ಬರ ನಿರ್ವಹಣೆ: ತುಮಕೂರು ಜಿಲ್ಲೆಯಲ್ಲಿ ಸಹಾಯವಾಣಿ ಸ್ಥಾಪನೆ

1 min read

 

ಬರ ನಿರ್ವಹಣೆ: ಸಹಾಯವಾಣಿ ಸ್ಥಾಪನೆ

Tumkurnews
ತುಮಕೂರು: ಜಿಲ್ಲೆಯ 10 ತಾಲ್ಲೂಕುಗಳಲ್ಲಿಯೂ ಬರಪರಿಸ್ಥಿತಿ ತಲೆದೋರಿರುವ ಹಿನ್ನೆಲೆಯಲ್ಲಿ ಸಮರ್ಪಕವಾಗಿ ಬರ ಪರಿಸ್ಥಿತಿಯನ್ನು ನಿರ್ವಹಣೆ ಮಾಡಲು ರೈತರ ಅನುಕೂಲಕ್ಕಾಗಿ ಸಹಾಯವಾಣಿ ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದ್ದಾರೆ.

ತುಮಕೂರು: ಬರ‌ ನಿರ್ವಹಣೆಗೆ ಜಿಲ್ಲಾಡಳಿತದ ಸಿದ್ಧತೆಗಳೇನು? ಡಿಸಿ ಮಾಹಿತಿ
ಬರಪರಿಸ್ಥಿತಿಯಲ್ಲಿ ರೈತರು ಎದೆಗುಂದದೆ ಆತ್ಮಸ್ಥೈರ್ಯ ಹೊಂದಿರಬೇಕು. ರೈತರ ಸಂಕಷ್ಟದಲ್ಲಿ ಸ್ಪಂದಿಸಲು ಆಯಾ ತಾಲ್ಲೂಕು ತಹಶೀಲ್ದಾರರಿಗೆ ಈಗಾಗಲೇ ಸೂಚಿಸಲಾಗಿದೆ.
ಬೆಳೆ ನಷ್ಟ, ಸಾಲ ಮರುಪಾವತಿ ಮತ್ತಿತರ ಯಾವುದೇ ಸಮಸ್ಯೆಗಳಿದ್ದಲ್ಲಿ ಜಿಲ್ಲೆಯ ರೈತರು ಸಹಾಯವಾಣಿ ಸಂಖ್ಯೆ: 0816-2213400, 155304(ಸ್ಮಾರ್ಟ್ ಸಿಟಿ ಹೆಲ್ಪ್‍ಲೈನ್ 24*7), 7304975519ನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ತೀವ್ರ ಬರ: ಸಾಲ ವಸೂಲಾತಿಗೆ ತಡೆ

About The Author

You May Also Like

More From Author

+ There are no comments

Add yours