ಗ್ಯಾಸ್ ವಿಜಯ್ ಶವವಾಗಿ ಪತ್ತೆ: ಕೊಲೆಯೋ? ಆತ್ಮಹತ್ಯೆಯೋ? ಪ್ರಕರಣಕ್ಕೆ ಟ್ವಿಸ್ಟ್

1 min read

 

ಗ್ಯಾಸ್ ವಿಜಯ್ ಶವವಾಗಿ ಪತ್ತೆ: ಪ್ರಕರಣಕ್ಕೆ ಟ್ವಿಸ್ಟ್

Tumkurnews
ತುಮಕೂರು: ನಗರದ ಶಿರಾಗೇಟ್’ನಲ್ಲಿರುವ ಎಚ್.ಎಂ.ಎಸ್ ಶಾಲೆ ಬಳಿ ಅನುಮಾನಸ್ಪದವಾಗಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ.
ಮೃತನನ್ನು ತುಮಕೂರಿನ ಅರಳಿಮರಪಾಳ್ಯದ ನಿವಾಸಿ ಆಟೋ ಚಾಲಕ ಗ್ಯಾಸ್ ವಿಜಯ್ ಎಂದು ಗುರುತಿಸಲಾಗಿದೆ.
ಕೊಲೆ ಶಂಕೆ: ಶವವನ್ನು ನೋಡಿದ ಜನರು ಪ್ರಾರಂಭದಲ್ಲಿ ಇದು‌ ಕೊಲೆ ಎಂದು ಶಂಕೆ ವ್ಯಕ್ತಪಡಿಸಿದ್ದರು. ಯಾರನ್ನೂ ಕೊಲೆ ಮಾಡಿ ಶವವನ್ನು ತಂದು ಇಲ್ಲಿ ಎಸೆಯಲಾಗಿದೆ ಎಂದು ವದಂತಿ ಹಬ್ಬಿತ್ತು. ಆದರೆ ಪೊಲೀಸರ ಆಗಮನದ ಬಳಿಕ ಪ್ರಕರಣಕ್ಕೆ ತಿರುವು ಲಭಿಸಿತು.

ಮೈ ತುಂಬಾ ಸಂಬಂಧಿಕರ ಹಚ್ಚೆ; ಅನಾಥ, ಅಪರಿಚಿತ ಶವವಾಗಿ ಪತ್ತೆ!
ಟ್ವಿಸ್ಟ್ ನೀಡಿದ ವಸ್ತು: ವಿಷಯ ತಿಳಿಯುತ್ತಿದ್ದಂತೆ ನಗರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮೃತ ವಿಜಯ್ ಶವದ ಸಮೀಪದಲ್ಲಿ ವಿಷದ ಬಾಟಲಿಯೊಂದು ಪತ್ತೆಯಾಗಿದೆ. ಶವದ ಬಳಿ ವಿಷದ ಬಾಟಲಿ ಪತ್ತೆಯಾದ ಬಳಿಕ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಆತ್ಮಹತ್ಯೆಯೋ‌ ಅಥವಾ ಕೊಲೆಯೋ ಎಂಬ ಶಂಕೆ ವ್ಯಕ್ತವಾಗಿದೆ.
ಪ್ರಕರಣ ದಾಖಲು: ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದು, ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ತನಿಖೆ ಬಳಿಕ ತಿಳಿಯಬೇಕಿದೆ.

ಗೃಹಲಕ್ಷ್ಮಿ; ಜಿಲ್ಲೆಯ 1.35ಲಕ್ಷ ಫಲಾನುಭವಿಗಳ ಖಾತೆಗೆ ಹಣ ಜಮೆ: ಉಳಿದವರಿಗೆ ಯಾವಾಗ? ಇಲ್ಲಿದೆ ಮಾಹಿತಿ

About The Author

You May Also Like

More From Author

+ There are no comments

Add yours