cool hit counter

ತುಮಕೂರು: ಗೊರೂರು ಜಲಾಶಯದಿಂದ ತುಮಕೂರಿಗೆ ಹರಿದ ಹೇಮಾವತಿ ನೀರು

ಹಾಸನ ‌ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಮಾಹಿತಿ: ಬುಧವಾರ ಸಂಜೆ ವೇಳೆಗೆ ತುಮಕೂರಿಗೆ ನೀರು

Webgauge India
1 Min Read
Spread the love

Tumkur news

ತುಮಕೂರು: ಹಾಸನ ಜಿಲ್ಲೆಯ ಗೊರೂರು ಡ್ಯಾಂನಿಂದ ತುಮಕೂರು ಜಿಲ್ಲೆಯ ನಾಲೆಗೆ ಹೇಮಾವತಿ ನದಿ ನೀರನ್ನು ಹರಿಸಲಾಗಿದೆ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ್ ಅವರು ಎರಡು ಬಾರಿ ದೂರವಾಣಿ ಮೂಲಕ ಮಾತನಾಡಿ ಹೇಮಾವತಿ ನೀರು ಹರಿಸುವಂತೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ತುಮಕೂರಿನ ಜನತೆಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಹೇಮಾವತಿ ನದಿ ನೀರನ್ನು ಹರಿಸಲಾಗಿದೆ.

ತುಮಕೂರಿನ ಜಲಸಂಗ್ರಹಗಾರದಲ್ಲಿ ನೀರು ಖಾಲಿಯಾಗುವ ನಾಲ್ಕು ದಿನ ಮುಂಚಿತವಾಗಿಯೇ ನೀರು ಹರಿಸುವುದಾಗಿ ನಾನು ಹೇಳಿದ್ದೆ. ಅದರಂತೆ ಸೋಮವಾರ ನೀರು ಬಿಡಲಾಗಿದೆ. ಬುಧವಾರ ತುಮಕೂರಿಗೆ ನೀರು ತಲುಪಲಿದೆ ಎಂದು ತಿಳಿಸಿದರು.

- Advertisement -
Share This Article
Leave a Comment