ಹಮಾರೆ ಬಾರಾಹ್ ಟ್ರೈಲರ್ ಹಾಗೂ ಸಿನಿಮಾ ನಿಷೇಧ

1 min read

 

ಹಮಾರೆ ಬಾರಾಹ್ ಟ್ರೈಲರ್ ಹಾಗೂ ಸಿನಿಮಾ ನಿಷೇಧ

Tumkurnews
ತುಮಕೂರು: ಸರ್ಕಾರದ ಆದೇಶದಲ್ಲಿ ತಿಳಿಸಿರುವಂತೆ ಜೂನ್ 7ರಂದು ಬಿಡುಗಡೆಯಾಗಲಿರುವ “ಹಮಾರೆ ಬಾರಾಹ್” ಎಂಬ ವಿವಾದಾತ್ಮಕ ಸಿನಿಮಾವನ್ನು ಬಿಡುಗಡೆ ಮಾಡುವುದನ್ನು ಕರ್ನಾಟಕ ಸಿನಿಮಾ(ರೆಗ್ಯೂಲೇಶನ್) ಆಕ್ಟ್-1964ರ ಸೆಕ್ಷನ್-15(1) ಮತ್ತು 15(5)ರಡಿಯಲ್ಲಿ ನಿಷೇಧಿಸಿದ್ದು, “ಹಮಾರೆ ಬಾರಾಹ್” ಎಂಬ ಟ್ರೈಲರ್ ಹಾಗೂ ಸಿನಿಮಾವನ್ನು ಜೂನ್ 5, 2024 ರಿಂದ ಅನ್ವಯವಾಗುವಂತೆ ಎರಡು ವಾರಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ರಾಜ್ಯದ ಯಾವುದೇ ಎಲೆಕ್ಟ್ರಾನಿಕ್ ಮಾಧ್ಯಮ, ಸಾಮಾಜಿಕ ಜಾಲತಾಣ, ಸಿನಿಮಾ ಮಂದಿರಗಳು, ಖಾಸಗಿ ಟಿವಿ ಚಾಲನ್‍ಗಳು, ಇತರೆ ಮಾಧ್ಯಮಗಳ ಮೂಲಕ ಪ್ರಸಾರ ಮಾಡುವುದನ್ನು ರಾಜ್ಯದಲ್ಲಿ ನಿಷೇಧಿಸಿದೆ. “ಹಮಾರೆ ಬಾರಾಹ್” ಎಂಬ ಟ್ರೈಲರ್ ಹಾಗೂ ಸಿನಿಮಾವನ್ನು ಪ್ರಸಾರ ಮಾಡಬಾರದು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಮನವಿ ಮಾಡಿದ್ದಾರೆ.

About The Author

You May Also Like

More From Author

+ There are no comments

Add yours