ಮಳೆ ಸಂತ್ರಸ್ತರಿಗೆ ಹುಳ ಬಿದ್ದಿರುವ ಊಟ ನೀಡಿದ ತುಮಕೂರು ಪಾಲಿಕೆ

1 min read

ಮಳೆ ಸಂತ್ರಸ್ತರನ್ನು‌ ಅಮಾನುಷವಾಗಿ ನಡೆಸಿಕೊಳ್ಳುತ್ತಿರುವ ಪಾಲಿಕೆ

Tumkurnews
ತುಮಕೂರು; ನಗರದಲ್ಲಿ ಮಳೆ ಸಂತ್ರಸ್ತ ಜನರಿಗೆ ಮಹಾನಗರ ಪಾಲಿಕೆಯಿಂದ ನೀಡುತ್ತಿರುವ ಊಟದಲ್ಲಿ ಹುಳಗಳು ಕಂಡು ಬಂದಿದ್ದು, ಸಂತ್ರಸ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವ್ಯಾಪಕ ಮಳೆ; ಶಾಲೆಗಳಿಗೆ ರಜೆ ಘೋಷಿಸಲು ಡಿಸಿ ಸೂಚನೆ
ತುಮಕೂರಿನ ಅಕ್ಕತಂಗಿ ಕೆರೆ ತುಂಬಿ ಸಮೀಪದ ಬಟವಾಡಿಯ ಹೊಸಳಯ್ಯನ ತೋಟದ ಮನೆಗಳಿಗೆ ನೀರು ನುಗ್ಗಿದೆ. ಪರಿಣಾಮ ಜನರು ಮನೆಗಳಲ್ಲಿ ಅಡುಗೆ ಮಾಡಿಕೊಳ್ಳಲಾಗದೇ ಪರದಾಡುತ್ತಿದ್ದಾರೆ. ಹೀಗಾಗಿ ಮಹಾನಗರ ಪಾಲಿಕೆಯಿಂದ‌ ನಿತ್ಯ ಮೂರು ಹೊತ್ತು ಊಟದ ವ್ಯವಸ್ಥೆ ಮಾಡಲಾಗಿದೆ. ಆದರೆ ಸಂತ್ರಸ್ತ ಜನರಿಗೆ ಹುಳಗಳು ಬಿದ್ದಿರುವ ಊಟ ನೀಡುವ ಮೂಲಕ ಪಾಲಿಕೆ ಅಮಾನುಷವಾಗಿ ನಡೆದುಕೊಂಡಿದೆ.

ವರ್ಗಾವಣೆಗೊಂಡ ಶಿಕ್ಷಕರನ್ನು ತಬ್ಬಿ ಬಿಕ್ಕಿ ಬಿಕ್ಕಿ ಅತ್ತ ವಿದ್ಯಾರ್ಥಿನಿಯರು

ಇಲ್ಲಿನ 30ಕ್ಕೂ‌ಅಧಿಕ ಮನೆಗಳಿಗೆ ನೀರು ನುಗ್ಗಿದ್ದು, ಕಳೆದ ಮೂರು ದಿನಗಳಿಂದ ಜನರು ಊಟ, ನಿದ್ರೆ ಇಲ್ಲದೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಹುಳ ಬಿದ್ದಿರುವ ಊಟ ನೀಡುವ ಮೂಲಕ ಬೇಜವಬ್ದಾರಿ ತೋರಿದ್ದಾರೆ. ಇಂದು ಬೆಳಗ್ಗೆ ನೀಡಿದ ತಿಂಡಿ ವಿಪರೀತ ಖಾರ ಇತ್ತು, ಮಕ್ಕಳು ತಿಂಡಿ ತಿನ್ನಲಾಗದೇ ಪರದಾಡಿದರು. ಮಧ್ಯಾಹ್ನದ ಊಟದಲ್ಲಿ ಹುಳಗಳು ಸತ್ತು ಬಿದ್ದಿದ್ದವು ಎಂದು ಸಂತ್ರಸ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಪಾಲಿಕೆ ಸಿಬ್ಬಂದಿ ತಂದಿದ್ದ ಊಟವನ್ನು ವಾಪಾಸು ಕಳುಹಿಸಿದ್ದಾರೆ. ಕೂಡಲೇ ಪಾಲಿಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಈ‌ ಬಗ್ಗೆ ಗಮನ ಹರಿಸಬೇಕಾಗಿದೆ.

(ಹುಳ ಬಿದ್ದಿರುವ ಊಟ)

About The Author

You May Also Like

More From Author

+ There are no comments

Add yours