ತುಮಕೂರು; ಎರಡ್ಮೂರು ತಿಂಗಳಲ್ಲಿ 3 ಸಾವಿರ ನಿವೇಶನ ಹಂಚಿಕೆ; ಸಚಿವ ಪರಮೇಶ್ವರ್

1 min read

 

ಎರಡ್ಮೂರು ತಿಂಗಳಲ್ಲಿ 3 ಸಾವಿರ ನಿವೇಶನ ಹಂಚಿಕೆ; ಸಚಿವ ಪರಂ ಭರವಸೆ

Tumkurnews
ತುಮಕೂರು; ನಗರವನ್ನು ವ್ಯವಸ್ಥಿತವಾಗಿ ಬೆಳೆಸುವ ಯೋಜನೆ ರೂಪಿಸಬೇಕಿದ್ದು, ಇನ್ನೆರಡು ಮೂರು ತಿಂಗಳಲ್ಲಿ 2 ರಿಂದ 3ಸಾವಿರ ನಿವೇಶನಗಳನ್ನು ಹೆಚ್ಚಿಸಿ ಸಾರ್ವಜನಿಕರಿಗೆ ಹಂಚಬೇಕಾಗಿದೆ ಎಂದು
ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು.
ನಗರದ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಮಹಾನಗರಪಾಲಿಕೆ ವತಿಯಿಂದ ಏರ್ಪಡಿಸಿದ್ದ, ಮಹಾನಗರಪಾಲಿಕೆಯ ಪೌರಕಾರ್ಮಿಕರಿಗೆ ಖಾಯಂ ನೇಮಕಾತಿ ಆದೇಶ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ತುಮಕೂರು ಇಂದು ಪ್ರತಿಷ್ಠಿತ ಮಹಾನಗರ ಪಾಲಿಕೆಯಾಗಿ ಪರಿವರ್ತನೆಗೊಂಡಿದೆ. ವಸಂತನರಸಾಪುರ ಕೈಗಾರಿಕಾ ಎಸ್ಟೇಟ್ ಬಹಳ ದೊಡ್ಡದಾಗಿ ಬೆಳೆಯುತ್ತಿದ್ದು, ಇಲ್ಲಿ 4ಲಕ್ಷ ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ನಿಟ್ಟೂರು ಹೆಚ್.ಎ.ಎಲ್ ಫ್ಯಾಕ್ಟರಿಯಲ್ಲಿ ಈಗಾಗಲೇ ಆರೂವರೆ ಸಾವಿರ ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಮಂದಿ ತುಮಕೂರಿನಲ್ಲಿ ನೆಲೆಸುವ ಸಾಧ್ಯತೆ ಬಹಳಷ್ಟಿರುತ್ತದೆ. ಆದುದರಿಂದ ತುಮಕೂರು ನಗರವನ್ನು ವ್ಯವಸ್ಥಿತವಾಗಿ ಬೆಳೆಸುವ ಯೋಜನೆ ರೂಪಿಸಬೇಕಾಗುತ್ತದೆ ಎಂದರು.
ಮುಂದಿನ ಎರಡ್ಮೂರು ತಿಂಗಳಲ್ಲಿ 2 ರಿಂದ 3 ಸಾವಿರ ನಿವೇಶನಗಳನ್ನು ಹೆಚ್ಚಿಸಿ ಸಾರ್ವಜನಿಕರಿಗೆ ಹಂಚಬೇಕಾಗಿದೆ. ಹಿಂದೆ ಕುಡಿಯುವ ನೀರಿನ ಸಮಸ್ಯೆ ಇತ್ತು. ಆದರೆ ಇಂದು ಹೇಮಾವತಿ ನೀರಿನ ಹರಿಯುವಿಕೆಯಿಂದ ನೀರಿನ ಸಮಸ್ಯೆ ಬಗೆಹರಿದಿದೆ. ತುಮಕೂರು ಜಿಲ್ಲೆಗೆ ಮೆಟ್ರೋ ರೈಲು ತರುವ ಯೋಜನೆ ನಮ್ಮ ಸರ್ಕಾರದ ಮುಂದಿದೆ ಎಂದರು.
ನಗರದ ಮಧ್ಯ ಭಾಗ 150-200 ನಿವೇಶನಗಳು ಉಳಿದುಕೊಂಡಿದ್ದು, ಇವುಗಳನ್ನು ಹರಾಜು ಹಾಕುವ ಪ್ರಕ್ರಿಯೆ ಮಾಡಬೇಕಾಗಿದೆ. ಇದರಿಂದ ಪಾಲಿಕೆಗೆ ಹಣ ಬರಲಿದ್ದು, ಇದರಿಂದ ಅಭಿವೃದ್ಧಿ ಯೋಜನೆ ಕೈಗೊಳ್ಳಬಹುದಾಗಿದೆ. ಇಂತಹ ಕೆಲಸಗಳು ಮುಂದಿನ ದಿನಗಳಲ್ಲಿ ಆಗಬೇಕು ಎಂದರು.

ತುಮಕೂರು; ವಿಶೇಷ ನೇರ ನೇಮಕಾತಿಯಡಿ 276 ಪೌರ ಕಾರ್ಮಿಕರ ಖಾಯಂ; ಪರಂ

About The Author

You May Also Like

More From Author

+ There are no comments

Add yours