂಭವಿಸಿದೆ.

ವಿಜಯ ರಾಘವೇಂದ್ರ ಪತ್ನಿ ಯಾರ ಮಗಳು? ನಿಧನಕ್ಕೆ ಕಾರಣವೇನು?
ಕುಶಾಲನಗರ ತಾಲ್ಲೂಕು ಸುಂಟಿಕೊಪ್ಪ ಸಮೀಪದ ಕಾನ್ ಬೈಲ್’ನಲ್ಲಿ ಲೋಕೇಶ್ ಅವರು ತಮ್ಮ ಮನೆಯ ಸಮೀಪದ ತೋಟದಲ್ಲಿ ಮಾವಿನ ಮರ ಹತ್ತಿ ಕಸಿ ಮಾಡುತ್ತಿದ್ದರು. ಮರದ ತುದಿಗೆ ಏರಿದಾಗ ಲೋಕೇಶ್’ಗೆ ಬಿ.ಪಿ ಲೋ ಆಗಿದ್ದು, ಮರದಿಂದ ಕೆಳಗೆ ಬಿದ್ದಿದ್ದಾರೆ. ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯದಲ್ಲಿ ಕೊನೆಯುಸಿರೆಳೆದರು. ಈ ಘಟನೆ ಮರೆಯುವ ಮುನ್ನವೇ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಲೋ ಬಿ.ಪಿಗೆ ಬಲಿಯಾಗಿದ್ದಾರೆ ಎನ್ನುವುದು ಜನರಲ್ಲಿ ಲೋ ಬಿ.ಪಿ ಬಗ್ಗೆ ಭಯ ಹುಟ್ಟಿಸಿದೆ.

(ಚಿತ್ರ; ಎಡದಿಂದ ವಿಜಯ ರಾಘವೇಂದ್ರ, ಪತ್ನಿ ಸ್ಪಂದನ, ಲೋಕೇಶ್)

ಹೆಣ್ಣಿನ ಧ್ವನಿ ಬಳಸಿ 41 ಲಕ್ಷ ಸುಲಿಗೆ! ತುಮಕೂರು ಮೂಲದ ಯುವಕ ಬಂಧನ

About The Author

You May Also Like

More From Author

+ There are no comments

Add yours