ಮಕ್ಕಳು, ಯುವಜನರ ಕಲಾ ಪ್ರತಿಭೆಗೆ ವೇದಿಕೆಯಾದ ಕಲಾ ಪ್ರತಿಭೋತ್ಸವ
Tumkurnews.in
ತುಮಕೂರು : ಮಕ್ಕಳು ಮತ್ತು ಯುವಜನರಲ್ಲಿರುವ ಸುಪ್ತ ಕಲಾ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ಹಾಗೂ ಅವರ ಕಲಾ ನೈಪುಣ್ಯವನ್ನು ಅನಾವರಣಗೊಳಿಸುವ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಿದ್ದ ಕಲಾ ಪ್ರತಿಭೋತ್ಸವದ ಸ್ಪರ್ಧಾ ಕಾರ್ಯಕ್ರಮವು ನವೆಂಬರ್ 23 ಮತ್ತು 24ರಂದು ನಗರದ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಹಿರಿಯ ವೀರಗಾಸೆ ಕಲಾವಿದ ಸಿ.ವಿ. ವೀರಣ್ಣ ಅವರು ಉದ್ಘಾಟಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ, ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯ ಮಲ್ಲಿಕಾರ್ಜುನ ಕೆಂಕೆರೆ, ಲಲಿತಕಲಾ ಅಕಾಡೆಮಿಯ ಸದಸ್ಯ ಮನು ಚಕ್ರವರ್ತಿ ಹಾಗೂ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ಮತ್ತು ಹಿರಿಯ ಹರಿಕಥಾ ಕಲಾವಿದ ನರಸಿಂಹದಾಸ್ ಭಾಗವಹಿಸಿದ್ದರು.
