ತುಮಕೂರು: ರಾಜಕಾಲುವೆಗೆ ತ್ಯಾಜ್ಯ ನೀರು ಬಿಟ್ಟ ಕಾರ್ಖಾನೆ: ಜಿಲ್ಲಾಧಿಕಾರಿ ಭೇಟಿ

1 min read

 

ಅಂತರಸಹಳ್ಳಿ ಕ್ಯೆಗಾರಿಕಾ ಪ್ರದೇಶಕ್ಕೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭೇಟಿ: ವರದಿ ಸಲ್ಲಿಸಲು ಸೂಚನೆ

Tumkurnews
ತುಮಕೂರು: ನಗರ ಹೊರವಲಯದ ಅಂತರಸಹಳ್ಳಿ ಕೈಗಾರಿಕಾ ವಸಾಹತು ಕಾರ್ಖಾನೆಯೊಂದರಿಂದ ಕಲುಷಿತ ನೀರನ್ನು ರಾಜ ಕಾಲುವೆಗೆ ಹೊರಬಿಡುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಕೈಗಾರಿಕೆಗಳು ಮಾಲಿನ್ಯಯುಕ್ತ ತ್ಯಾಜ್ಯಗಳನ್ನು ಕಾಲುವೆಗಳಿಗೆ ಬಿಡಬಾರದು, ಈ ಬಗ್ಗೆ ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಸದರಿ ಪ್ರದೇಶವನ್ನು ಸಮಗ್ರವಾಗಿ ಪರಿಶೀಲಿಸಿ, ತ್ವರಿತವಾಗಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.
ಅಂತರಸಹಳ್ಳಿ ಕ್ಯೆಗಾರಿಕಾ ವಸಾಹತು ಪ್ರದೇಶದ ವ್ಯಾಪ್ತಿಯು ರಾಜ್ಯ ಸಣ್ಣ ಕ್ಯೆಗಾರಿಕಾ ಅಭಿವೃದ್ದಿ ನಿಗಮದ ವ್ಯಾಪ್ತಿಗೆ ಸೇರಿರುವುದರಿಂದ, ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ದಿ ನಿಗಮದ ಸಹಾಯಕ ವ್ಯವಸ್ಥಾಪಕರಿಗೆ ಸ್ಥಳದಲ್ಲೇ ದೂರವಾಣಿ ಮುಖೇನ ಮಾತನಾಡಿ, ಅಂತರಸಹಳ್ಳಿ ಕೈಗಾರಿಕಾ ಪ್ರದೇಶದ ಕಾಲುವೆಗಳಲ್ಲಿ ಇರುವಂತಹ ತ್ಯಾಜ್ಯಗಳ ಪರಿಶೀಲನೆ ಮತ್ತು ವಿಲೇವಾರಿಗೆ ಶೀಘ್ರ ಕ್ರಮಕೈಗೊಳ್ಳುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಿ.ಕೆ.ಲಿಂಗರಾಜು, ಕೆಐಎಡಿಬಿ ಅಧಿಕಾರಿಗಳು ಸೇರಿದ್ದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

About The Author

You May Also Like

More From Author

+ There are no comments

Add yours