Tumkurnews.in
ತುಮಕೂರು: ನಗರ ಪ್ರದೇಶಗಳ ಮಕ್ಕಳಿಗೆ ಹೊಲಿಕೆ ಮಾಡಿದರೆ, ಹಳ್ಳಿಗಾಡಿನ ಮಕ್ಕಳು ಅತ್ಯಂತ ಧೈರ್ಯ ಶಾಲಿಗಳು, ಆತ್ಮವಿಶ್ವಾಸ ಉಳ್ಳವರು.ಇಂಗ್ಲೀಷ್ ಬರಲ್ಲ, ಇನ್ನಿತರ ಅಡೆ, ತಡೆಗಳನ್ನು ಮೆಟ್ಟಿನಿಂತರೇ, ಸಾಧನೆಯ ಶಿಖರ ನಿಮ್ಮದಾಗಲಿದೆ ಎಂದು ಕೌಶಲ್ಯಾಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಹಾಗೂ ಹಾಲಪ್ಪ ಪ್ರತಿಷ್ಠಾನ ಅಧ್ಯಕ್ಷ ಮುರುಳೀಧರ ಹಾಲಪ್ಪ ಪ್ರತಿಪಾದಿಸಿದ್ದಾರೆ.
ನಗರದ ತುಮಕೂರು ವಿವಿ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ತುಮಕೂರು ವಿವಿ ಐಕ್ಯೂಎಸಿ ಘಟಕ,ಎಲ್ಲಾ ಪದವಿ ಕಾಲೇಜುಗಳ ಸಹಕಾರದೊಂದಿಗೆ,ಹಾಲಪ್ಪ ಪ್ರತಿಷ್ಠಾನ ಆಯೋಜಿಸಿದ್ದ ಎರಡು ದಿನಗಳ ಸ್ಪರ್ಧಾತ್ಮಕ ಪರೀಕ್ಷೆಗಳ ಮಾರ್ಗದರ್ಶನ ಕಾರ್ಯಾಗಾರದಲ್ಲಿ ಕೈಪಿಡಿ ಬಿಡುಗಡೆ ಮಾಡಿ,ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ಇಂದು ವೃತ್ತಿ ನಿರತ ಐಎಎಸ್,ಐಪಿಎಸ್, ಕೆ.ಎ.ಎಸ್ ಅಧಿಕಾರಿಗಳಲ್ಲಿ ಬಹುತೇಕರು ಗ್ರಾಮೀಣ ಹಿನ್ನೆಲೆಯಿಂದ, ಕನ್ನಡ ಮಾಧ್ಯಮದಿಂದ ಬಂದವರು.ಇದನ್ನು ಅರ್ಥಮಾಡಿಕೊಂಡು, ಅಡೆ, ತಡೆಗಳನ್ನು ಮೆಟ್ಟಿನಿಲ್ಲುವ ಮೂಲಕ ನಿಮ್ಮ ಪೋಷಕರ ಮಹಾದಾಸೆಯನ್ನು ಈಡೇರಿಸಲು ಮುಂದಾಗಿ ಎಂದರು.
ನಾನು ಕೌಶಲ್ಯಾಭಿವೃದ್ದಿ ಮಂಡಳಿ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ನಡೆದ ಬಹುತೇಕ ಉದ್ಯೋಗ ಮೇಳಗಳಿಗೆ ಸಾವಿರಾರು ಜನ ಪದವಿಧರರು ಬರುತ್ತಿದ್ದರು,ಆದರೆ ಆಯ್ಕೆಯಾಗುತಿದ್ದವರ ಸಂಖ್ಯೆ ತೀರ ಕಡಿಮೆ.ಇದಕ್ಕೆ ಪ್ರಮುಖ ಕಾರಣ ಕಮ್ಯುನಿಕೇಷನ್ ಸ್ಕಿಲ್,ಪ್ರಜೆಂಟೇಷನ್ನ ಕೊರತೆ.ವಿಷಯದ ಬಗ್ಗೆ ತಿಳುವಳಿಕೆಯಿದ್ದರೂ ಅದನ್ನು ನಾಲ್ವರ ಮುಂದೆ ಧೈರ್ಯವಾಗಿ ಹೇಳುವಲ್ಲಿ ಇರುವ ಭಾಷೆಯ ಹಿಂಜರಿಕೆ. ಈ ಕೊರತೆ ನೀಗಿಸುವ ನಿಟ್ಟಿನಲ್ಲಿ ಜೊತೆಗೆ, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ,ಪರೀಕ್ಷೆ ವಿಧಾನ ಇವುಗಳ ಬಗ್ಗೆ ತಿಳುವಳಿಕೆಯನ್ನು ಈಗಾಗಲೇ ಕ್ಷೇತ್ರದಲ್ಲಿಯೇ ಕೆಲಸ ಮಾಡುತ್ತಿರುವ ನುರಿತ ಮಾರ್ಗದರ್ಶಕರಿಂದ ಮನದಟ್ಟು ಮಾಡಿಸುವುದು ಈ ಕಾರ್ಯಾಗಾರದ ಉದ್ದೇಶ ಎಂದು ಮುರುಳೀಧರ ಹಾಲಪ್ಪ ನುಡಿದರು.
ತುಮಕೂರು 10 ತಾಲೂಕುಗಳನ್ನು ಹೊಂದಿರುವ ದೊಡ್ಡ ಜಿಲ್ಲೆ. ಬೇರೆ ಜಿಲ್ಲೆಗಳಿಗೆ ಹೊಲಿಕೆ ಮಾಡಿದರೆ ಐಎಎಸ್, ಕೆಎಎಸ್ ಅಧಿಕಾರಿಗಳ ಸಂಖ್ಯೆ ಕಡಿಮೆ.ಜಿಲ್ಲೆಯ 18 ಜನ ಐಎಎಸ್, 40ಕ್ಕೂ ಹೆಚ್ಚು ಜನ ಕೆ.ಎ.ಎಸ್ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ.ಇವರ ಸಂಖ್ಯೆ ಹೆಚ್ಚಾಗಬೇಕು ಎಂಬುದು ಈ ಕಾರ್ಯಗಾರದ ಹಿಂದಿನ ಉದ್ದೇಶ.ಯುಪಿಎಸ್ಸಿ ಮುಖ್ಯ ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯವನ್ನು ಹಾಲಪ್ಪ ಪ್ರತಿಷ್ಠಾನ ನೀಡಲಿದೆ. ದೆಹಲಿಯಲ್ಲಿ ಇದಕ್ಕಾಗಿ ಒಂದು ತಂಡ ಕೆಲಸ ಮಾಡುತ್ತಿದ್ದೆ.ಕಾರ್ಯಗಾರಕ್ಕೆ ಬಂದಿರುವ 600ಕ್ಕೂ ಹೆಚ್ಚು ಮಕ್ಕಳಲ್ಲಿ ಓರ್ವ ಐಎಎಸ್,ಐಪಿಎಸ್, ಕೆ.ಎ.ಎಸ್ ಅಧಿಕಾರಿಯಾದರೂ ನಮ್ಮ ಪ್ರಯತ್ನ ಫಲಿಸಿದಂತೆ. ಹಾಗಾಗಿ ಎರಡು ದಿನಗಳ ಈ ಕಾರ್ಯಗಾರದಲ್ಲಿ ನಿಮ್ಮ ಮೊಬೈಲ್, ರೀಲ್ಸ್, ಸೋಷಿಯಲ್ ಮೀಡಿಯಾ ಬದಿಗಿಟ್ಟು, ಭವಿಷ್ಯದ ಕಡೆಗೆ ಗಮನಹರಿಸಿ ಎಂದು ಮುರುಳೀಧರ ಹಾಲಪ್ಪ ಕಿವಿ ಮಾತು ಹೇಳಿದರು.
ತುಮಕೂರು ವಿವಿ ಐಕ್ಯೂಎಸಿ ನಿರ್ದೇಶಕ,ಕಲಾ ನಿಕಾಯದ ಮುಖ್ಯಸ್ಥ ಹಾಗೂ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಡಾ.ಕೆ.ಜಿ.ಪರುಶುರಾಮ್ ಪ್ರಸ್ತಾವಿಕ ನುಡಿಗಳನ್ನಾಡಿ,ನಮ್ಮ ವಿವಿಯಲ್ಲಿ 95 ಪದವಿ ಕಾಲೇಜುಗಳಿಂದ ವರ್ಷಕ್ಕೆ 11 ಸಾವಿರ ಜನ ಪಾಸಾಗಿ ಹೊರಬರುತ್ತಾರೆ. ಇವರಲ್ಲಿ 2 ಸಾವಿರ ಜನರಿಗೆ ಮಾತ್ರ ಸ್ನಾತಕೋತ್ತರ ಕೋರ್ಸುಗಳಿಗೆ ಅವಕಾಶ ದೊರೆಯುತ್ತದೆ.ಹಾಗೆಯೇ ಭಾರತದಲ್ಲಿ ಒಂದು ವರ್ಷಕ್ಕೆ ಸುಮಾರು 4.50 ಕೋಟಿ ಪದವಿಧರರ ಹೊರಬರುತ್ತಾರೆ. ಇವರಲ್ಲಿ ಉದ್ಯೋಗ ಪಡೆಯುವವರ ಸಂಖ್ಯೆ ಶೇ20ಕ್ಕಿಂತಲೂ ಕಡಿಮೆ.ಸರಕಾರಿ ಉದ್ಯೋಗ ಪಡೆಯುವವರ ಸಂಖ್ಯೆ ಇನ್ನೂ ಕಡಿಮೆ. ಉಳಿದವರು ಏನು ಮಾಡುತ್ತಾರೆ.ಅವರ ಬದುಕು ಹೇಗೆ ಎಂಬುದು ನಿಜಕ್ಕೂ ಊಹೆಗೂ ನಿಲುಕದ ಪ್ರಶ್ನೆಯಾಗಿದೆ. ಈ ನಿಟ್ಟಿನಲ್ಲಿ ಹಾಲಪ್ಪ ಪ್ರತಿಷ್ಠಾನ ನಿರಂತರವಾಗಿ ವಿವಿಯೊಂದಿಗೆ ಸಂರ್ಪಕ ಇಟ್ಟುಕೊಂಡು ಕ್ಯಾಂಪಸ್ ಆಯ್ಕೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಮಾರ್ಗದರ್ಶನ ಮಾಡುತ್ತಾ ಬಂದಿದೆ.ಈ ಕಾರ್ಯಕ್ರಮಕ್ಕೂ ಸುಮಾರು 3 ತಿಂಗಳಿನಿAದ ನಿರಂತರ ಪರಿಶ್ರಮ ಹಾಕಲಾಗಿದೆ. ನಾಡಿನಲ್ಲಿ ಹೆಸರು ಮಾಡಿರುವ ನುರಿತ ಸಂಪನ್ಮೂಲ ವ್ಯಕ್ತಿಗಳ ಜೊತೆಗೆ, ಈಗಾಗಲೇ ಐಎಎಸ್, ಐಪಿಎಸ್ ಅಧಿಕಾರಿಗಳಾಗಿ ಕೆಲಸ ಮಾಡುತ್ತಿರುವ ವ್ಯಕ್ತಿಗಳಿಂದಲೂ ನಿಮಗೆ ಅಗತ್ಯ ತಿಳುವಳಿಕೆ ನೀಡುವ ಕೆಲಸವನ್ನು ಹಾಲಪ್ಪ ಪ್ರತಿಷ್ಠಾನ ಮಾಡುತ್ತಿದ್ದೆ. ಇವರ ಶ್ರಮ ಸಾರ್ಥಕವಾಗಬೇಕೆಂದರೆ, ನಿಮ್ಮಲ್ಲಿ ಒಬ್ಬ ವ್ಯಕ್ತಿ ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಯಾದರೂ ಅದಕ್ಕಿಂತ ದೊಡ್ಡ ತೃಪ್ತಿ ಮತ್ತೊಂದಿಲ್ಲ ಎಂದರು.
ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಇನ್ಸ್ಫೈರನ ಆರ್.ಉಪೇಂದ್ರ ಶೆಟ್ಟಿ, ಕೃಷಿಕ ಸರ್ವೋದಯ ಪೌಂಡೇಷನ್ನ ಗೋಪಾಲಕೃಷ್ಣ ಮೂರ್ತಿ, ಇನ್ಸೈಟ್ನ ತೇಜಸ್, ಭಾರತೀಯ ಇತಿಹಾಸ ಕುರಿತು ಶರಣ್ಯ ಬಂಡಾರಿ ಮಠ್, ನೆಲ್ನುಡಿ ಪತ್ರಿಕೆಯ ಸಂಪಾದಕ ಪ್ರಸನ್ನ ಅವರುಗಳು ಯುಪಿಎಸ್ಸಿ, ಕೆ.ಎ.ಎಸ್, ಎಫ್.ಡಿ.ಎ, ಎಸ್.ಡಿ.ಎ, ಕೆ.ಇ.ಎ, ಎಸ್.ಎಸ್.ಸಿ ಮತ್ತು ಆರ್.ಆರ್.ಬಿ ಸೇರಿದಂತೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುವುದು, ಪಠ್ಯಕ್ರಮ, ಪರೀಕ್ಷಾ ವಿಧಾನ,ಸಂದರ್ಶನ ಹೇಗೆ ಎಂಬ ಮಾಹಿತಿ ನೀಡಿದರಲ್ಲದೆ, ಸಂವಾದದಲ್ಲಿ ಪಾಲ್ಗೊಂಡು ಸ್ಪರ್ಧಾಕಾಂಕ್ಷಿಗಳ ಪ್ರಶ್ನೆಗಳಿಗೆ ಉತ್ತರಿಸಿ,ಹುರಿದುಂಬಿಸಿದರು.
ಈ ವೇಳೆ ಕಾರ್ಯಾಗಾರಕ್ಕೆ ಸಹಕಾರ ನೀಡಿದ
ರುಡ್ ಶೆಡ್,ಜಿಟಿಟಿಸಿ, ನರ್ಬಾಡ್,ಎಸ್.ಬಿ.ಐ, ಯುಪಿಎಎಸ್ಸಿ ಡಿಫೇನ್ಸ್,ಕರ್ನಾಟಕ ಬೀಜ ನಿಗಮ, ತುಮಕೂರು ವಿವಿಯ ಅಧ್ಯಾಪಕರು, ಹಾಲಪ್ಪ ಪ್ರತಿಷ್ಠಾನದ ಸಂಯೋಜಕರು, ನಿವೃತ್ತ ಪ್ರಾಂಶುಪಾಲರಾದ ಡಾ.ಲೀಲಾವತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು
