ಪಾವಗಡ: 896 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ: ಯಾವ್ಯಾವ ರಸ್ತೆ? ಇಲ್ಲಿದೆ ಲಿಸ್ಟ್

1 min read

 

ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

Tumkurnews
ತುಮಕೂರು: ಕರ್ನಾಟಕ ಸೋಲಾರ್ ಪಾರ್ಕ್ (ಕೆಎಸ್‍ಪಿಡಿಸಿಎಲ್)ನ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 2022-23ನೇ ಸಾಲಿಗೆ 896 ಲಕ್ಷ ವೆಚ್ಚದಲ್ಲಿ ಪಾವಗಡ ತಾಲ್ಲೂಕಿನಲ್ಲಿ ವಿವಿಧ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ತಿಳಿಸಿದ್ದಾರೆ.
ಪಾವಗಡ ತಾಲ್ಲೂಕು ತಿರುಮಣಿ ವೆಂಕಟಮ್ಮನಹಳ್ಳಿ ಮುಖ್ಯರಸ್ತೆಯಲ್ಲಿ ಬರುವ ಮಾರಮ್ಮನಗುಡಿಯಿಂದ ಬಳ್ಳಸಮುದ್ರ ಗ್ರಾಮದವರೆಗೆ ರಸ್ತೆ ನಿರ್ಮಾಣ ಕಾಮಗಾರಿ, ಪಾವಗಡ ತಾಲ್ಲೂಕು ರಾಯಚರ್ಲುಯಿಂದ ಬಳ್ಳಸಮುದ್ರ ಗ್ರಾಮದವರೆಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಕಾಮಗಾರಿ, ಪಾವಗಡ ತಾಲ್ಲೂಕು ತಿರುಮಣಿ ಗ್ರಾಮದ ಮಸೀದಿಯಿಂದ ವೆಂಕಟಮ್ಮನಹಳ್ಳಿ ತಿರುಮಣಿ ಮುಖ್ಯರಸ್ತೆಯವರೆಗೆ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ, ಪಾವಗಡ ತಾಲ್ಲೂಕು ತಿರುಮಣಿ ಸರ್ಕಲ್‍ನಿಂದ ವೆಂಕಟಮ್ಮಹಳ್ಳಿಯವರೆಗೆ ಹೋಗುವ ಮುಖ್ಯರಸ್ತೆಯಲ್ಲಿ ಸಿಸಿ ಚರಂಡಿ ನಿರ್ಮಾಣ, ಪಾವಗಡ ತಾಲ್ಲೂಕು ರಾಯಚರ್ಲುಯಿಂದ ಮುನೇಶ್ವರ ದೇವಸ್ಥಾನದವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಮಧುಗಿರಿ ವತಿಯಿಂದ ಟೆಂಡರ್ ಕರೆಯಲಾಗಿದ್ದು, ಶೀಘ್ರವೇ ಕಾಮಗಾರಿಗಳಿಗೆ ಚಾಲನೆ ದೊರಕಲಿದೆ ಎಂದು ಅವರು ತಿಳಿಸಿದ್ದಾರೆ.

ಪಾವಗಡ; ಡಾಟಾ ಎಂಟ್ರಿ ಆಪರೇಟರ್ ಅಮಾನತು

About The Author

You May Also Like

More From Author

+ There are no comments

Add yours