ಜೆಸಿಬಿಗೆ ಅಡ್ಡ ನಿಂತ ಪೊಲೀಸ್! ಹೇಮಾವತಿ ಕೆನಾಲ್ ಮಚ್ಚುವ ವೇಳೆ ರೊಚ್ಚಿಗೆದ್ದ ಹೋರಾಟಗಾರರು: ವಿಡಿಯೋ
Tumkurnews
ತುಮಕೂರು: ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ನಡೆಯುತ್ತಿರುವ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ವಿರುದ್ಧದ ಹೋರಾಟದ ವೇಳೆ ಪೊಲೀಸರು ಮತ್ತು ಹೋರಾಟಗಾರರ ನಡುವೆ ತೀವ್ರ ವಾಗ್ವಾದ ಉಂಟಾಯಿತು.
ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಚನ್ನೇನಹಳ್ಳಿ ಗ್ರಾಮದ ಬಳಿ ಸೋಮವಾರ ಪ್ರತಿಭಟನೆ ನಡೆಸಿದ ಹೋರಾಟಗಾರರು ಜೆಸಿಬಿ ಬಳಸಿ ಕೆನಾಲ್’ಗೆ ಮಣ್ಣು ತುಂಬಲು ಪ್ರಯತ್ನಿಸಿದರು. ಈ ವೇಳೆ ಜೆಸಿಬಿಗೆ ಅಡ್ಡ ನಿಂತ ಪೊಲೀಸರು ಮಣ್ಣು ತುಂಬಲು ಅಡ್ಡಿ ಪಡಿಸಿದ ಘಟನೆ ನಡೆಯಿತು. ತೀವ್ರ ವಾಕ್ಸಮರದ ಬಳಿಕ ಪ್ರತಿಭಟನಾಕಾರರು ಮಣ್ಣು ಕೆನಾಲ್’ಗೆ ತುಂಬುವಲ್ಲಿ ಯಶಸ್ವಿಯಾದರು.
ಜೂ.6ರ ಗಡುವು: ಸಿ.ಎಸ್.ಪುರ ಅಮಾನಿಕೆರೆಗೆ ಹೊಂದಿಕೊಂಡಂತೆ ನಡೆದಿರುವ ಕೆನಾಲ್ ಕಾಮಗಾರಿ ಈಗಾಗಲೇ ಪೈಪ್ ಹಾಕುವ ಹಂತಕ್ಕೆ ತಲುಪುತ್ತಿದೆ. ಇತ್ತೀಚೆಗೆ ಸಾವಿರಾರು ರೈತರು ಬೃಹತ್ ಪ್ರತಿಭಟನೆ ನಡೆಸಿ ಕಾಮಗಾರಿಗೆ ತಡೆಯೊಡ್ಡಿದ್ದರು. ಕಾಮಗಾರಿ ಸ್ಥಗಿತಗೊಳಿಸಲು ಜೂನ್ 6ರ ವರೆಗೆ ಗಡುವು ನೀಡಲಾಗಿತ್ತು. ಆದರೆ ಗುತ್ತಿಗೆದಾರ ಹಾಗೂ ಅಧಿಕಾರಿಗಳು ರೈತರ ಹೋರಾಟಕ್ಕೆ ಮಣಿದಿಲ್ಲ. ಜೊತೆಗೆ ಬೃಹತ್ ಪೈಪ್’ಗಳನ್ನು ತಂದ ಕೆಲಸ ಮುಂದುವರೆಸುವ ಯತ್ನ ನಡೆಸಿದರು. ಇದರಿಂದ ಆಕ್ರೋಶಗೊಂಡ ರೈತರು ಶಾಂತಿಯುತ ಪ್ರತಿಭಟನೆಯ ಸ್ವರೂಪ ಬದಲಿಸಿದ್ದು, ಕೆನಾಲ್ ಮುಚ್ಚುವ ಹೋರಾಟ ಆರಂಭಿಸಿದ್ದಾರೆ.
+ There are no comments
Add yours