ತುಮಕೂರಿನಲ್ಲಿ ರಾಜ್ಯಮಟ್ಟದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‌ ಸಮ್ಮೇಳನ

1 min read

Tumkur News
ತುಮಕೂರು: ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯ ದುರುಯೋಗ ತಡೆಗಟ್ಟುವುದು ಮತ್ತು ಕಟ್ಟಡ ಕಾರ್ಮಿಕ ಕಾನೂನು ಹಾಗೂ ಸೆಸ್ ಕಾನೂನು ೧೯೯೬ ಪುನರ್ ಸ್ಥಾಪನೆ ಹಾಗೂ ಇನ್ನಿತರ ಪ್ರಮುಖ ಬೇಡಿಕೆಗಳನ್ನಿಟ್ಟುಕೊಂಡು ಜೂ. ೨೬ ಮತ್ತು ೨೭ ರಂದು ತುಮಕೂರಿನಲ್ಲಿ ೪ನೇ ರಾಜ್ಯಮಟ್ಟದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‌ನ ಸಮ್ಮೇಳನ ಏರ್ಪಡಿಸಲಾಗಿದೆ ಎಂದು ಸಮ್ಮೇಳನದ ಕಾರ್ಯಾಧ್ಯಕ್ಷ ಬಿ. ಉಮೇಶ್ ತಿಳಿಸಿದ್ದಾರೆ.

ಯು.ಪಿ ಸರ್ಕಾರ ವಜಾಗೊಳಿಸಲು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಆಗ್ರಹ

ಜನಚಳವಳಿ ಕೇಂದ್ರದಲ್ಲಿ ಇಂದು ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡುತಿದ್ದ ಅವರು, ಸಮ್ಮೇಳನಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಸುಮಾರು ೩೫೦ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಇವರಿಗೆ ಎರಡು ದಿನಗಳ ಕಾಲ ಊಟೋಪಚಾರದೊಂದಿಗೆ ವಸತಿ ವ್ಯವಸ್ಥೆಯನ್ನು ಸಿಐಟಿಯು ಜೊತೆ ಸೇರಿ ಸಮಿತಿ ಮಾಡಿದೆ ಎಂದರು.

ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಮರು ವಿನ್ಯಾಸ; ಅಡಿಕೆ‌, ಮಾವು ಬೆಳೆಗೆ ಒತ್ತು

ಜೂನ್ ೨೬ ರ ಭಾನುವಾರ ಬೆಳಗ್ಗೆ ೧೦ ಗಂಟೆಗೆ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಸಮ್ಮೇಳನದ ಉದ್ಘಾಟನಾ ಸಮಾರಂಭ ಜರುಗಲಿದೆ. ಸಮ್ಮೇಳನವನ್ನು ಸುಪ್ರಿಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಅವರು ಉದ್ಘಾಟಿಸಲಿದ್ದಾರೆ. ಸಮ್ಮೇಳನದ ಅಧ್ಯಕ್ಷ ಚಲನಚಿತ್ರ ಮತ್ತು ಕಿರುತೆರೆ ನಟ ಹನುಮಂತೇಗೌಡ,  ದೇವಾನಂದ ಚಕ್ರವರ್ತಿ,ರಾಜ್ಯಾಧ್ಯಕ್ಷರಾದ ಎನ್.ವೀರಸ್ವಾಮಿ ಅವರು ಉಪಸ್ಥಿತರಿ ರುವರು. ಚಿಂತಕ ಕೆ.ದೊರೆರಾಜು ಅವರನ್ನು ಕಾರ್ಮಿಕರ ಪರವಾಗಿ ಅಭಿನಂದಿಸಲಾಗುವುದು.

About The Author

You May Also Like

More From Author

+ There are no comments

Add yours