ಸಂಸದ ಜಿ.ಎಸ್ ಬಸವರಾಜ್ ನಿವಾಸಕ್ಕೆ ಶಾಸಕ ಕೆ.ಎನ್ ರಾಜಣ್ಣ ಭೇಟಿ
Tumkurnews
ತುಮಕೂರು; ಸಂಸದ ಜಿ.ಎಸ್ ಬಸವರಾಜ್ ನಿವಾಸಕ್ಕೆ ಮಧುಗಿರಿ ಕಾಂಗ್ರೆಸ್ ಶಾಸಕ ಕೆ.ಎನ್ ರಾಜಣ್ಣ ಭಾನುವಾರ ದಿಢೀರ್ ಭೇಟಿ ನೀಡಿದರು.
ವಿಧಾನಸಭೆ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಶುಭಾಶಯ ವಿನಿಮಯ ಮಾಡಿಕೊಳ್ಳುವ ಸಲುವಾಗಿ ಸೌಹಾರ್ದಯುತವಾಗಿ ಅವರು ಭೇಟಿ ನೀಡಿದರು. ಈ ವೇಳೆ ತುಮಕೂರು ನಗರ ಕ್ಷೇತ್ರದಲ್ಲಿ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಜಿ.ಎಸ್ ಬಸವರಾಜ್ ಅವರ ಪುತ್ರ ಜಿ.ಬಿ ಜ್ಯೋತಿಗಣೇಶ್ ಅವರಿಗೆ ಕೆ.ಎನ್ ರಾಜಣ್ಣ ಶುಭಾಶಯ ಕೋರಿದರು. ಉಭಯ ನಾಯಕರುಗಳ ಶುಭಾಶಯ ವಿನಿಮಯಕ್ಕೆ ಹಲವು ಸ್ಥಳೀಯ ನಾಯಕರು ಸಾಥ್ ನೀಡಿದರು.
ಕಲ್ಪತರು ನಾಡಿಗೆ ಒಲಿಯಲಿದೆಯೇ ಸಿಎಂ ಗಾದಿ!?; ಕೊನೆಯ ಕ್ಷಣದಲ್ಲಿ ಅಚ್ಚರಿಯ ಬೆಳವಣಿಗೆ!
+ There are no comments
Add yours