ತುಮಕೂರು: ಕೊನೆ ದಿನ ಭರ್ಜರಿ ಸುರಿದ ಭರಣಿ ಮಳೆ: ಕೃಪೆ ತೋರುವೆಯಾ ಕೃತ್ತಿಕಾ?

1 min read

 

ತುಮಕೂರು: ಕೊನೆ ದಿನ ಭರ್ಜರಿ ಸುರಿದ ಭರಣಿ ಮಳೆ: ಕೃಪೆ ತೋರುವೆಯಾ ಕೃತ್ತಿಕಾ?

Tumkurnews
ತುಮಕೂರು: ಕಳೆದ ಸುಮಾರು 7-8 ತಿಂಗಳಿನಿಂದ ಮಳೆಯಿಲ್ಲದೆ ಭೀಕರ ಬರ, ಮಿತಿಮೀರಿದ ಬಿಸಿಲಿನ ಝಳದಿಂದ ಬಸವಳಿದು ಮಳೆಗಾಗಿ ಆಗಸದತ್ತ ಮುಖ ಮಾಡಿದ್ದ ರೈತ ಸಮೂಹ ಹಾಗೂ ಜನಸಾಮಾನ್ಯರ ಮೊಗದಲ್ಲಿ ರಾತ್ರಿ ಸುರಿದ ವರ್ಷಧಾರೆ ಮಂದಹಾಸ ಮೂಡಿಸಿದೆ.
ಭೀಕರ ಬರದಿಂದ ಕಂಗೆಟ್ಟಿದ್ದ ಕಲ್ಪತರುನಾಡಿನ ಜನತೆಗೆ ಭರಣಿ ಮಳೆ ಬಾರದಿರುವುದು ಆತಂಕಕ್ಕೆ ದೂಡಿತ್ತು. ಆದರೆ
ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಆರಂಭವಾದ ಭರಣಿ ಮಳೆ 1 ಗಂಟೆಗೂ ಅಧಿಕ ಕಾಲ ಸುರಿಯಿತು. ಇದು ರೈತರಲ್ಲಿ ಎಲ್ಲಿಲ್ಲದ ಸಂತಸ ತಂದಿದೆ.
ಕಳೆದ 7-8 ತಿಂಗಳಿಂದ ವರ್ಷಧಾರೆ ಇಲ್ಲದೆ ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನಸಾಮಾನ್ಯರಿಗೆ ರಾತ್ರಿ ಬಿದ್ದ ಮಳೆಯಿಂದ ತುಸು ನೆಮ್ಮದಿ ಎನ್ನಿಸಿದೆ.
ಬಿಸಿಲಿನ ಬೇಗೆಯಿಂದ ಬಾಡುತ್ತಿದ್ದ ಅಡಕೆ, ತೆಂಗು, ಬಾಳೆ ಸೇರಿದಂತೆ ಇನ್ನಿತರೆ ಬೆಳೆಗಳು ವರ್ಷಧಾರೆಯ ಸಿಂಚನವಾಗಿ ಕೊಂಚ ನಳನಳಿಸುವಂತಾಗಿದೆ.
ರಾತ್ರಿ ಭರಣಿ ಮಳೆ ಕೊನೆಯ ಹಂತದಲ್ಲಿ ಸುರಿದಿರುವುದು ಕೃಷಿ ಚಟುವಟಿಕೆಗಳನ್ನು ಆರಂಭಿಸಲು ಶುಭ ಸೂಚನೆಯಾಗಿದೆ ಎಂಬುದು ರೈತರ ಸಂತಸದ ಮಾತು.
ಇಂದಿನಿಂದ ಕೃತ್ತಿಕಾ ಮಳೆ: ಇನ್ನು ಇಂದಿನಿಂದ ಕೃತ್ತಿಕಾ ಮಳೆ ಆರಂಭವಾಗಲಿದ್ದು, ಮುಂದಿನ ಮಳೆ ನಕ್ಷತ್ರಗಳು ಕೃಪೆ ತೋರಿದರೆ ಸಾಕು ಎಂದು ಜನ ಪ್ರಾರ್ಥಿಸುತ್ತಿದ್ದಾರೆ.

About The Author

You May Also Like

More From Author

+ There are no comments

Add yours