ಜಿಲ್ಲೆಯ 10 ತಾಲ್ಲೂಕುಗಳಲ್ಲಿ ದಸರಾ ಕ್ರೀಡಾಕೂಟ
Tumakurunews
ತುಮಕೂರು: 2023-24ನೇ ಸಾಲಿನ ತುಮಕೂರು ಜಿಲ್ಲೆಯ 10 ತಾಲ್ಲೂಕುಗಳಲ್ಲಿ ಪುರುಷರು ಮತ್ತು ಮಹಿಳೆಯರ ವಿಭಾಗದಲ್ಲಿ ದಸರಾ ಕ್ರೀಡಾಕೂಟವನ್ನು ಏರ್ಪಡಿಸಲಾಗಿದೆ.
ಕೊರಟಗೆರೆ: ತಾಲ್ಲೂಕು ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 20ರಂದು ಕ್ರೀಡಾಕೂಟ ನಡೆಯಲಿದ್ದು, ಸೆ.19 ನೋಂದಣಿ ಮಾಡಿಕೊಳ್ಳಲು ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಹನುಮಂತರಾಯಪ್ಪ ತಾ.ದೈ.ಶಿ. ಪರಿವೀಕ್ಷಕರು (9900352324) ಸಂಪರ್ಕಿಸಬಹುದಾಗಿದೆ.
ಕುಣಿಗಲ್: ತಾಲ್ಲೂಕು ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 25ರಂದು ಕ್ರೀಡಾಕೂಟ ನಡೆಯಲಿದ್ದು, ಸೆ.24 ನೋಂದಣಿ ಮಾಡಿಕೊಳ್ಳಲು ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಗೋಪಾಲಕೃಷ್ಣ ತಾ.ದೈ.ಶಿ. ಪರಿವೀಕ್ಷಕರು (7259938630) ಸಂಪರ್ಕಿಸಬಹುದಾಗಿದೆ.
ಪಾವಗಡ: ತಾಲ್ಲೂಕು ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 20ರಂದು ಕ್ರೀಡಾಕೂಟ ನಡೆಯಲಿದ್ದು, ಸೆ.19 ನೋಂದಣಿ ಮಾಡಿಕೊಳ್ಳಲು ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಬಸವರಾಜು ತಾ.ದೈ.ಶಿ. ಪರಿವೀಕ್ಷಕರು (9448940609) ಸಂಪರ್ಕಿಸಬಹುದಾಗಿದೆ.
ಮಧುಗಿರಿ: ರಾಜೀವ್ ಗಾಂಧಿ ತಾಲ್ಲೂಕು ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 21ರಂದು ಕ್ರೀಡಾಕೂಟ ನಡೆಯಲಿದ್ದು, ಸೆ.20 ನೋಂದಣಿ ಮಾಡಿಕೊಳ್ಳಲು ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಪರಮೇಶ್ವರಯ್ಯ ತಾ.ದೈ.ಶಿ. ಪರಿವೀಕ್ಷಕರು (9900195614) ಸಂಪರ್ಕಿಸಬಹುದಾಗಿದೆ.
ಶಿರಾ: ಶ್ರೀ ವಿವೇಕಾನಂದ ತಾಲ್ಲೂಕು ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 21ರಂದು ಕ್ರೀಡಾಕೂಟ ನಡೆಯಲಿದ್ದು, ಸೆ.20 ನೋಂದಣಿ ಮಾಡಿಕೊಳ್ಳಲು ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ನಾಗರತ್ಮಮ್ಮ ತಾ.ದೈ.ಶಿ. ಪರಿವೀಕ್ಷಕರು (9972603567) ಸಂಪರ್ಕಿಸಬಹುದಾಗಿದೆ.
ತಿಪಟೂರು: ಕಲ್ಪತರು ತಾಲ್ಲೂಕು ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 22ರಂದು ಕ್ರೀಡಾಕೂಟ ನಡೆಯಲಿದ್ದು, ಸೆ.21 ನೋಂದಣಿ ಮಾಡಿಕೊಳ್ಳಲು ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಶಮಂತ ತಾ.ದೈ.ಶಿ. ಪರಿವೀಕ್ಷಕರು (8660356249) ಸಂಪರ್ಕಿಸಬಹುದಾಗಿದೆ.
ತುಮಕೂರು: ಜಿಲ್ಲಾ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 23ರಂದು ಕ್ರೀಡಾಕೂಟ ನಡೆಯಲಿದ್ದು, ಸೆ.22 ನೋಂದಣಿ ಮಾಡಿಕೊಳ್ಳಲು ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಪರಮೇಶ್ ಜಿ.ದೈ.ಶಿ. ಪರಿವೀಕ್ಷಕರು (9844464453) ಸಂಪರ್ಕಿಸಬಹುದಾಗಿದೆ.
ಚಿ.ನಾ.ಹಳ್ಳಿ: ತಾಲ್ಲೂಕು ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 25ರಂದು ಕ್ರೀಡಾಕೂಟ ನಡೆಯಲಿದ್ದು, ಸೆ.24 ನೋಂದಣಿ ಮಾಡಿಕೊಳ್ಳಲು ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೇಶವಮೂರ್ತಿ ತಾ.ದೈ.ಶಿ. ಪರಿವೀಕ್ಷಕರು (9448763311) ಸಂಪರ್ಕಿಸಬಹುದಾಗಿದೆ.
ತುರುವೇಕೆರೆ: ತಾಲ್ಲೂಕು ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 26ರಂದು ಕ್ರೀಡಾಕೂಟ ನಡೆಯಲಿದ್ದು, ಸೆ.25 ನೋಂದಣಿ ಮಾಡಿಕೊಳ್ಳಲು ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಿ.ಜೆ.ಜಯಣ್ಣ ತಾ.ದೈ.ಶಿ. ಪರಿವೀಕ್ಷಕರು (9901058001) ಸಂಪರ್ಕಿಸಬಹುದಾಗಿದೆ.
ಗುಬ್ಬಿ: ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಸೆಪ್ಟೆಂಬರ್ 26ರಂದು ಕ್ರೀಡಾಕೂಟ ನಡೆಯಲಿದ್ದು, ಸೆ.25 ನೋಂದಣಿ ಮಾಡಿಕೊಳ್ಳಲು ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಶಂಕರ್‍ಕುಮಾರ್ ತಾ.ದೈ.ಶಿ. ಪರಿವೀಕ್ಷಕರು (9901009501) ಸಂಪರ್ಕಿಸಬಹುದಾಗಿದೆ.
ತಾಲ್ಲೂಕು ಮಟ್ಟದಲ್ಲಿ ಆಯೋಜಿಸುವ ಸ್ಪರ್ಧೆಗಳ ವಿವರ:
ಅಥ್ಲೆಟಿಕ್ಸ್ : ಪುರುಷ ವಿಭಾಗ – 100, 200, 400, 800, 1500, 5000, 10000 ಮೀ ಓಟ, 110 ಮೀ ಹರ್ಡಲ್ಸ್ 4×100 ಮೀ ರಿಲೇ, 4×400 ಮೀ. ರಿಲೇ. ಉದ್ದ ಜಿಗಿತ, ಎತ್ತರ ಜಿಗಿತ, ತ್ರಿವಿಧ ಜಿಗಿತ (ಟ್ರಿಪಲ್ ಜಂಪ್), ಗುಂಡು ಎಸೆತ, ಜಾವಲಿನ್ ಥ್ರೋ, ಡಿಸ್ಕಸ್ ಥ್ರೋ.
ಮಹಿಳಾ ವಿಭಾಗ – 100, 200, 400, 800, 1500, 3000 ಮೀ ಓಟ, 100 ಮೀ ಹರ್ಡಲ್ಸ್, 4×100 ಮೀ ರಿಲೇ, 4*400 ಮೀ. ರಿಲೇ. ಉದ್ದ ಜಿಗಿತ, ಎತ್ತರ ಜಿಗಿತ, ತ್ರಿವಿಧ ಜಿಗಿತ (ಟ್ರಿಪಲ್ ಜಂಪ್), ಗುಂಡು ಎಸೆತ, ಜಾವಲಿನ್ ಥ್ರೋ, ಡಿಸ್ಕಸ್ ಥ್ರೋ.
ಗುಂಪು ಕ್ರೀಡೆ: ಪುರುಷರು : ಕಬಡ್ಡಿ, ಖೋ-ಖೋ, ವಾಲಿಬಾಲ್, ಥ್ರೋಬಾಲ್, ಫುಟ್ಬಾಲ್, ಯೋಗ
ಮಹಿಳಾ ವಿಭಾಗ : ಕಬಡ್ಡಿ, ಖೋ-ಖೋ, ವಾಲಿಬಾಲ್, ಥ್ರೋಬಾಲ್, ಯೋಗ (ವೀರಭದ್ರಾಸನ, ಜಾನು ಶಿರಶಾಸನ, ಹಲಾಸನ ಮತ್ತು ಧನುರಾಸನ)
ಪ್ರತಿಯೊಬ್ಬ ಕ್ರೀಡಾಪಟುವು ಕಡ್ಡಾಯವಾಗಿ ಕ್ರೀಡಾಕೂಟ ನಡೆಯುವ ಒಂದು ದಿನ ಮುಂಚಿತವಾಗಿ ನೊಂದಾಯಿಸತಕ್ಕದ್ದು. ಕ್ರೀಡಾಪಟುಗಳು ಆಧಾರ್ ಕಾರ್ಡ್ ಕಡ್ಡಾಯವಾಗಿ ತರಬೇಕು. ಆಯಾ ತಾಲ್ಲೂಕು ಕ್ರೀಡಾಪಟುವು ಆಯಾ ತಾಲ್ಲೂಕಿನ ನಿವಾಸಿಯಾಗಿರುವ ಬಗ್ಗೆ ಆಧಾರ್ ಕಾರ್ಡ್’ನೊಂದಿಗೆ ಆಯಾ ತಾಲ್ಲೂಕಿನಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸತಕ್ಕದ್ದು. ದಸರಾ ಕ್ರೀಡಾಕೂಟದಲ್ಲಿ ಒಮ್ಮೆ ಒಂದು ತಾಲ್ಲೂಕಿನಿಂದ ಸ್ಪರ್ಧಿಸಿದ ಸ್ಪರ್ಧಿಗಳು (ಸೋಲಿರಲಿ/ ಗೆಲುವಿರಲಿ) ರಾಜ್ಯದ ಬೇರೆ ಯಾವುದೇ ತಾಲ್ಲೂಕಿನಿಂದ ಮತ್ತೊಮ್ಮೆ ಸ್ಪರ್ಧಿಸುವಂತಿಲ್ಲ. ಕ್ರೀಡಾಪಟುಗಳು ಸ್ಪರ್ಧಾ ದಿನಾಂಕಗಳಂದು ಬೆಳಿಗ್ಗೆ 9.00 ಗಂಟೆಗೆ ಹಾಜರಿರುವುದು. ಸ್ಪರ್ಧಿಗಳು ಕರ್ನಾಟಕ ರಾಜ್ಯದ ನಿವಾಸಿಗಳಾಗಿರಬೇಕು. ಕ್ರೀಡಾಪಟುಗಳಿಗೆ ಮಧ್ಯಾಹ್ನದ ಲಘು-ಉಪಹಾರದ ವ್ಯವಸ್ಥೆ ಇರುತ್ತದೆ.
ತುಮಕೂರು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ನೇರವಾಗಿ ಆಯೋಜಿಸುವ ಸ್ಪರ್ಧೆಗಳು:
ಮೇಲಿನ ಎಲ್ಲಾ 07 ಸ್ಪರ್ಧೆಗಳ ಜೊತೆಗೆ ಬಾಸ್ಕೆಟ್ ಬಾಲ್, ಕುಸ್ತಿ, ಹಾಕಿ, ಬ್ಯಾಡ್ ಮಿಂಟನ್, ಬಾಲ್ ಬ್ಯಾಡ್ಮಿಂಟನ್, ಹ್ಯಾಂಡ್ ಬಾಲ್, ಟೇಬಲ್ ಟೆನ್ನಿಸ್, ಥ್ರೋಬಾಲ್ ಹೀಗೆ 15 ಕ್ರೀಡೆಗಳನ್ನು ಆಯೋಜಿಸಲಾಗುವುದು. (ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಯಲ್ಲಿ ಪಾದ ಹಸ್ತಾನಸ, ಆಕರ್ಣ ಧನುರಾಸನ, ಊರ್ದೈ ಧನುರಾಸನ ಮತ್ತು ಅರ್ಧ ಮತ್ಸೇಂದ್ರಿಯ ಆಸನ). ಟೆನ್ನಿಸ್, ನೆಟ್ಬಾಲ್ ಮತ್ತು ಈಜು ಈ ಮೂರು ಸ್ಪರ್ಧೆಗಳ ಆಸಕ್ತ ಕ್ರೀಡಾಪಟುಗಳನ್ನು ನೇರವಾಗಿ ಜಿಲ್ಲಾ ಮಟ್ಟದಲ್ಲಿ ಆಯ್ಕೆ ಮಾಡಿ ವಿಭಾಗ ಮಟ್ಟಕ್ಕೆ ಕಳುಹಿಸಿ ಕೊಡಲಾಗುವುದು.
+ There are no comments
Add yours