ವಾಣಿ ವಿಲಾಸ; ಅಣೆಕಟ್ಟು ಅಭಿವೃದ್ಧಿಗೆ 720 ಕೋಟಿ ಹಣ ಬಿಡುಗಡೆ

1 min read

ವಾಣಿ ವಿಲಾಸ ಸಾಗರ ಜಲಾಶಯದ ಅಣೆಕಟ್ಟು ಅಭಿವೃದ್ಧಿಗೆ 720 ಕೋಟಿ ಹಣ ಬಿಡುಗಡೆ

ಬೆಂಗಳೂರು; ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಶುಕ್ರವಾರ ಭೇಟಿ ಮಾಡಿದರು.
ಇಲ್ಲಿನ ಕುಮಾರ ಕೃಪಾದಲ್ಲಿ ಭೇಟಿ ಮಾಡಿದ ಅವರು, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಸಮೀಪದ ವೈ ಜಂಕ್ಷನ್, ಅಬ್ಬಿನಹೊಳಲು ಬಳಿ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಚರ್ಚಿಸಿದರು. ಇದಕ್ಕೆ ಸಂಬಂದಿಸಿದಂತೆ ತರೀಕೆರೆ ಶಾಸಕ ಶ್ರೀನಿವಾಸ್ ಅವರಿಗೆ ಕರೆ ಮಾಡಿದ ಡಿ.ಕೆ ಶಿವಕುಮಾರ್, ಕೇಂದ್ರ ಸಚಿವ ನಾರಾಯಣಸ್ವಾಮಿ ಅವರ ಸಹಕಾರದೊಂದಿಗೆ ಅಬ್ಬಿನಹೊಳಲು ಕಾಮಗಾರಿಯನ್ನು ತ್ವರಿತವಾಗಿ ಮುಗಿಸುವ ಜವಾಬ್ದಾರಿವಹಿಸಿ ಕಾಮಗಾರಿಯ ಪ್ರಗತಿಯ ಮಾಹಿತಿ ನೀಡುವಂತೆ ಸೂಚಿಸಿದರು.
ಇದರ‌ ಜೊತೆಗೆ ಪಾವಗಡ ತಾಲ್ಲೂಕಿನ ಕುಡಿಯುವ ನೀರು ಹಾಗೂ ಕೇಂದ್ರ ಸರ್ಕಾರ ಪುರಸ್ಕೃತ ಯೋಜನೆಯ ಸಪೋರ್ಟ್ ಫಾರ್ ಇರಿಗೇಷನ್ ಮಾಡ್ರನೈಸೇಷನ್ ಪ್ರೋಗ್ರಾಮ್(SSIMP) ಯೋಜನೆ ಅಡಿಯಲ್ಲಿ ವಾಣಿ ವಿಲಾಸ ಸಾಗರ ಜಲಾಶಯದ ಅಣೆಕಟ್ಟು ಅಭಿವೃದ್ಧಿಗೆ 720 ಕೋಟಿ ಹಣ ಬಿಡುಗಡೆಯಾಗಿದ್ದು, ಅದನ್ನು ತ್ವರಿತ ಗತಿಯಲ್ಲಿ ಮುಗಿಸಲು ಸಹಕಾರ ನೀಡುವಂತೆ ಸಚಿವ ಡಿ.ಕೆ ಶಿವಕುಮಾರ್ ಅವರ ಸಹಕಾರ ನೀಡುವಂತೆ ಕೋರಿದರು. ಸಣ್ಣಚಿತ್ತಯ್ಯ VJNL ವ್ಯವಸ್ಥಾಪಕ ನಿರ್ದೇಶಕರು ಉಪಸ್ಥಿತರಿದ್ದರು.

ಕೇವಲ 8 ವರ್ಷಕ್ಕೆ ಇನ್ಸ್‌ಪೆಕ್ಟರ್ ಹುದ್ದೆಗೇರಿದ ಬಾಲಕ!: ಶಿವಮೊಗ್ಗದ ಹೃದಯವಂತ ಪೊಲೀಸ್

About The Author

You May Also Like

More From Author

+ There are no comments

Add yours