ತುಮಕೂರು: ಮಧ್ಯಾಹ್ನ, ರಾತ್ರಿ ಭರ್ಜರಿ ಮಳೆ
Tumkurnews
ತುಮಕೂರು: ನಗರದಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಹಾಗೂ ರಾತ್ರಿ ವೇಳೆ ಭರ್ಜರಿ ಮಳೆಯಾಗಿದೆ.
ಸತತವಾಗಿ ಒಂದು ವಾರದಿಂದ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜನರು ಸಂತಸಗೊಂಡಿದ್ದಾರೆ.
ಜನರ ಪರದಾಟ: ಸೋಮವಾರ ಮಧ್ಯಾಹ್ನದ ಸಮಯದಲ್ಲಿ ದಿಢೀರ್ ಮಳೆ ಸುರಿದ ಹಿನ್ನೆಲೆಯಲ್ಲಿ ಜನರು ಮಳೆಯಿಂದ ರಕ್ಷಿಸಿಕೊಳ್ಳಲು ಪರದಾಡಿದ್ದು ಕಂಡು ಬಂದಿತು. ನಗರದ ಕೆ.ಎಸ್.ಆರ್.ಟಿ.ಸಿ ಬಸ್‌ನಿಲ್ದಾಣದಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕ ಪ್ರಯಾಣಿಕರು ಮಳೆಯಿಂದ ತಪ್ಪಿಸಿಕೊಳ್ಳಲು ಸುರಕ್ಷಿತ ಸ್ಥಳದತ್ತ ಓಡುತ್ತಿದ್ದ ದೃಶ್ಯ ಕಂಡು ಬಂದಿತು.
ಸಂಜೆ 5.30ರ ವೇಳೆಗೆ ಬಿಡುವು ನೀಡಿದ ಮಳೆ ರಾತ್ರಿ 11ಗಂಟೆ ಸಮಯದಲ್ಲಿ ಪುನಃ ಆರಂಭವಾಗಿ ಬಹು ಹೊತ್ತಿನ ತನಕ ಧಾರಾಕಾರವಾಗಿ ಸುರಿಯಿತು. ಒಟ್ಟಿನಲ್ಲಿ ಕೃತಿಕಾ ಮಳೆಯು ಜಿಲ್ಲೆಯಲ್ಲಿ ಉತ್ತಮವಾಗಿ ಬರುತ್ತಿರುವುದು ರೈತರ ಸಂತಸಕ್ಕೆ ಕಾರಣವಾಗಿದೆ.
+ There are no comments
Add yours