ಬಿಜೆಪಿಯೊಂದಿಗಿನ ಮೈತ್ರಿಗೆ ಜೆಡಿಎಸ್’ನಲ್ಲಿ ವಿರೋಧ
Tumkurnews
ತುಮಕೂರು: ಬಿಜೆಪಿ ಮತ್ತು ಜೆಡಿಎಸ್ ನಡುವಿನ ಮೈತ್ರಿಗೆ ಜೆಡಿಎಸ್ ಪಕ್ಷದಲ್ಲಿ ವಿರೋಧ ವ್ಯಕ್ತವಾಗಿದ್ದು, ತುಮಕೂರು ಗ್ರಾಮಾಂತರ ಮಾಜಿ ಶಾಸಕ ಡಿ.ಸಿ ಗೌರಿಶಂಕರ್ ಮೈತ್ರಿಗೆ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯೊಂದಿಗೆ ಮೈತ್ರಿಯ ಬಗ್ಗೆ ಅಧಿಕೃತವಾಗಿ ಕುಮಾರಣಸ್ವಾಮಿ ಮತ್ತು ದೇವೇಗೌಡರೇ ಹೇಳಿದ್ದಾರೆ. ದೊಡ್ಡವರೇ ಹೇಳಿದ ಮೇಲೆ ಯಾವ ರೀತಿಯ ಮೈತ್ರಿ ಎಂದು ಅವರೇ ಸ್ಪಷ್ಟ ಪಡಿಸಬೇಕು ಎಂದರು.
ಮೈತ್ರಿ ನಮಗೆ ಇಷ್ಟವಿಲ್ಲ. ಕಳೆದ 15 ವರ್ಷಗಳಿಂದ ನಮ್ಮ ತಾಲ್ಲೂಕಿನಲ್ಲಿ ನಾವು ಬಿಜೆಪಿ ವಿರುದ್ಧವೇ ರಾಜಕಾರಣ ಮಾಡಿಕೊಂಡು ಬಂದಿದ್ದೇವೆ. ಈಗ ಬಿಜೆಪಿಯೊಂದಿಗೆ ಮೈತ್ರಿ ಎಂದರೆ ಯಾವ ರೀತಿಯಲ್ಲಿ? ಲೋಕಸಭಾ ಚುನಾವಣೆಗೆ ಮಾತ್ರವೇ? ಮುಂಬರುವ ಜಿಪಂ, ತಾಪಂ ಚುನಾವಣೆಗೂ ಮೈತ್ರಿನಾ? ಆ ನಂತರ ಬರುವ ವಿಧಾನಸಭೆ ಚುನಾವಣೆಗೂ ಮೈತ್ರಿ ಇರುತ್ತದೆಯೇ? ಈ ಬಗ್ಗೆ ದೇವೇಗೌಡ ಮತ್ತು ಕುಮಾರಸ್ವಾಮಿಯವರು ಸ್ಪಷ್ಟ ಪಡಿಸಬೇಕು. ಆ ನಂತರ ನಾವು ಅದರ ಬಗ್ಗೆ ಮಾತನಾಡಬಹುದು ಎಂದರು.
+ There are no comments
Add yours