ಟಾಟಾ ಐಪಿಎಲ್: ಉಚಿತ ವೀಕ್ಷಣೆಗೆ ಅವಕಾಶ

ಟಾಟಾ ಐಪಿಎಲ್: ಉಚಿತ ವೀಕ್ಷಣೆಗೆ ಅವಕಾಶ ಆರಂಭಿಕ ಎರಡು ಮ್ಯಾಚ್‌ಗಳ ನೇರ ಪ್ರಸಾರ: ಬಿಸಿಸಿಐನ ಅಲ್ಪಿನ್ ಗಾಯಕವಾಡ್ ಹೇಳಿಕೆ Tumkur news ತುಮಕೂರು: ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಬಿಸಿಸಿಐ ವತಿಯಿಂದ ಟಾಟಾ ಐಪಿಎಲ್ 2026ರ ಆರಂಭಿಕ ಎರಡು ಮ್ಯಾಚ್‌ಗಳ ನೇರ ಪ್ರಸಾರವನ್ನು ಉಚಿತವಾಗಿ ದೊಡ್ಡ ಪರದೆಯ ಮೇಲೆ ಆಯೋಜಿಸಲಾಗಿದೆ ಎಂದು ಬಿಸಿಸಿಐನ ಅಲ್ಪಿನ್ ಗಾಯಕವಾಡ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಟಾಟಾ ಐಪಿಎಲ್ ಪ್ಯಾನ್ ಪಾರ್ಕು ಆಯೋಜಿಸಿರುವ ಈ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಮಾರ್ಚ್ 28 […]

Continue Reading

ಸಿದ್ಧಗಂಗಾ ಮಠವೂ ಸೇರಿದಂತೆ ಕುಡಿಯುವ ನೀರಿನ ಎಲ್ಲ ಯೋಜನೆಗಳ ವಿದ್ಯುತ್‌ ಬಿಲ್‌ ಪಾವತಿಗೆ ಕ್ರಮ

ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಬಿ. ಸುರೇಶ್‌ ಗೌಡರ ಪ್ರಶ್ನೆಗೆ ಸರ್ಕಾರದ ಉತ್ತರ ಸಿದ್ಧಗಂಗಾ ಮಠವೂ ಸೇರಿದಂತೆ ಕುಡಿಯುವ ನೀರಿನ ಎಲ್ಲ ಯೋಜನೆಗಳ ವಿದ್ಯುತ್‌ ಬಿಲ್‌ ಪಾವತಿಗೆ ಕ್ರಮ Tumkur news ಬೆಂಗಳೂರು: ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೆಬ್ಬೂರು-ಗೂಳೂರು, ಬೆಳ್ಳಾವಿ ಏತ ನೀರಾವರಿ ಯೋಜನೆ, ಸಿದ್ಧಗಂಗಾ ಮಠಕ್ಕೆ ನೀರು ಪೂರೈಸುವ ಮತ್ತು ದೇವರಾಯಪಟ್ಟಣ ಏತ ನೀರಾವರಿ ಯೋಜನೆಗಳ ವಿದ್ಯುತ್‌ ಬಿಲ್‌ ಬಾಕಿ ಪಾವತಿ ಮಾಡಿ ಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ಅಡಚಣೆ ಇಲ್ಲದಂತೆ ಸರ್ಕಾರ ಕ್ರಮ […]

Continue Reading

ತುಮಕೂರಿನಲ್ಲೇ ಕೆಲಸ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ತುಮಕೂರಿನಲ್ಲೇ ಕೆಲಸ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ Tumkur news ತುಮಕೂರು: ಹಿರೇಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಖಾಲಿಯಿರುವ ಕಚೇರಿ ಸಹಾಯಕ, ಅಟೆಂಡರ್ ಹಾಗೂ ವಾಚ್‌ಮನ್, ಗಾರ್ಡನರ್ ಹುದ್ದೆಗಳನ್ನು ಹೊರ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಕಚೇರಿ ಸಹಾಯಕ ಹುದ್ದೆಗೆ BSW/BA/B.Com ಪದವಿ ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಮೂಲ ಲೆಕ್ಕ ನಿರ್ವಹಣೆ ಮಾಡುವ ಅರ್ಹತೆ ಹೊಂದಿದ್ದು, ಸ್ಥಳೀಯ ಭಾಷೆಯನ್ನು ಅಡೆತಡೆಯಿಲ್ಲದೆ […]

Continue Reading

ತುಮಕೂರು: ಜಿಲ್ಲಾ ಮಟ್ಟದ ಬೃಹತ್ ಜನತಾ ದರ್ಶನ: ಜಿಲ್ಲಾಧಿಕಾರಿ

ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ “ಜಿಲ್ಲಾ ಮಟ್ಟದ ಬೃಹತ್ ಜನತಾ ದರ್ಶನ”: ಜಿಲ್ಲಾಧಿಕಾರಿ Tumkur news ತುಮಕೂರು: ಜಿಲ್ಲೆಯ ನಾಗರಿಕರಿಂದ ಅಹವಾಲುಗಳನ್ನು ಸ್ವೀಕರಿಸಿ, ಸಮಸ್ಯೆಗಳನ್ನು ಆಲಿಸಿ ಸಮಸ್ಯೆಗಳಿಗೆ ಪರಿಹಾರೋಪಾಯವನ್ನು ಒದಗಿಸಲು ಏಪ್ರಿಲ್ 4ರಂದು ಬೆಳಿಗ್ಗೆ 11 ಗಂಟೆಗೆ ತುಮಕೂರು ನಗರದಲ್ಲಿ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಅವರ ಅಧ್ಯಕ್ಷತೆಯಲ್ಲಿ “ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮ”ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ. ಈಗಾಗಲೇ ತುಮಕೂರು ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ […]

Continue Reading

ಶ್ರೀ ಕೆಂಪಮ್ಮದೇವಿ ರಥೋತ್ಸವ

ಶ್ರೀ ಕೆಂಪಮ್ಮದೇವಿ ರಥೋತ್ಸವ Tumkur news ತುರುವೇಕೆರೆ: ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಗೆ ಸೇರಿದ ಕಾಡಸೂರು ಶ್ರೀ ಕೆಂಪಮ್ಮದೇವಿ ರಥೋತ್ಸವವು ಏಪ್ರಿಲ್ 11 ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ಇದರ ಅಂಗವಾಗಿ ಏ.10 ರಂದು ಬೆಳಗ್ಗೆ 9 ರಿಂದ 10 ಗಂಟೆಯವರೆಗೆ ಧ್ವಜಾರೋಹಣ, ದೇವಿಗೆ ಅಭಿಷೇಕ, ನವಗ್ರಹ ಪೂಜೆ, ಸಹಸ್ರನಾಮ, ಕುಂಕುಮಾರ್ಚನೆ, ಪೂಜಾ ಕಾರ್ಯಕ್ರಮ, ಮಹಾಮಂಗಳಾರತಿ ನಡೆಯಲಿದೆ. ಏ.11 ರಂದು ಬೆಳಗ್ಗೆ ದೇವಿ ಸುಪ್ರಭಾತ ಸೇವೆ, ಮಧ್ಯಾಹ್ನ 12.30ಕ್ಕೆ ಭಕ್ತಾದಿಗಳಿಂದ ಅನ್ನಸಂತರ್ಪಣೆ ಮಧ್ಯಾಹ್ಮ 3 ಗಂಟೆಗೆ ಕೆಂಪಮ್ಮದೇವಿ […]

Continue Reading

ತುಮಕೂರು: ಆಸ್ತಿ ಮಾಲೀಕರಿಗೆ ‘ಶುಭ’ ಸುದ್ದಿ

ತುಮಕೂರು: ಆಸ್ತಿ ಮಾಲೀಕರಿಗೆ ‘ಶುಭ’ ಸುದ್ದಿ Tumkur News ತುಮಕೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಆಸ್ತಿ ಮಾಲೀಕರು ಪ್ರಸಕ್ತ 2026-27ನೇ ಸಾಲಿನ ಆಸ್ತಿ ತೆರಿಗೆಯನ್ನು 2026ರ ಏಪ್ರಿಲ್ ತಿಂಗಳ ಅಂತ್ಯದೊಳಗೆ ಪಾವತಿಸಿದಲ್ಲಿ ಆಸ್ತಿ ತೆರಿಗೆಯ ಮೇಲೆ ಶೇ.5ರಷ್ಟು ರಿಯಾಯತಿ ನೀಡಲಾಗುವುದು ಎಂದು ಪಾಲಿಕೆ ಆಯುಕ್ತೆ ಶುಭ ಬಿ. ತಿಳಿಸಿದ್ದಾರೆ. ಆಸ್ತಿ ಮಾಲೀಕರು ಆಸ್ತಿ ತೆರಿಗೆ, ನೀರಿನ ಶುಲ್ಕ ಮತ್ತು ಯು.ಜಿ.ಡಿ. ಶುಲ್ಕವನ್ನು ಏಪ್ರಿಲ್ 30ರೊಳಗಾಗಿ ನಗದು ಪಾವತಿ ಕೌಂಟರ್’ಗಳ ಮೂಲಕ, ಕರ್ನಾಟಕ ಒನ್ ಕೇಂದ್ರ, ಆನ್‍ಲೈನ್ www.tumakurucity.mrc.gov.in […]

Continue Reading