ದೇವಾಲಯ ಜೀರ್ಣೋದ್ಧಾರಕ್ಕೆ 50 ಸಾವಿರ ನೆರವು: ಎಸ್.ಪಿ ಚಿದಾನಂದ್

1 min read

 

ದೇವಾಲಯ ಜೀರ್ಣೋದ್ಧಾರಕ್ಕೆ 50 ಸಾವಿರ ನೆರವು: ಎಸ್.ಪಿ ಚಿದಾನಂದ್

Tumkurnews
ತುಮಕೂರು: ನಗರದ ಶ್ರೀ ಆದಿಶಕ್ತಿ ದೇವಸ್ಥಾನದ ರಸ್ತೆ ನಾಲ್ಕನೇ ಕ್ರಾಸ್ ವಿನಾಯಕನಗರ ಮಂಡಿಪೇಟೆ ಇಲ್ಲಿನ ಶ್ರೀ ಆದಿಶಕ್ತಿ ದೇವಾಲಯದಲ್ಲಿ ಕಡೆ ಶ್ರಾವಣ ಶುಕ್ರವಾರದ ಪೂಜೆಯಲ್ಲಿ ಉದ್ಯಮಿ ಹಾಗೂ ಬಿಜೆಪಿ ರಾಜ್ಯ ಕಾರ್ಯಕಾರಣಿ ಒಬಿಸಿ ಮೋರ್ಚಾ ಸದಸ್ಯ ಎಸ್.ಪಿ ಚಿದಾನಂದ್ ಪಾಲ್ಗೊಂಡರು. ದೇವಾಲಯಕ್ಕೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದ ಅವರು ದೇವಾಲಯದ ಜೀರ್ಣೋದ್ಧಾರಕ್ಕಾಗಿ 50 ಸಾವಿರ ರೂ.ಗಳನ್ನು ನೀಡುವುದಾಗಿ ಮತ್ತು ಸ್ಥಳೀಯ ಜನರಿಗೆ ಉಚಿತ ಆರೋಗ್ಯ ಕಾರ್ಡನ್ನು ಮಾಡಿಸಿಕೊಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರಾಮದೂತ ಸೇನೆಯ ಗೌರವ ಅಧ್ಯಕ್ಷ ಕಿರಣ್, ಶ್ರೀ ಆದಿಶಕ್ತಿ ಚಾರಿಟೇಬಲ್ ಟ್ರಸ್ಟ್ ಸೆಕ್ರೆಟರಿ ಮಂಜುನಾಥ್, ನಟರಾಜು, ಭಾಗ್ಯರಾಜು, ಗಣೇಶ್, ಶಿವರಾಜ್, ಲೋಕೇಶ್, ವೀರವಣ್, ಸ್ವಾಮಿನಾಥ್, ಧನ್’ಪಾಲ್ ಇತರರು ಹಾಜರಿದ್ದರು.

You May Also Like

More From Author

+ There are no comments

Add yours