ತುಮಕೂರು: ತಿಪಟೂರಿನಲ್ಲಿ ವಿಶ್ವ ತೆಂಗು ದಿನಾಚರಣೆ

1 min read

 

ತುಮಕೂರು: ವಿಶ್ವ ತೆಂಗು ದಿನಾಚರಣೆ

Tumkurnews
ತುಮಕೂರು: ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ ಹಾಗೂ ತೆಂಗು ಅಭಿವೃದ್ದಿ ಮಂಡಳಿಯ ಸಹಯೋಗದಲ್ಲಿ ರಾಜ್ಯಮಟ್ಟದ ‘ವಿಶ್ವ ತೆಂಗು ದಿನಾಚರಣೆ’ಯನ್ನು ಸೆಪ್ಟೆಂಬರ್ 4ರಂದು ತಿಪಟೂರು ನಗರದ ಹಾಸ್ಯ ಚಕ್ರವರ್ತಿ ನರಸಿಂಹರಾಜು ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕಿ ಶಾರದಮ್ಮ ತಿಳಿಸಿದ್ದಾರೆ.

18 ವರ್ಷ ತುಂಬಿದೆಯೇ? ತೆಂಗು ಉದ್ದಿಮೆ ಆರಂಭಿಸಿ, ಪಡೆಯಿರಿ 15 ಲಕ್ಷ ರೂ.ವರೆಗೆ ಸಹಾಯ ಧನ!
ಸದರಿ ಕಾರ್ಯಕ್ರಮಕ್ಕೆ ತೋಟಗಾರಿಕೆ ಸಚಿವರು, ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ.ಪರಮೇಶ್ವರ್, ಸಹಕಾರ ಸಚಿವ ಕೆ.ಎನ್.ರಾಜಣ್ಣ, ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು, ವಿಧಾನಸಭಾ ಮತ್ತು ವಿಧಾನ ಪರಿಷತ್ ಸದಸ್ಯರುಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಿಗಳು ಭಾಗವಹಿಸಲಿದ್ದಾರೆ.

ವಿದ್ಯುತ್ತನ್ನು ಮನಬಂದಂತೆ ಬಳಸಬೇಡಿ: ಬೆಸ್ಕಾಂ ಜಾಗೃತ ದಳ
ಈ ಕಾರ್ಯಕ್ರಮದಲ್ಲಿ ತೆಂಗು ಬೆಳೆಗೆ ತಗಲುವ ಕೀಟ ಮತ್ತು ರೋಗಭಾದೆಯ ಬಗ್ಗೆ, ಹವಾಮಾನ ವೈಪರೀತ್ಯದ ಬಗ್ಗೆ ಹಾಗೂ ತೆಂಗು ಬೆಳೆಯ ಸಮಗ್ರ ಮಾಹಿತಿಯನ್ನು ಪರಿಣಿತ ವಿಷಯ ತಜ್ಞರು ನೀಡಲಿದ್ದಾರೆ. ಆದ್ದರಿಂದ ಜಿಲ್ಲೆಯ ಎಲ್ಲಾ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಅವರು ತಿಳಿಸಿದ್ದಾರೆ.

ಬೆಳೆ ಸಮೀಕ್ಷೆಗೆ ಹೊಸ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದ ಕೃಷಿ ಇಲಾಖೆ; ಇಲ್ಲಿದೆ ಮಾಹಿತಿ

About The Author

You May Also Like

More From Author

+ There are no comments

Add yours