ತುಮಕೂರು: ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಸುರಿದ ಮಳೆ ಎಷ್ಟು? ಇಲ್ಲಿದೆ ಕೃಷಿ ಇಲಾಖೆ ಮಾಹಿತಿ

1 min read

ತುಮಕೂರು: ಜಿಲ್ಲೆಯಲ್ಲಿ 24 ಗಂಟೆಯಲ್ಲಿ ಸುರಿದ ಮಳೆಯ ಮಾಹಿತಿ ಇಲ್ಲಿದೆ

Tumkurnews
ತುಮಕೂರು: ಜಿಲ್ಲೆಯಲ್ಲಿ ಮೇ 13ರ ಬೆಳಿಗ್ಗೆ ವರದಿಯಾದಂತೆ ಕಳೆದ 24 ಗಂಟೆಗಳಲ್ಲಿ 2.50 ಮಿ.ಮೀ. ವಾಡಿಕೆ ಮಳೆಯಾಗಬೇಕಾಗಿತ್ತು. ಆದರೆ 31.70 ಮಿ.ಮೀ. ಸರಾಸರಿ ಮಳೆಯಾಗುವ ಮೂಲಕ ರೈತರ ಕೃಷಿ ನಿರೀಕ್ಷೆಗಳು ಗರಿಗೆದರಿವೆ ಎಂದು ಜಂಟಿ ಕೃಷಿ ನಿರ್ದೇಶಕ ರಮೇಶ್ ತಿಳಿಸಿದರು.

ತುಮಕೂರು ಜಿಲ್ಲೆಯಲ್ಲಿ ಉತ್ತಮ ಮಳೆ: ಕೃಷಿ ಚಟುವಟಿಕೆಗಳಿಗೆ ಚಾಲನೆ ನೀಡಿದ ಜಿಲ್ಲಾಡಳಿತ
ಜಿಲ್ಲಾಧಿಕಾರಿ ಶುಭ ಕಲ್ಯಾಣ್ ನೇತೃತ್ವದಲ್ಲಿ ನಡೆದ ಸಭೆಗೆ ಮಾಹಿತಿ ನೀಡಿದ ಅವರು, ಮಳೆ ವರದಿಯನುಸಾರ ಕಳೆದ 24 ಗಂಟೆಗಳಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ 44.7 ಮಿ.ಮೀ. ವಾಸ್ತವ ಮಳೆ(ವಾಡಿಕೆ 2.3 ಮಿ.ಮೀ.), ಗುಬ್ಬಿಯಲ್ಲಿ 35.2 ಮಿ.ಮೀ.(1.9 ಮಿ.ಮೀ.), ಕೊರಟಗೆರೆ : 5.8(1.8), ಕುಣಿಗಲ್: 9.4(4.2), ಮಧುಗಿರಿ : 23.5(1.8), ಪಾವಗಡ : 24.2(1.9), ಶಿರಾ: 42.5(0.6,) ತಿಪಟೂರು : 58.3(1.4), ತುಮಕೂರು : 23.7(4.7), ತುರುವೇಕೆರೆ 44 ಮಿ.ಮೀ.(ವಾಡಿಕೆ ಮಳೆ 2.9) ವಾಸ್ತವ ಮಳೆಯಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಪೂರ್ವ ಮುಂಗಾರು ಬಿತ್ತನೆ ಕಾರ್ಯ ಏಪ್ರಿಲ್ ಮಾಹೆಯಲ್ಲಿಯೇ ಪ್ರಾರಂಭವಾಗಬೇಕಿತ್ತು. ಮಳೆ ಕೊರತೆಯಿಂದ ಬಿತ್ತನೆ ಕಾರ್ಯ ವಿಳಂಬವಾಗಿದೆ. ಮುಂಗಾರು ಬಿತ್ತನೆಗಾಗಿ ಭೂಮಿಯನ್ನು ಹದಗೊಳಿಸುವ ಕಾರ್ಯ ಸಾಗಿದೆ ಎಂದು ತಿಳಿಸಿದರು.

ತುಮಕೂರು: ಕಾರ್ಯಾರಂಭಕ್ಕೂ ಮುನ್ನವೇ ಹೊಸ ಬಸ್ ನಿಲ್ದಾಣದಲ್ಲಿ ಬಿರುಕು! ಅರೆಬರೆ ಆರಂಭಕ್ಕೆ ಸಿದ್ಧತೆ
ಜಿಲ್ಲೆಯಲ್ಲಿ ಪೂರ್ವ ಮುಂಗಾರು ಹಂಗಾಮಿನ ಬಿತ್ತನೆಗಾಗಿ ರಿಯಾಯಿತಿ ದರದಲ್ಲಿ ರೈತರಿಗೆ ವಿತರಣೆ ಮಾಡಲು 163.40 ಕ್ವಿಂಟಾಲ್ ಹೆಸರುಕಾಳು, 118.80 ಕ್ವಿಂಟಾಲ್ ಅಲಸಂದೆ, 7.20 ಕ್ವಿಂಟಾಲ್ ಉದ್ದು, 13.2 ಕ್ವಿಂಟಾಲ್ ತೊಗರಿ ಸೇರಿದಂತೆ ಒಟ್ಟು 302.60 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ 21,042 ಹೆಕ್ಟೇರ್ ಪ್ರದೇಶದಲ್ಲಿ ನೀರಾವರಿ ಆಧಾರಿತ ಹಾಗೂ 2,99,413 ಹೆಕ್ಟೇರ್ ಪ್ರದೇಶದಲ್ಲಿ ಮಳೆ ಆಧಾರಿತ ಸೇರಿ ಒಟ್ಟು 3.20ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮುಖ್ಯ ಬೆಳೆಗಳಾದ ಭತ್ತ, ರಾಗಿ, ಜೋಳ, ಶೇಂಗಾ ಸೇರಿದಂತೆ ವಿವಿಧ ಬೆಳಗಳ ಬಿತ್ತನೆ ಗುರಿ ಹೊಂದಲಾಗಿದ್ದು, ಮುಖ್ಯ ಬೆಳೆಗಳ ಬಿತ್ತನೆ ಬೀಜವನ್ನು ದಾಸ್ತಾನು ಮಾಡಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ತುಮಕೂರು: ಭೂ ಪರಿಹಾರ ಪ್ರಕರಣ: ರೈತರಿಗೆ ಶುಭ ಸುದ್ದಿ ನೀಡಿದ ಶುಭ ಕಲ್ಯಾಣ್
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗಾಗಿ 70,263 ಮೆ.ಟನ್ ರಸಗೊಬ್ಬರದ ಬೇಡಿಕೆ ಇದ್ದು, 39,619 ಮೆ.ಟನ್ ರಸಗೊಬ್ಬರವನ್ನು ದಾಸ್ತಾನು ಮಾಡಲಾಗಿದೆ. ಈವರೆಗೆ 3845 ಮೆ.ಟನ್ ರಸಗೊಬ್ಬರವನ್ನು ರೈತರಿಗೆ ವಿತರಿಸಲಾಗಿದೆ. ರೈತರು ತಮ್ಮ ಫ್ರೂಟ್ ಐಡಿ ಹಾಗೂ ಆಧಾರ್ ಕಾರ್ಡ್ ಹಾಜರುಪಡಿಸಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.
ಮಳೆ ಬರುತ್ತಿರುವುದರಿಂದ ಜಾನುವಾರುಗಳ ಮೇವಿಗಾಗಿ ಜಿಲ್ಲೆಯಲ್ಲಿ ತೆರೆದಿರುವ 15 ಮೇವು ಬ್ಯಾಂಕಿನಲ್ಲಿ ಫಂಗಸ್ ಆಗದಂತೆ ಮೇವನ್ನು ಸುರಕ್ಷಿತವಾಗಿಡಬೇಕು. ಫಂಗಸ್‍ನಿಂದ ಕೂಡಿದ ಮೇವನ್ನು ಸೇವಿಸಿ ಜಾನುವಾರುಗಳ ಜೀವಕ್ಕೆ ಹಾನಿಯಾಗಬಾರದು, ಮೇವು ಬೇಡಿಕೆ ಇಲ್ಲದಿರುವ ಪ್ರದೇಶಗಳಲ್ಲಿ ಮೇವು ಬ್ಯಾಂಕುಗಳನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ತುಮಕೂರು: ಭೂ ಪರಿಹಾರ ಪ್ರಕರಣ: ರೈತರಿಗೆ ಶುಭ ಸುದ್ದಿ ನೀಡಿದ ಶುಭ ಕಲ್ಯಾಣ್

About The Author

You May Also Like

More From Author

+ There are no comments

Add yours