ಕರ್ನಾಟಕ ಬಂದ್: ತುಮಕೂರು ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ

1 min read

ಕರ್ನಾಟಕ ಬಂದ್: ತುಮಕೂರು ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ

Tumkurnews
ತುಮಕೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ಶುಕ್ರವಾರ ಕರೆ ನೀಡಿದ್ದ ಕರ್ನಾಟಕ ಬಂದ್’ಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ತುಮಕೂರು ನಗರದಲ್ಲಿ ಬೆಳಗ್ಗಿನಿಂದಲೂ ಅಗತ್ಯ ವಸ್ತುಗಳ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ವ್ಯಾಪಾರ ಚಟುವಟಿಕೆಗಳನ್ನು ಬಂದ್ ಮಾಡುವ ಮೂಲಕ ವರ್ತಕರು ಬಂದ್ ಬೆಂಬಲಿಸಿದರು.

ಕರ್ನಾಟಕ ಬಂದ್’ಗೆ ತುಮಕೂರಿನಲ್ಲಿ ಯಾರ್ಯಾರ ಬೆಂಬಲ?: ಹೇಗಿರುತ್ತೆ ಬಂದ್? ಇಲ್ಲಿದೆ ಮಾಹಿತಿ
ಮುಂಜಾನೆ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಆರಂಭವಾಯಿತಾದರೂ ಪ್ರಯಾಣಿಕರ ಕೊರತೆಯಿಂದಾಗಿ ಬೆಳಗ್ಗೆ 11 ಗಂಟೆ ವೇಳೆಗೆ ನಗರದಲ್ಲಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ನಗರದಲ್ಲಿ ಸಂಚರಿಸುವ ಬಸ್’ಗಳು ನಿಲ್ದಾಣದಲ್ಲಿ ಬೀಡು ಬಿಟ್ಟವು. ಹೊರ ಜಿಲ್ಲೆಗಳಿಗೆ ಸಂಚರಿಸುವ ಬಸ್’ಗಳು ಬೆರಳೆಣಿಕೆಯಷ್ಟು ಕಂಡು ಬಂದವು. ಖಾಸಗಿ ಬಸ್ ಮಾಲೀಕರು ಸಂಚಾರ ಸ್ಥಗಿತಗೊಳಿಸಿ ಬಂದ್ ಬೆಂಬಲಿಸಿದ್ದರು.
ಗ್ರಾಮೀಣ ಪ್ರದೇಶಗಳಿಗೆ ಬೆಳಗ್ಗೆ ಬಸ್’ಗಳು ಹೊರಡದ ಕಾರಣ ಶಾಲಾಕಾಲೇಜು ವಿದ್ಯಾರ್ಥಿಗಳು ತರಗತಿಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಉಳಿದಂತೆ ಯಾವುದೇ ಅಹಿತಕರ ಘಟನೆಗಳು ನಡೆಯದೆ ಕಾವೇರಿ ಹೋರಾಟಕ್ಕೆ ಜಿಲ್ಲೆಯ ಜನತೆ ಪೂರಕವಾಗಿ ಸ್ಪಂದಿಸಿದ್ದು ಕಂಡು ಬಂದಿತು.

ಸೆ.29 ವಿಶ್ವ ಹೃದಯ ದಿನ: ಐಎಂಎಯಿಂದ ‘ಹೃದಯ ಬಳಸಿ, ಹೃದಯವನ್ನು ತಿಳಿಯಿರಿ’ ಅರಿವು ಕಾರ್ಯಕ್ರಮ
ಪ್ರತಿಭಟನೆ: ಬಂದ್ ಕರೆ ನೀಡಿದ್ದ ಕನ್ನಡ ಪರ ಸಂಘಟನೆಗಳು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸದಂತೆ ಒತ್ತಾಯಿಸಿದರು.

About The Author

You May Also Like

More From Author

+ There are no comments

Add yours