ತುಮಕೂರು: ಸೆಕ್ಷನ್ 144 ಅನ್ವಯ‌ ನಿಷೇದಾಜ್ಞೆ ಜಾರಿ

1 min read

 

ತುಮಕೂರು: ಸೆಕ್ಷನ್ 144 ಅನ್ವಯ‌ ನಿಷೇದಾಜ್ಞೆ ಜಾರಿ

Tumkurnews
ತುಮಕೂರು: ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರ ಚುನಾವಣೆಗೆ ಸಂಬಂಧಿಸಿದಂತೆ ಮತಕ್ಷೇತ್ರ ವ್ಯಾಪ್ತಿಯಲ್ಲಿ ಮತದಾನದ ಮುಕ್ತಾಯಕ್ಕೆ ನಿಗದಿಯಾಗಿರುವ ಗಡುವಿಗೆ 48 ಗಂಟೆ ಮುನ್ನ ಅಂದರೆ ಜೂನ್ 1ರ ಸಂಜೆ 4 ಗಂಟೆ ನಂತರ ಯಾವುದೇ ಕಾನೂನು ಬಾಹಿರ ಸಭೆ, ಸಾರ್ವಜನಿಕ ಸಭೆಗಳನ್ನು ನಡೆಸಬಾರದೆಂದು ಸಹಾಯಕ ಚುನಾವಣಾಧಿಕಾರಿ ಶುಭ ಕಲ್ಯಾಣ್ ಎಲ್ಲಾ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳಿಗೆ ಸೂಚಿಸಿದ್ದಾರೆ.

ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್’ನ ಎಲ್ಲಾ ಕಾಮಗಾರಿಗಳಿಗೆ ತಡೆ: ಜಿಲ್ಲಾಧಿಕಾರಿ ಆದೇಶ
ಮತದಾನದ ಮುಕ್ತಾಯಕ್ಕೆ ನಿಗದಿಯಾಗಿರುವ ಗಡುವಿಗೆ 48 ಗಂಟೆ ಮುನ್ನ ಯಾವುದೇ ಕಾನೂನು ಬಾಹಿರ ಸಭೆ, ಸಾರ್ವಜನಿಕ ಸಭೆಗಳನ್ನು ನಡೆಸುವುದನ್ನು ನಿರ್ಬಂಧಿಸಲಾಗಿದೆ.
ನಿರ್ಬಂಧಿತ ಅವಧಿಯಲ್ಲಿ ಸೆಕ್ಷನ್ 144 ಅನ್ವಯ ಮತಕ್ಷೇತ್ರ ವ್ಯಾಪ್ತಿಯಲ್ಲಿ 5ಕ್ಕಿಂತ ಹೆಚ್ಚು ವ್ಯಕ್ತಿಗಳು ಒಟ್ಟುಗೂಡುವಂತಿಲ್ಲ, ಒಟ್ಟಿಗೆ ಚಲಿಸಲು ಅನುಮತಿ ಇರುವುದಿಲ್ಲ. ಆದರೆ ಅಭ್ಯರ್ಥಿಗಳು ಮನೆ-ಮನೆ ಪ್ರಚಾರಕ್ಕೆ ಭೇಟಿ ನೀಡಲು ನಿರ್ಬಂಧವಿಲ್ಲ ಎಂದು ಅವರು ತಿಳಿಸಿದ್ದಾರೆ.

ಸೋಮವಾರ ತುಮಕೂರು ಬಂದ್
ನಿರ್ಬಂಧಿತ ಅವಧಿಯಲ್ಲಿ ಚುನಾವಣೆ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಕ್ಷೇತ್ರದ ಹೊರಗಿನ ವ್ಯಕ್ತಿಗಳು ಮತಕ್ಷೇತ್ರದಲ್ಲಿ ಇರುವುದು ಕಂಡು ಬಂದರೆ ಅವರ ಚಟುವಟಿಕೆಗಳ ಮೇಲೆ ತೀವ್ರ ನಿಗಾವಹಿಸಲಾಗುವುದು. ಮತದಾರರ ಮೇಲೆ ಪ್ರಭಾವ ಬೀರುವ ಯಾವುದೇ ಯತ್ನದಲ್ಲಿ ಭಾಗಿಯಾಗಿರುವುದು ಕಂಡು ಬಂದರೆ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು.
ಈ ಅವಧಿಯಲ್ಲಿ ಯಾವುದೇ ಧ್ವನಿವರ್ಧಕವನ್ನು ಬಳಸಲು ಅನುಮತಿಸಲಾಗುವುದಿಲ್ಲ. ಎಲ್ಲಾ ತರಹದ ಮದ್ಯ ಮಾರಾಟ, ಸಂಗ್ರಹಣೆಯನ್ನು ನಿಷೇಧಿಸಿ ಒಣದಿನವೆಂದು ಘೋಷಿಸಲಾಗಿದೆ ಎಂದು ಅವರು ಸೂಚಿಸಿದ್ದಾರೆ.

ಇಂದಿನಿಂದ ಶಾಲೆ ಪ್ರಾರಂಭ: ಪೂರ್ವ ಸಿದ್ಧತೆ ಪರಿಶೀಲಿಸಿದ ಜಿಲ್ಲಾಧಿಕಾರಿ

About The Author

You May Also Like

More From Author

+ There are no comments

Add yours