ಹೊಸ ಉತ್ಪಾದನಾ ಆಧಾರಿತ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕಾ ಘಟಕಗಳಿಗೆ ಸಹಾಯಧನ: ಅರ್ಜಿ ಆಹ್ವಾನ

ಜಿಲ್ಲಾ ಸುದ್ದಿ ತಾಲ್ಲೂಕು ತುಮಕೂರು ನಗರ ಪ್ರಮುಖ ಸುದ್ದಿ

ಹೊಸ ಉತ್ಪಾದನಾ ಆಧಾರಿತ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕಾ ಘಟಕಗಳಿಗೆ ಸಹಾಯಧನ: ಅರ್ಜಿ ಆಹ್ವಾನ

Tumkurnews.in

ತುಮಕೂರು : ಕೇಂದ್ರ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ ಹಾಗೂ ರಾಜ್ಯ ಸರ್ಕಾರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸಹಯೋಗದೊಂದಿಗೆ, ವಿಶ್ವ ಬ್ಯಾಂಕ್ ನೆರವಿನ RAMP (Raising and Accelerating MSME Performance) ಯೋಜನೆಯಡಿ ಹೊಸ ಉತ್ಪಾದನಾ ಆಧಾರಿತ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕಾ ಘಟಕಗಳಿಗೆ ಬಡ್ಡಿ ಸಹಾಯಧನ ಸೌಲಭ್ಯ ಕಲ್ಪಿಸಲು ಅರ್ಹ ಘಟಕಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವ ಘಟಕಗಳು 2024ರ ಸೆಪ್ಟೆಂಬರ್ 4ರಂದು ಅಥವಾ ಅದರ ನಂತರ ವಾಣಿಜ್ಯ ಉತ್ಪಾದನೆಯನ್ನು ಪ್ರಾರಂಭಿಸಿರಬೇಕು. ವ್ಯಾಪಾರ ಮತ್ತು ಸೇವಾ ವಲಯದ ಘಟಕಗಳಿಗೆ ಈ ಸೌಲಭ್ಯ ಅನ್ವಯಿಸುವುದಿಲ್ಲ.

ಅರ್ಹ ಕೈಗಾರಿಕಾ ಘಟಕಗಳು ಬ್ಯಾಂಕುಗಳಿಂದ ಪಡೆದ ಗರಿಷ್ಠ 1 ಕೋಟಿ ರೂ.ವರೆಗಿನ ಅವಧಿ ಸಾಲಕ್ಕೆ (Term Loan) ಮೊದಲ 12 ತಿಂಗಳ ಬಡ್ಡಿಯಲ್ಲಿ ಶೇ. 6ರಷ್ಟು ಅಥವಾ ಗರಿಷ್ಠ 6 ಲಕ್ಷ ರೂ.ವರೆಗೆ (ಇವೆರಡರಲ್ಲಿ ಯಾವುದು ಕಡಿಮೆಯೋ ಅಷ್ಟು) ಒಂದು ಬಾರಿಯ ಬಡ್ಡಿ ಸಹಾಯಧನವನ್ನು ಪಡೆಯಬಹುದಾಗಿದೆ. ಈ ಸಹಾಯಧನವನ್ನು ನೇರವಾಗಿ ಸಂಬಂಧಪಟ್ಟ ಸಾಲದ ಖಾತೆಗೆ ಜಮೆ ಮಾಡಲಾಗುವುದು.

ಅರ್ಹ ಘಟಕಗಳು ಹಾಗೂ ಆಸಕ್ತ ಹೊಸ ಉದ್ಯಮಿಗಳು ಸಂಬಂಧಪಟ್ಟ ಬ್ಯಾಂಕ್ ಶಾಖೆಯ ಮೂಲಕ ಜಿಲ್ಲಾ ಕೈಗಾರಿಕಾ ಕೇಂದ್ರಕ್ಕೆ ಅಗತ್ಯ ದಾಖಲೆಗಳೊಂದಿಗೆ ಪ್ರಸ್ತಾವನೆ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರ ಕಚೇರಿ, ಜಿಲ್ಲಾ ಕೈಗಾರಿಕಾ ಕೇಂದ್ರ, ಕೈಗಾರಿಕಾ ವಸಾಹತು, ಬಿ.ಎಚ್. ರಸ್ತೆ, ತುಮಕೂರು ಅಥವಾ ದೂರವಾಣಿ ಸಂಖ್ಯೆ 0816-2281562 ಅನ್ನು ಸಂಪರ್ಕಿಸಬಹುದು. RAMP ಸಂಯೋಜಕ ಹೊನ್ನೇಶ್ (ಮೊಬೈಲ್: 9108604011) ಅಥವಾ ಫರ್ಹಾನ್ (ಮೊಬೈಲ್: 9353142905) ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *