ಕಲ್ಪತರು ನಾಡಿಗೆ ಒಲಿಯಲಿದೆಯೇ ಸಿಎಂ ಗಾದಿ!?; ಕೊನೆಯ ಕ್ಷಣದಲ್ಲಿ ಅಚ್ಚರಿಯ ಬೆಳವಣಿಗೆ!

1 min read

ಕಲ್ಪತರು ನಾಡಿಗೆ ಒಲಿಯಲಿದೆಯೇ ಸಿಎಂ ಗಾದಿ!?; ಕೊನೆಯ ಕ್ಷಣದಲ್ಲಿ ಅಚ್ಚರಿಯ ಬೆಳವಣಿಗೆ!

Tumkurnews
ತುಮಕೂರು; ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 136 ಸ್ಥಾನಗಳ ಜಯಭೇರಿ ಭಾರಿಸಿದ ಬೆನ್ನಲ್ಲೇ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಕುತೂಹಲ ಕೆರಳಿದ್ದು, ತುಮಕೂರು ಜಿಲ್ಲೆಯ ಇಬ್ಬರು ಪ್ರಬಲ ನಾಯಕರ ಹೆಸರು ಮುನ್ನೆಲೆಗೆ ಬಂದಿದೆ.
ಜಿಲ್ಲೆಯಲ್ಲಿ ಒಟ್ಟು 11 ವಿಧಾನಸಭೆ ಕ್ಷೇತ್ರಗಳಿದ್ದು, ಈ ಪೈಕಿ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಈ ಬಾರಿ ಗೆಲುವು ಸಾಧಿಸಿದೆ. ಕೊರಟಗೆರೆಯಲ್ಲಿ ಡಾ.ಜಿ ಪರಮೇಶ್ವರ್, ಶಿರಾದಲ್ಲಿ ಟಿ.ಬಿ ಜಯಚಂದ್ರ, ಮಧುಗಿರಿಯಲ್ಲಿ ಕೆ.ಎನ್ ರಾಜಣ್ಣ, ಗುಬ್ಬಿ ಕ್ಷೇತ್ರದಲ್ಲಿ ಎಸ್.ಆರ್ ಶ್ರೀನಿವಾಸ್, ಪಾವಗಡದಲ್ಲಿ ಎಚ್.ವಿ ವೆಂಕಟೇಶ್, ತಿಪಟೂರಿನಲ್ಲಿ ಷಡಕ್ಷರಿ ಹಾಗೂ ಕುಣಿಗಲ್ ಕ್ಷೇತ್ರದಲ್ಲಿ ಡಾ.ರಂಗನಾಥ್ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಈ ಪೈಕಿ ಎಚ್.ವಿ ವೆಂಕಟೇಶ್ ಮಾತ್ರ ವಿಧಾನಸಭೆಗೆ ಹೊಸಬರು.
ಇಬ್ಬರ ಹೆಸರು ಮುನ್ನೆಲೆಗೆ; ಮುಖ್ಯಮಂತ್ರಿ ಗಾದಿಗೆ ಮಾಜಿ‌ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ. ಈ ನಡುವೆ ಜಿಲ್ಲೆಯ ಇಬ್ಬರು ಹಿರಿಯ ಶಾಸಕರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವಂತೆ ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯ ಮಾಡುತ್ತಿದ್ದಾರೆ. ಡಾ.ಜಿ ಪರಮೇಶ್ವರ್ ಹಾಗೂ ಟಿ.ಬಿ ಜಯಚಂದ್ರ ಅವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿ ಎಂದು ಆಯಾ ಶಾಸಕರುಗಳ ಬೆಂಬಲಿಗರು, ಅಭಿಮಾನಿಗಳು ಪಕ್ಷದ ಮೇಲೆ ಒತ್ತಡ ಹೇರುತ್ತಿದ್ದಾರೆ. ಡಾ.ಜಿ ಪರಮೇಶ್ವರ್ ಹೆಸರು ಕಳೆದ ಚುನಾವಣೆಯಲ್ಲೇ ಸಿಎಂ ರೇಸಿನಲ್ಲಿತ್ತು. ಆದರೆ ಅಚ್ಚರಿಯ ಬೆಳವಣಿಗೆಯಲ್ಲಿ ಹಿರಿಯ ನಾಯಕ ಟಿ.ಬಿ ಜಯಚಂದ್ರ ಅವರ ಹೆಸರು ಸಿಎಂ ರೇಸಿಗೆ ಬಂದಿದೆ. ಆದಾಗ್ಯೂ ರಾಜ್ಯದಲ್ಲಿ ಸಿದ್ದರಾಮಯ್ಯ ಅಥವಾ ಡಿ.ಕೆ.ಶಿವಕುಮಾರ್ ಸಿಎಂ ಆಗುವ ಸಾಧ್ಯತೆ ದಟ್ಟವಾಗಿದ್ದು, ಮುಂದಿನ ಬೆಳವಣಿಗೆಗಳನ್ನು ಕಾದು ನೋಡಬೇಕಿದೆ.

ಕಾಡಸಿದ್ದೇಶ್ವರ ಮಠಕ್ಕೆ ಡಿಕೆಶಿ ಭೇಟಿ; ಸಿಎಂ ಗಾದಿಗೆ ಮತ್ತಷ್ಟು ಹತ್ತಿರ

ತುಮಕೂರು ಜಿಲ್ಲೆ; ಯಾರು ಎಷ್ಟು ವೋಟ್ ಪಡೆದಿದ್ದಾರೆ? ಇಲ್ಲಿದೆ ಮಾಹಿತಿ

About The Author

You May Also Like

More From Author

+ There are no comments

Add yours