ಎಲ್ಲರೂ ನಿಯಮಿತವಾಗಿ ರಕ್ತದಾನ ಮಾಡಿ: ಸಾಹೇ ವಿವಿ ಉಪಕುಲಪತಿ ಡಾ.ಬಿ.ಕೆ.ಲಿಂಗೇಗೌಡ

1 min read

ಎಲ್ಲರೂ ನಿಯಮಿತವಾಗಿ ರಕ್ತದಾನ ಮಾಡಿ:
ಸಾಹೇ ವಿವಿ ಉಪಕುಲಪತಿ ಡಾ.ಬಿ.ಕೆ.ಲಿಂಗೇಗೌಡ

Tumkurnews
ತುಮಕೂರು: ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ನಿಯಮಿತವಾಗಿ ರಕ್ತದಾನ ಮಾಡಬಹುದು ಎಂದು ಸಾಹೇ ವಿವಿ ಉಪಕುಲಪತಿ ಡಾ.ಬಿ.ಕೆ ಲಿಂಗೇಗೌಡ ತಿಳಿಸಿದರು.
ನಗರದ ಎಸ್‍ಎಸ್‍ಐಟಿ ಕ್ಯಾಂಪಸ್‍ನಲ್ಲಿರುವ ಸಿದ್ಧಾರ್ಥ ಇನ್‍ಸ್ಟಿಟ್ಯೂಟ್ ಆಫ್ ಮೆನೇಜ್‍ಮೆಂಟ್ ಸ್ಟಡೀಸ್ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಬಹುಪಾಲು ಜನರು ರಕ್ತದಾನ ಮಾಡಲು ಹಿಂಜರಿಯುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ರಕ್ತದಾನ ಮಾಡುವುದರಿಂದ ಮನುಷ್ಯನಿಗೆ ಹಲವಾರು ರೀತಿಯ ಅನುಕೂಲವಾಗುತ್ತವೆ. ರಕ್ತದಾನ ಮಾಡುವುದರಿಂದ 24 ಗಂಟೆಗಳ ಒಳಗಾಗಿ ಮತ್ತೆ ಹೊಸ ರಕ್ತ ಉತ್ಪತಿಯಾಗುತ್ತದೆ. ನಮ್ಮ ಸಿದ್ಧಾರ್ಥ ಆಸ್ಪತ್ರೆ ವತಿಯಿಂದ ನಾಗರೀಕರಿಗೆ ರಕ್ತದಾನ ಮಾಡುವಂತೆ ನಿರಂತರವಾಗಿ ಅರಿವು ಮೂಡಿಸಲಾಗುತ್ತಿದೆ. ಯುವಕರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಕ್ತದಾನ ಮಾಡುವಂತೆ ಅರಿವು ಮೂಡಿಸಬೇಕು, ರಕ್ತದಾನ ಮಹಾದಾನ ಎಂದರು.
ರಕ್ತದಾನ ಶಿಬಿರ ಆಯೋಜಕ ಡಾ.ರಾಜೇಂದ್ರ ಪ್ರಸಾದ್.ಹೆಚ್.ಎಂ ಮಾತನಾಡಿ, ಸ್ವಯಂ ಪ್ರೇರಿತರಾಗಿ 30 ವಿದ್ಯಾರ್ಥಿಗಳು ರಕ್ತದಾನ ಮಾಡಿದ್ದಾರೆ. ಪ್ರತಿ ಎರಡು ನಿಮಿಷಗಳಿಗೊಮ್ಮೆ ಮನುಷ್ಯನ ರಕ್ತ ಶುದ್ಧಿಯಾಗುತ್ತದೆ. ನೀವು ಕೊಡುವ ಈ ರಕ್ತದಿಂದ ಒಂದು ಜೀವ ಉಳಿಯುತ್ತದೆ. ಇಂತಹ ಅಮೂಲ್ಯ ಕಾರ್ಯಕ್ಕೆ ಎಲ್ಲರೂ ಕೈಜೊಡಿಸಬೇಕು ಎಂದರು.
ರಕ್ತದಾನ ಶಿಬಿರದಲ್ಲಿ ಸಿದ್ಧಾರ್ಥ ಇನ್‍ಸ್ಟಿಟ್ಯೂಟ್ ಆಫ್ ಮೆನೇಜ್‍ಮೆಂಟ್ ಸ್ಟಡೀಸ್‍ನ ಪ್ರಾಂಶುಪಾಲ ಅಜ್ಮತ್ ಉಲ್ಲಾ ಸೇರಿದಂತೆ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

About The Author

You May Also Like

More From Author

+ There are no comments

Add yours