ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಡಿ.ಟಿ ಶ್ರೀನಿವಾಸ್ ಗೆಲುವು?
Tumkurnews
ತುಮಕೂರು: ಆಗ್ನೇಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಗುರುವಾರ ನಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ ಶ್ರೀನಿವಾಸ್ ಗೆಲುವಿನತ್ತ ಸಾಗಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ವೈ.ಎ ನಾರಾಯಣ ಸ್ವಾಮಿ ಅವರನ್ನು ಮೊದಲ ಪ್ರಾಶಸ್ತ್ಯದ ಮತಗಳ ಎಣಿಕೆಯಲ್ಲಿ ಸುಮಾರು 1800ಕ್ಕೂ ಅಧಿಕ ಮತಗಳ ಅಂತರದಿಂದ ಹಿಂದಿಕ್ಕಿರುವ ಡಿ.ಟಿ ಶ್ರೀನಿವಾಸ್ ಅವರು ಮುನ್ನಡೆ ಸಾಧಿಸಿದ್ದಾರೆ. ರಾತ್ರಿ 9 ಗಂಟೆಗಳ ವರೆಗಿನ ಮಾಹಿತಿಯಂತೆ ಮೊದಲ ಪ್ರಾಶಸ್ತ್ಯ ಮತ ಎಣಿಕೆ ಮುಕ್ತಾಯವಾಗಿದ್ದು, ಎರಡನೇ ಪ್ರಾಶಸ್ತ್ಯ ಮತಗಳ ಎಣಿಕೆ ಆರಂಭವಾಗಿದೆ. ರಾತ್ರಿ ಸುಮಾರು 12ಗಂಟೆ ವೇಳೆಗೆ ಅಂತಿಮ ಫಲಿತಾಂಶ ಲಭ್ಯವಾಗುವ ಸಾಧ್ಯತೆ ಇದೆ.
ಹಮಾರೆ ಬಾರಾಹ್ ಟ್ರೈಲರ್ ಹಾಗೂ ಸಿನಿಮಾ ನಿಷೇಧ
+ There are no comments
Add yours