ಶೆಟ್ಟಿಹಳ್ಳಿ ಅಂಡರ್ ಪಾಸ್: ಇಂದು ಬೆಂಗಳೂರಿನ ತಜ್ಞರಿಂದ ರಸ್ತೆ ಕುಸಿತ ವೀಕ್ಷಣೆ
Tumkurnews
ತುಮಕೂರು: ತೀವ್ರ ಮಳೆಯಿಂದಾಗಿ ಕುಸಿದಿರುವ ಶೆಟ್ಟಿಹಳ್ಳಿ ಅಂಡರ್ ಪಾಸ್’ನ ಸರ್ವಿಸ್ ರಸ್ತೆ ವೀಕ್ಷಣೆಗೆ ಇಂದು ತಜ್ಞರ ತಂಡ ಆಗಮಿಸಲಿದೆ.
ಬೆಂಗಳೂರಿನಿಂದ ತಜ್ಞರು ನಗರಕ್ಕೆ ಆಗಮಿಸಿ ಶೆಟ್ಟಿಹಳ್ಳಿ ಅಂಡರ್ ಪಾಸ್ ಮೇಲ್ಭಾಗದಲ್ಲಿ ರಸ್ತೆ ಕುಸಿದಿರುವುದನ್ನು ಕೂಲಂಕುಷವಾಗಿ ಪರಿಶೀಲಿಸಲಿದ್ದು, ಸಮಸ್ಯೆಗೆ ಶಾಶ್ವತ ಪರಿಹಾರ ಸೂಚಿಸಲಿದ್ದಾರೆ.
ತುಮಕೂರು: ಭಾರೀ ಮಳೆಗೆ ಶೆಟ್ಟಿಹಳ್ಳಿ ಅಂಡರ್ ಪಾಸ್ ಕುಸಿತ
ವಾಹನ ಸಂಚಾರ ಬಂದ್: ರಸ್ತೆ ಕುಸಿದಿರುವುದರಿಂದ ಸದ್ಯಕ್ಕೆ ಬ್ಯಾರಿಕೇಡ್ ಅಳವಡಿಸಿ ವಾಹನಗಳ ಸಂಚಾರವನ್ನು ಬಂದ್ ಮಾಡಲಾಗಿದೆ. ‘ನಾವು ಈ ಮೊದಲು ಕಸ ಬರುತ್ತಿದೆ ಎಂದುಕೊಂಡಿದ್ದೆವು. ಆದರೆ ಪರಿಶೀಲಿಸಿದಾಗ ರಸ್ತೆ ಕುಸಿದು ಮಣ್ಣು ಬರುತ್ತಿರುವುದು ಸ್ಪಷ್ಟವಾಗಿದೆ. ಹಾಗಾಗಿ ರಾತ್ರಿ ರಸ್ತೆ ಬಂದ್ ಮಾಡಿ ತಾತ್ಕಾಲಿಕವಾಗಿ ಗುಂಡಿ ಮುಚ್ಚಲಾಗಿದೆ. ಗುರುವಾರ ಬೆಂಗಳೂರಿನಿಂದ ಎಕ್ಸ್ ಫರ್ಟ್ ಗಳು ಬಂದು ಶಾಶ್ವತ ಪರಿಹಾರ ಕಂಡು ಹಿಡಿಯಲಿದ್ದಾರೆ ಎಂದು ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜ ತಿಳಿಸಿದ್ದಾರೆ.
ಏನಾಗಿದೆ?: ನಗರದಲ್ಲಿ ಕಳೆದ ಐದಾರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಶೆಟ್ಟಿಹಳ್ಳಿಗೇಟ್‍ನಲ್ಲಿರುವ ಅಂಡರ್ ಪಾಸ್ ಮೇಲ್ಭಾಗದ ರಸ್ತೆ ಬಿರುಕು ಬಿಟ್ಟು ಕುಸಿತಗೊಂಡಿದೆ.
ರಸ್ತೆ ಕುಸಿತ: ಸ್ಥಳಕ್ಕೆ ಶಾಸಕ ಜ್ಯೋತಿಗಣೇಶ್ ಭೇಟಿ: ಸ್ಥಳೀಯರಿಗೆ ಎಚ್ಚರಿಕೆ
ನಗರದ ಶೆಟ್ಟಿಹಳ್ಳಿಗೇಟ್ ಸಮೀಪವಿರುವ ರಾಘವೇಂದ್ರ ಸ್ವಾಮಿನಾರಾಯಣ ಮಠಕ್ಕೆ ತಿರುವು ಪಡೆಯುವ ಅಂಡರ್ ಪಾಸ್ ಮೇಲ್ಭಾಗದ ರಸ್ತೆ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕುಸಿದಿದೆ.
ಮಳೆ ಬಂದಾಗ ಸುದ್ದಿ: ಶೆಟ್ಟಿಹಳ್ಳಿ ಅಂಡರ್ ಪಾಸ್ ಮಳೆ ಆರಂಭವಾದರೆ ಒಂದಿಲ್ಲೊಂದು ಕಾರಣಗಳಿಂದ ಸುದ್ದಿಯಾಗುತ್ತಲೇ ಇರುತ್ತದೆ. ಇದುವರೆಗೂ ಮಳೆಯಿಂದ ಅಂಡರ್ ಪಾಸ್ ಒಳಗೆ ನೀರು ತುಂಬಿ ವಾಹನ ಸವಾರರು ಸಂಚರಿಸಲಾಗದಂತಹ ಸ್ಥಿತಿ ನಿರ್ಮಾಣವಾಗುತ್ತಿತ್ತು. ಆದರೆ ಇದೀಗ ಅಂಡರ್ ಪಾಸ್ ಮೇಲ್ಭಾಗದ ರಸ್ತೆ ಕುಸಿಯುವ ಮೂಲಕ ಈ ಭಾಗದ ಜನರಲ್ಲಿ ತೀವ್ರ ಆತಂಕವನ್ನು ಸೃಷ್ಠಿಸಿದೆ.
ತುಮಕೂರು KSRTC ಹೊಸ ಬಸ್ ನಿಲ್ದಾಣ: ಕಾರ್ಯಾರಂಭಕ್ಕೂ ಮುನ್ನವೇ ಮಳೆ ನೀರು ಸೋರಿಕೆ! ವಿಡಿಯೋ
+ There are no comments
Add yours