ಪಾವಗಡ ಪ್ರಕರಣ: ಕೆಪಿಟಿಸಿಎಲ್‌ ಸಿಬ್ಬಂದಿ ಅಮಾನತು

1 min read

 

ಪಾವಗಡ ಪ್ರಕರಣ: ಕೆಪಿಟಿಸಿಎಲ್‌ ಸಿಬ್ಬಂದಿ ಅಮಾನತು

Tumkurnews
ತುಮಕೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಸಿಬ್ಬಂದಿ ಪಾವಗಡದಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದ ಘಟನೆಗೆ ಸಂಬಂಧಿಸಿದಂತೆ ಕಿರಿಯ‌ ಇಂಜಿನಿಯರ್ (ವಿ) ವರದರಾಜು, ಮೆಕಾನಿಕ್ ಗ್ರೇಡ್-1 ನರಸಿಂಹಮೂರ್ತಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ತುಮಕೂರು: ಸೆಕ್ಷನ್ 144 ಅನ್ವಯ‌ ನಿಷೇದಾಜ್ಞೆ ಜಾರಿ
ಹೊಡೆದಾಡಿದ್ದ ಸಿಬ್ಬಂದಿಯನ್ನು ಅಮಾನತಗೊಳಿಸಿ ತುಮಕೂರಿನ ಪ್ರಸರಣ ವೃತ್ತದ ಅಧೀಕ್ಷಕ ಇಂಜಿನಿಯರ್ ಅವರು ಮೇ 31 ರಂದು ಆದೇಶ ಹೊರಡಿಸಿದ್ದಾರೆ ಎಂದು ಕೆಪಿಟಿಸಿಎಲ್‌ ಪ್ರಕಟಣೆ ತಿಳಿಸಿದೆ.
ಇದೇ ಪ್ರಕರಣ ಸಂಬಂಧ ಕೆಪಿಟಿಸಿಎಲ್‌ನ ನೌಕರರಾದ ಕಿರಿಯ ಇಂಜಿನಿಯರ್ (ವಿ) ಶ್ರೀನಿವಾಸ, ಎಸ್.ಎ ಗ್ರೇಡ್-2 ಸಂತೋಷ ಎಂಬುವವರಿಗೆ ನೋಟಿಸ್‌ ಜಾರಿಮಾಡಲಾಗಿದೆ.

ಇಂದಿನಿಂದ ಶಾಲೆ ಪ್ರಾರಂಭ: ಪೂರ್ವ ಸಿದ್ಧತೆ ಪರಿಶೀಲಿಸಿದ ಜಿಲ್ಲಾಧಿಕಾರಿ
ಪಾವಗಡದ ಪಟ್ಟಣದ ಹೊರವಲಯದ ತೋಟದಲ್ಲಿ ಮೇ 23ರಂದು ಕಚೇರಿ ಸಮಯದಲ್ಲೇ ಸಿಬ್ಬಂದಿ ಕೈ ಕೈ ಮಿಲಾಯಿಸಿದ್ದರು. ಈ ಪ್ರಕರಣ ಸಂಬಂಧ ಕೆಪಿಟಿಸಿಎಲ್‌ ಶಿಸ್ತು ಕ್ರಮ ಕೈಗೊಂಡಿದೆ.

 

About The Author

You May Also Like

More From Author

+ There are no comments

Add yours