ತುಮಕೂರು: ಅಧಿಕಾರಿಗಳ ದಾಳಿ; ಅನುಮತಿ ಪಡೆಯದ ಕೀಟನಾಶಕ ವಶ

1 min read

 

ಅನುಮತಿ ಪಡೆಯದ ಕೀಟನಾಶಕ ವಶ

Tumkurnews
ತುಮಕೂರು: ಅಂಗಡಿಯೊಂದರ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅನುಮತಿ ಪಡೆಯದ ಹಾಗೂ ಸಮರ್ಪಕ ದಾಖಲಾತಿ ನಿರ್ವಹಣೆ ಇಲ್ಲದ ಕೀಟನಾಶಕವನ್ನು ವಶಪಡಿಸಿಕೊಂಡಿದ್ದಾರೆ.

ತುಮಕೂರು: ಸೆಕ್ಷನ್ 144 ಅನ್ವಯ‌ ನಿಷೇದಾಜ್ಞೆ ಜಾರಿ
ನಗರದ ಮಂಡಿಪೇಟೆಯಲ್ಲಿರುವ ವಿಷ್ಣುಪ್ರಿಯ ಆಗ್ರೋ ಸೀಡ್ಸ್ ಕೀಟನಾಶಕ ಮಾರಾಟ ಅಂಗಡಿಯಲ್ಲಿ ಅನುಮತಿ ಪಡೆಯದ ಕೀಟನಾಶಕ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಕೃಷಿ ಇಲಾಖೆಯ ಜಾರಿದಳ-2ರ ಕೀಟನಾಶಕ ಪರಿವೀಕ್ಷಕ ಹಾಗೂ ಸಹಾಯಕ ನಿರ್ದೇಶಕ ಅಶ್ವತ್ಥ್‌ನಾರಾಯಣ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಂಗಡಿಯನ್ನು ಪರಿಶೀಲಿಸಿದಾಗ ಸುಮಾರು 92 ಸಾವಿರ ರೂ. ಬೆಲೆಯ ಅನುಮತಿ ಪಡೆಯದ ಕೀಟನಾಶಕ ದಾಸ್ತಾನು ಪತ್ತೆಯಾಗಿದ್ದು, ಈ ಕೀಟನಾಶವನ್ನು ವಶಪಡಿಸಿಕೊಳ್ಳಲಾಗಿದೆ.

ಸೋಮವಾರ ತುಮಕೂರು ಬಂದ್
ಈ ದಾಳಿಯಲ್ಲಿ ಕೃಷಿ ಇಲಾಖೆ ಜಾರಿದಳ-1ರ ಸಹಾಯಕ ನಿರ್ದೇಶಕ ಪುಟ್ಟರಂಗಪ್ಪ, ಕೃಷಿ ಅಧಿಕಾರಿ ಶೋಭ ಮತ್ತಿತರರು ಪಾಲ್ಗೊಂಡಿದ್ದರು.

About The Author

You May Also Like

More From Author

+ There are no comments

Add yours