ವಿವಿಧ ಯಂತ್ರೋಪಕರಣಗಳ ಖರೀದಿಗೆ ಸಹಾಯಧನ ಸೌಲಭ್ಯ

1 min read

 

ವಿವಿಧ ಯಂತ್ರೋಪಕರಣಗಳ ಖರೀದಿಗೆ ಸಹಾಯಧನ ಸೌಲಭ್ಯ

Tumkurnews
ತುಮಕೂರು: ತೋಟಗಾರಿಕೆ ಇಲಾಖೆ ವತಿಯಿಂದ 2023-24ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ದಿ ಯೋಜನೆಯಡಿ ಹೊಸ ಪ್ರದೇಶ ವಿಸ್ತರಣೆ ಮತ್ತು ತೋಟಗಾರಿಕೆಯಲ್ಲಿ ವಿನೂತನ ತಂತ್ರಜ್ಞಾನ ಹಾಗೂ ಯಂತ್ರೋಪಕರಣಗಳಿಗೆ ಸಹಾಯಧನ ಕಾರ್ಯಕ್ರಮದಡಿ ಸೋಲಾರ್ ಪಂಪ್ ಸೆಟ್ ಹಾಗೂ ವಿವಿಧ ಯಂತ್ರೋಪಕರಣಗಳನ್ನು ಖರೀದಿಸಲು ಸಹಾಯಧನ ನೀಡಲಾಗುವುದು ಎಂದು ತೋಟಗಾರಿಕೆ ಉಪನಿರ್ದೇಶಕಿ ಶಾರದಮ್ಮ ತಿಳಿಸಿದ್ದಾರೆ.

ಗೃಹಲಕ್ಷ್ಮಿ; ಜಿಲ್ಲೆಯ 1.35ಲಕ್ಷ ಫಲಾನುಭವಿಗಳ ಖಾತೆಗೆ ಹಣ ಜಮೆ: ಉಳಿದವರಿಗೆ ಯಾವಾಗ? ಇಲ್ಲಿದೆ ಮಾಹಿತಿ
ಹೊಸ ಪ್ರದೇಶ ವಿಸ್ತರಣೆ ಯೋಜನೆಯಡಿಯಲ್ಲಿ ತೋಟಗಾರಿಕೆ ಬೆಳೆಗಳಾದ ದಾಳಿಂಬೆ, ಡ್ರಾಗನ್ ಪ್ರೂಟ್ ಮತ್ತು ನುಗ್ಗೆ ಗಿಡಗಳ ಪ್ರದೇಶ ವಿಸ್ತರಣೆ ಕಾರ್ಯಕ್ರಮದಡಿ ರೈತರಿಗೆ ಶೇ.40 ರಂತೆ ಕನಿಷ್ಟ 0.10 ಗುಂಟೆಯಿಂದ ಗರಿಷ್ಟ 2 ಹೆಕ್ಟೇರ್ ಪ್ರದೇಶದವರೆಗೆ ಸಹಾಯಧನ ನೀಡಲಾಗುವುದು.
ಸಾಮಾನ್ಯ ವರ್ಗದ ರೈತರಿಗೆ ಶೇ.40ರಂತೆ ಹಾಗೂ ಪ.ಜಾತಿ, ಪ.ಪಂಗಡ ಸಣ್ಣ, ಅತಿಸಣ್ಣ ಹಾಗೂ ಮಹಿಳಾ ಫಲಾನಿಭವಿಗಳಿಗೆ ಶೇ 50ರಂತೆ ಸಹಾಯಧನ ನೀಡಲಾಗುವುದು. ಗರಿಷ್ಟ ರೂ 1.25 ಲಕ್ಷಗಳು/ 5 ಯಂತ್ರೋಪಕರಣಗಳಿಗೆ ಮಾತ್ರ ರೈತರು ಯಂತ್ರೋಪಕರಣಗಳನ್ನು ಖರೀದಿ ಮಾಡಲು ಅವಕಾಶವಿರುತ್ತದೆ ಎಂದು ತಿಳಿಸಿದ್ದಾರೆ.
ಶೇಕಡಾ 50ರಂತೆ 3ಹೆಚ್‍ಪಿ ಸೋಲಾರ್ ಪಂಪ್ ಸೆಟ್‍ಗಳಿಗೆ 1ಲಕ್ಷ, 5ಹೆಚ್‍ಪಿ ಹಾಗೂ ಹೆಚ್ಚಿನ ಸೋಲಾರ್ ಪಂಪ್ ಸೆಟ್‍ಗಳಿಗೆ 1.50ಲಕ್ಷ ರೂ. ಸಹಾಯಧನವನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಆಸಕ್ತ ರೈತರು ಅರ್ಜಿಯೊಂದಿಗೆ ಪಹಣಿ, ಬೆಳೆ ದೃಢೀಕರಣ, ಚೆಕ್ ಬಂದಿ, ಆಧಾರ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕ ಪ್ರತಿ, ಜಾತಿ ಪ್ರಮಾಣ ಪತ್ರ(ಪ.ಜಾತಿ ಮತ್ತು ಪ.ಪಂಗಡ ರೈತರಿಗೆ), ಜಂಟಿ ಖಾತೆ ಇದ್ದಲ್ಲಿ ಒಪ್ಪಿಗೆ ಪ್ರಮಾಣ ಪತ್ರ, ಖಾತೆದಾರರು ಮರಣ ಹೊಂದಿದ್ದಲ್ಲಿ ಮರಣ ಪ್ರಮಾಣ ಪತ್ರ ಮತ್ತು ಇತರೆ ದಾಖಲಾತಿಗಳನ್ನು ಆಯಾ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು. ಗುರಿಗೆ ಅನುಗುಣವಾಗಿ ಮಾರ್ಗಸೂಚಿಯನುಸಾರ ಫಲಾನಿಭವಿಗಳನ್ನು ಜೇಷ್ಟತೆ ಆಧಾರದ ಮೇರೆಗೆ ಸಹಾಯಧನಕ್ಕೆ ಪರಿಗಣಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ: ಇಲ್ಲಿದೆ ಲಿಸ್ಟ್
ಹೆಚ್ಚಿನ ಮಾಹಿತಿಗಾಗಿ ತುಮಕೂರು ದೂ. 0816-2279705, ಗುಬ್ಬಿ 08131-222659, ಶಿರಾ 08135-276310, ಕುಣಿಗಲ್ 08132-221981, ತಿಪಟೂರು 08134-251424, ಚಿಕ್ಕನಾಯಕನಹಳ್ಳಿ 08133-267457, ಮಧುಗಿರಿ 08137-282417, ತುರುವೇಕೆರೆ 08139-288350, ಕೊರಟಗೆರೆ 08138-232920 ಹಾಗೂ ಪಾವಗಡ 08136-244064ನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಇಂದಿನ ತಿಪಟೂರು ಕೊಬ್ಬರಿ ಧಾರಣೆ

About The Author

You May Also Like

More From Author

+ There are no comments

Add yours