ಹಂಡೆ ಒಳಗೆ ಅಡಗಿದ್ದ ನಾಗರಹಾವು! ರಕ್ಷಣೆ
Tumkurnews
ತುಮಕೂರು: ತಾಲ್ಲೂಕಿನ ಸೀಬಿ ಅಗ್ರಹಾರ ಗ್ರಾಮದ ನಿವಾಸಿ ರಮೇಶ್ ಅವರ ಮನೆಯ ಹಂಡೆ ಒಲೆ ಒಳಗೆ ಅಡಗಿದ್ದ ನಾಗರ ಹಾವನ್ನು ರಕ್ಷಣೆ ಮಾಡಲಾಗಿದೆ.
ಸುಮಾರು 4 ಅಡಿ ಉದ್ದದ ನಾಗರಹಾವನ್ನು ಕಂಡು ಮನೆಯವರು ಭಯಭೀತರಾಗಿದ್ದರು, ಬಳಿಕ ವನ್ಯಜೀವಿ ಜಾಗೃತಿ ಹಾಗೂ ಉರಗ ಸಂರಕ್ಷಣಾ ಸಂಸ್ಥೆಯವರಿಗೆ (ವಾರ್ಕೊ) ಕರೆಮಾಡಿ ತಿಳಿಸಿದರು. ಸಂಸ್ಥೆಯ ಉರಗ ತಜ್ಞ ಮನು ಅಗ್ನಿವಂಶಿ, ನಾಗರ ಹಾವನ್ನು ಸುರಕ್ಷಿತವಾಗಿ ರಕ್ಷಿಸಿ ಸಮೀಪದ ಅರಣ್ಯ ಪ್ರದೇಶಕ್ಕೆ ಬಿಟ್ಟರು. ಹಾವುಗಳ ರಕ್ಷಣೆ ಮಾಡಲು ವಾರ್ಕೊ ಸಂಸ್ಥೆಯ ಸಹಾಯವಾಣಿ 9964519576 ಕರೆಮಾಡಬಹುದು ಎಂದು ಉರಗ ತಜ್ಞ ಮನು ತಿಳಿಸಿದರು.
+ There are no comments
Add yours