ತುಮಕೂರು ಜಿಲ್ಲೆಯಲ್ಲಿ 74 ಕೋಟಿ ರೂ.ಗಳ ಬರಪರಿಹಾರ ವಿತರಣೆ: ರೈತರ ಖಾತೆಗೆ ಜಮೆ: ಇಲ್ಲಿದೆ ವಿವರ

1 min read

 

ತುಮಕೂರು ಜಿಲ್ಲೆಯಲ್ಲಿ 74 ಕೋಟಿ ರೂ.ಗಳ ಬರಪರಿಹಾರ ವಿತರಣೆ: ರೈತರ ಖಾತೆಗೆ ಜಮೆ

Tumkurnews
ತುಮಕೂರು: ಜಿಲ್ಲೆಯ 1,32,332 ರೈತರ ಖಾತೆಗೆ 74 ಕೋಟಿ ರೂ.ಗಳ ಬರ ಪರಿಹಾರ ಹಣವನ್ನು ಜಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಕೆಸ್ವಾನ್ ಸಭಾಂಗಣದಲ್ಲಿ ತಾಲೂಕು ಅಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಅವರು ಮಾತನಾಡಿದರು.
ಬರ ಪರಿಹಾರ ಹಣವನ್ನು ಖಾತೆಗೆ ಜಮೆ ಮಾಡಿದ ರೈತರ ಪಟ್ಟಿಯ ವಿವರವನ್ನು ಜಿಲ್ಲಾಧಿಕಾರಿಗಳ ಕಚೇರಿ ಜಾಲತಾಣ, ಎಲ್ಲ ತಾಲೂಕು ಕಚೇರಿ, ಗ್ರಾಮ ಪಂಚಾಯತಿ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಚುರಪಡಿಸಬೇಕೆಂದು ಸೂಚನೆ ನೀಡಿದರು.

ತುಮಕೂರು: ಮಳೆಯಲ್ಲಿ ಪರದಾಡಿದ ಜನ: ವಿಡಿಯೋ
ಖಾತೆಗೆ ಬರ ಪರಿಹಾರದ ಹಣ ಜಮೆಯಾಗದ ರೈತರು ಸಮೀಪದ ರೈತ ಸಂಪರ್ಕ ಕೇಂದ್ರಗಳಿಗೆ ಫ್ರೂಟ್ ಐಡಿ ಹಾಗೂ ಆಧಾರ್ ಸಂಖ್ಯೆಯೊಂದಿಗೆ ಭೇಟಿ ನೀಡಿ ಪರಿಶೀಲಿಸಿಕೊಳ್ಳಬೇಕು ಎಂದು ತಿಳಿಸಿದರು.
ಬರ ಪರಿಹಾರ ಹಾಗೂ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದ ಸಮಸ್ಯೆಯ ಅಹವಾಲು ಸಲ್ಲಿಸಲು ಜಿಲ್ಲೆಯಲ್ಲಿ ಸ್ಥಾಪಿಸಿರುವ 18 ಮೇವು ಬ್ಯಾಂಕುಗಳಲ್ಲಿಯೂ ಸಹಾಯವಾಣಿ ಕೇಂದ್ರವನ್ನು ತೆರೆಯಬೇಕು. ಸ್ವೀಕರಿಸಿದ ಅಹವಾಲುಗಳಿಗೆ ಅಧಿಕಾರಿಗಳು ಆದ್ಯತೆ ಮೇಲೆ ಸ್ಪಂದಿಸಿ ಪರಿಹರಿಸಲು ಕ್ರಮವಹಿಸಬೇಕು, ಮೇವು ಬ್ಯಾಂಕಿಗೆ ಖರೀದಿಸಿದ ಮೇವಿನ ಬಿಲ್ ಮೊತ್ತವನ್ನು ಸರಬರಾಜುದಾರರಿಗೆ ಆದಷ್ಟು ಬೇಗ ಪಾವತಿಸಬೇಕೆಂದು ಸೂಚಿಸಿದರು.
ಸಭೆಯಲ್ಲಿ ಭೂದಾಖಲೆಗಳ ಉಪನಿರ್ದೇಶಕ ನಿರಂಜನ್ ಎಂ.ಎನ್, ಜಿಲ್ಲೆಯ   ಉಪವಿಭಾಗಧಿಕಾರಿಗಳು, ತಹಶೀಲ್ದಾರರು, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

ಪರಿಹಾರದ ವಿವರ:

* ಚಿಕ್ಕನಾಯಕನಹಳ್ಳಿ ತಾಲೂಕಿನ 15975 ರೈತರಿಗೆ 92823283 ರೂ.

* ಗುಬ್ಬಿಯ 8234 ರೈತರಿಗೆ 41029295 ರೂ.

*  ಕೊರಟಗೆರೆ-12144 ರೈತರಿಗೆ 72813925 ರೂ.

* ಕುಣಿಗಲ್-19022 ರೈತರಿಗೆ 96453201 ರೂ.

* ಮಧುಗಿರಿ-15548 ರೈತರಿಗೆ 89783195 ರೂ.

* ಪಾವಗಡ-5641 ರೈತರಿಗೆ 42583561 ರೂ.

*  ಶಿರಾ-17013 ರೈತರಿಗೆ 111928237 ರೂ.

*  ತಿಪಟೂರು-14955 ರೈತರಿಗೆ 77865493 ರೂ.

*  ತುಮಕೂರು-11004 ರೈತರಿಗೆ 52055965 ರೂ.

* ತುರುವೇಕೆರೆ ತಾಲೂಕಿನ 12796 ರೈತರಿಗೆ 64809796 ರೂ.

*  ಒಟ್ಟು 132332 ರೈತರಿಗೆ 742145951 ರೂ.ಗಳ ಬರ  ಪರಿಹಾರವನ್ನು ವಿತರಿಸಲಾಗಿದೆ.

About The Author

You May Also Like

More From Author

+ There are no comments

Add yours