ಗುಬ್ಬಿ ಶಾಸಕ ಶ್ರೀನಿವಾಸ್ ಖಾಲಿ ಮತಪತ್ರವನ್ನು ಮತಪೆಟ್ಟಿಗೆ ಹಾಕಿದ್ದಾರೆ; ಎಚ್ಡಿಕೆ ಆರೋಪ

1 min read

Tumkur News
ಬೆಂಗಳೂರು: ಗುಬ್ಬಿ ಶಾಸಕ ಶ್ರೀನಿವಾಸ್ ಖಾಲಿ ಮತಪತ್ರವನ್ನು ಮತಪೆಟ್ಟಿಗೆ ಹಾಕಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಆರೋಪಿಸಿದರು.

ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಸಭಾ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆಗೆ ಒಳಗಾದ ಗುಬ್ಬಿ ಶಾಸಕ ಶ್ರೀನಿವಾಸ್ ಯಾರಿಗೂ ಮತ ಹಾಕದೆ ಖಾಲಿ  ಮತಪತ್ರವನ್ನು ಪೆಟ್ಟಿಗೆಗೆ ಹಾಕಿದ್ದಾರೆ ಎಂದು ಹೇಳಿದರು.

ಇಂದು ಸಂಜೆ ಅವರ ಬಣ್ಣ ಬಯಲಾಗುತ್ತದೆ. ಅವರನ್ನು ಮಂತ್ರಿ ಮಾಡಿದ್ದೇ ನಾನು, ಅದು ನಾನು ಮಾಡಿದ ತಪ್ಪು. ನನ್ನಿಂದ ಯಾರಿಗೂ ಕೂಡ ಅನ್ಯಾಯವಾಗಿಲ್ಲ. ಖಾಲಿ ಮತಪತ್ರವನ್ನು ಮತಪೆಟ್ಟಿಗೆಗೆ ಹಾಕಿ ಸಾರ್ವಜನಿಕರ ಮುಂದೆ ಜೆಡಿಎಸ್ ಗೆ ಮತ ಚಲಾಯಿಸಿದ್ದೇನೆ ಎಂದು ಸುಳ್ಳು ಹೇಳಿದ್ದಾರೆ ಎಂದು ಕಿಡಿಕಾರಿದರು.

About The Author

You May Also Like

More From Author

+ There are no comments

Add yours