ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್; 34 ಸಾವಿರ ರೈತರಿಗೆ ಹಣ ವರ್ಗಾವಣೆ: ಬಿ.ಸುರೇಶ್’ಗೌಡ

1 min read

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್; 34 ಸಾವಿರ ರೈತರಿಗೆ ಹಣ ವರ್ಗಾವಣೆ: ಬಿ.ಸುರೇಶ್’ಗೌಡ

Tumkurnews
ತುಮಕೂರು; ರೈತ ಈ ದೇಶದ ಬೆನ್ನೆಲುಬು ರೈತನ ಆರ್ಥಿಕ ಸದೃಢತೆಗಾಗಿ ಹಾಗೂ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಅನುಕೂಲ ಆಗುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೃಷಿ ಸಮ್ಮಾನ ನಿಧಿ ಯೋಜನೆಯಡಿ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಶಾಸಕ ಬಿ.ಸುರೇಶ್ ಗೌಡ ತಿಳಿಸಿದರು.
ಇಂದು ಹೆಬ್ಬೂರು ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ತುಮಕೂರು ತಾಲ್ಲೂಕು ವ್ಯಾಪ್ತಿಯಲ್ಲಿ ಪಿಎಂ ಕಿಸಾನ್ ಸಮಾನ್ ನಿಧಿ ಯೋಜನೆಗೆ 33440 ಜನ ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ 26988 ರೈತರು ಇಕೆವೈಸಿ ಅಡಿ ನೊಂದಣಿ ಮಾಡಿಸಿಕೊಂಡಿದ್ದು ಇಷ್ಟು ರೈತರಿಗೆ ಇಂದು ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಹಣ ವರ್ಗಾವಣೆ ಆಗಿದೆ ಎಂದು ಶಾಸಕ ಸುರೇಶ್ ಗೌಡ ತಿಳಿಸಿದರು.
ಉಳಿಕೆ ಇರುವಂತ 6452 ರೈತರು ಕೂಡಲೇ ಇಕೆವೈಸಿ ಅಡಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಇಂದು 14ನೇ ಕೃಷಿ ಸಮ್ಮಾನ ನಿಧಿ ಹಣ ಬಿಡುಗಡೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಈ ಹಣವನ್ನು ಬಳಕೆ ಮಾಡುವಂತೆ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಯೋಜನೆಯಲ್ಲಿ ಕೃಷಿ ಕೂಡ ಒಂದಾಗಿದ್ದು ಕೃಷಿ ಅವಲಂಬಿತ ರೈತನ ಬದುಕು ಹಸನಾಗಬೇಕು ಎಂಬುದು ನಮ್ಮ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಇದು ಕೂಡ ಒಂದಾಗಿದೆ. ರೈತನ ಬದುಕು ಉತ್ತಮವನ್ನಾಗಿಸಲು ಪ್ರಧಾನಿ ನರೇಂದ್ರ ಮೋದಿ ಅವರು ರೈತ ಬಳಸುವಂತಹ ರಸಗೊಬ್ಬರಗಳ ಮೇಲೆ ರೈತನಿಗೆ ಹೊರೆಯಾಗದಿರಲಿ ಎಂದು ಗೊಬ್ಬರಕ್ಕಾಗಿ 2 ಲಕ್ಷ ಕೋಟಿ ಸಹಾಯಧನವನ್ನು ನಮ್ಮ ಕೇಂದ್ರದ ಬಿಜೆಪಿ ಸರ್ಕಾರ ನೀಡಿದೆ. ಈ ಪೈಕಿ ಒಂದುವರೆ ಲಕ್ಷ ಕೋಟಿ ಸಹಾಯಧನವನ್ನು ಯೂರಿಯಾಗೆ ಸಹಾಯಧನವನ್ನು ನೀಡಲಾಗಿದೆ ಎಂದರು.
ಇಂದು ದೇಶದಾದ್ಯಂತ ಒಂದು ಲಕ್ಷ ಇಪ್ಪತೈದು ಸಾವಿರ ಕಿಸಾನ್ ಸಮೃದ್ಧಿ ಕೇಂದ್ರಗಳನ್ನು ಇಂದು ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀದೇವಮ್ಮ ಉಪಾಧ್ಯಕ್ಷ ಬಾಬು, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಚಿಕ್ಕ ಬೋರೇಗೌಡ ತಾಲೂಕ್ ಪಂಚಾಯತಿ ಮಾಜಿ ಸದಸ್ಯ ಶಿವಕುಮಾರ್, ಬಿಜೆಪಿ ಅಧ್ಯಕ್ಷ ಶಂಕರಣ್ಣ, ಮುಖಂಡರಾದ ತಿಮ್ಮೇಗೌಡ, ವೈಟಿ ನಾಗರಾಜ್ ಹಾಗೂ ಮತ್ತಿತರರು ಇದ್ದರು.

ಹದ್ದು ಮೀರಿದ ಅಧಿಕಾರಿಗಳು; ಖಡಕ್ ಎಚ್ಚರಿಕೆ ನೀಡಿದ ಶಾಸಕ ಸುರೇಶ್ ಗೌಡ

About The Author

You May Also Like

More From Author

+ There are no comments

Add yours