ಕುಪ್ಪೂರು ಜಾತ್ರಾ ಮಹೋತ್ಸವಕ್ಕೆ ಯದುವೀರ್ ಒಡೆಯರ್‌ಗೆ ಆಹ್ವಾನ
‘ಕುಪ್ಪೂರು ಮರುಳಸಿದ್ಧ ಶ್ರೀ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಆಹ್ವಾನ
Tumkurnews.in
ತುಮಕೂರು: ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸುಕ್ಷೇತ್ರ ಕುಪ್ಪೂರು ಗದ್ದುಗೆ ಮಹಾಸಂಸ್ಥಾನ ಮಠದ ಶ್ರೀ ಗುರು ಮರುಳಸಿದ್ಧೇಶ್ವರ ಸ್ವಾಮಿಯವರ ಐತಿಹಾಸಿಕ ಜಾತ್ರಾ ಮಹೋತ್ಸವ ಡಿಸೆಂಬರ್ ತಿಂಗಳಲ್ಲಿ ಅದ್ದೂರಿಯಾಗಿ ನಡೆಯಲಿದೆ.
ಜಾತ್ರಾ ಮಹೋತ್ಸವದ ಉದ್ಘಾಟನೆ ಹಾಗೂ ‘ಕುಪ್ಪೂರು ಮರುಳಸಿದ್ಧ ಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸಂಸದ ಹಾಗೂ ಮೈಸೂರು ಮಹಾರಾಜರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಆಹ್ವಾನಿಸಲಾಯಿತು.
ಕುಪ್ಪೂರು ಗದ್ದುಗೆ ಸಂಸ್ಥಾನ ಮಠದ ಆಡಳಿತಾಧಿಕಾರಿಗಳ ನಿಯೋಗವು ಮೈಸೂರಿಗೆ ತೆರಳಿ ಯದುವೀರ್ ಅವರನ್ನು ಭೇಟಿ ಮಾಡಿ, ಜಾತ್ರಾ ಮಹೋತ್ಸವದ ಆಹ್ವಾನ ಪತ್ರಿಕೆಯನ್ನು ನೀಡಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮನವಿ ಮಾಡಿತು.
ಮಠದ ಆಡಳಿತಾಧಿಕಾರಿ ವಾಗೀಶ್ ಪಂಡಿತಾರಾಧ್ಯರು, ಮುಖಂಡರಾದ ಹರಿಸಮುದ್ರ ಎಚ್.ಎನ್. ಗಂಗಾಧರ್, ಪಿ.ಓ. ಚಂದ್ರಶೇಖರ್ ಮೂರ್ತಿ ಹಾಗೂ ಕಿರುತೆರೆ ಕಲಾವಿದ ತಿಪಟೂರಿನ ದಯಾನಂದ್ ಸಾಗರ್ ಸೇರಿದಂತೆ ನಿಯೋಗದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
