ತುಮಕೂರು ಎಸ್ ಪಿ ಅಶೋಕ್ ಕೆ.ವಿ ವರ್ಗಾವಣೆ
Tumkurnews.in
ತುಮಕೂರು; ಜಿಲ್ಲೆಯ ಪೊಲೀಸ್ ವರಿಷ್ಟಾಧಿಕಾರಿ ಅಶೋಕ್ ಕೆ.ವೆಂಕಟ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ನ.18ರಂದು ಹೊರಡಿಸಿರುವ ಸಮೂಹ ವರ್ಗಾವಣೆ ಆದೇಶದಲ್ಲಿ ತುಮಕೂರು ಎಸ್.ಪಿ ಆಗಿರುವ ಐಪಿಎಸ್ ಅಧಿಕಾರಿ ಅಶೋಕ್ ಕೆ.ವಿ ಅವರನ್ನು ಬೆಂಗಳೂರು ಪಶ್ಚಿಮ ನಗರ, ಪೀಣ್ಯ ಇಲ್ಲಿಗೆ ಪೊಲೀಸ್ ಡೆಪ್ಯುಟಿ ಕಮೀಶನರ್ ಆಗಿ ವರ್ಗಾಯಿಸಿ ಸ್ಥಳ ನಿಯುಕ್ತಿಗೊಳಿಸಲಾಗಿದೆ. 2017ರ ಬ್ಯಾಚ್’ನ ಐಪಿಎಸ್ ಅಧಿಕಾರಿಯಾಗಿರುವ ಅಶೋಕ್ ಕೆ.ವಿ ಅವರು 2023ರ ಸೆಪ್ಟೆಂಬರ್ 5ನೇ ತಾರೀಕಿನಿಂದ ತುಮಕೂರು ಜಿಲ್ಲೆಯ ಎಸ್.ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯಕ್ಕೆ ಇವರ ಸ್ಥಾನಕ್ಕೆ ಯಾರನ್ನೂ ನೇಮಿಸಿ ಸ್ಥಳ ನಿಯುಕ್ತಿಗೊಳಿಸಿಲ್ಲ.
