ಕೇವಲ ಹತ್ತೇ ನಿಮಿಷಗಳಲ್ಲಿ ಸಂಪೂರ್ಣ ಬಸ್ ನಿಲ್ದಾಣ ಖಾಲಿ!: ಚಕಿತಗೊಳಿಸಿದ ಸ್ಥಳಾಂತರ ಪ್ರಕ್ರಿಯೆ
Tumkurnews
ತುಮಕೂರು: ನಗರದ ನೂತನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣವು ಇಂದಿನಿಂದ ಪ್ರಯಾಣಿಕರಿಗೆ ಮುಕ್ತವಾಗಿದ್ದು, ಕಳೆದ ನಾಲ್ಕೂವರೆ ವರ್ಷಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದ ತಾತ್ಕಾಲಿಕ ಬಸ್ ನಿಲ್ದಾಣವನ್ನು ಶನಿವಾರ ಬಂದ್ ಮಾಡಲಾಯಿತು.
ತುಮಕೂರು: ಕೆಎಸ್ಆರ್ಟಿಸಿ ಹೊಸ ಬಸ್ ನಿಲ್ದಾಣ ಜು.27ರಿಂದ ಆರಂಭ
ಶನಿವಾರ ಮಧ್ಯಾಹ್ನ ಹೊಸ ಬಸ್ ನಿಲ್ದಾಣದಿಂದ ಬಸ್ ಸಂಚಾರ ಆರಂಭವಾಗುತ್ತಿದ್ದಂತೆಯೇ ತಾತ್ಕಾಲಿಕ ಬಸ್ ನಿಲ್ದಾಣದಿಂದ ಬಸ್ ಸಂಚಾರ ಸೇರಿದಂತೆ ಎಲ್ಲಾ ಬಗೆಯ ಕಾರ್ಯ ಚಟುವಟಿಕೆಗಳನ್ನು ತತ್‌ಕ್ಷಣವೇ ಹೊಸ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಲಾಯಿತು.
ಮೈಕ್ ಮೂಲಕ ಪ್ರಕಟಣೆ: ಹೊಸ ಬಸ್ ನಿಲ್ದಾಣದಿಂದ ಬಸ್ ಸಂಚಾರ ಆರಂಭವಾಗಿರುವ ಬಗ್ಗೆ ಹಾಗೂ ತಾತ್ಕಾಲಿಕ ಬಸ್ ನಿಲ್ದಾಣವು ಬಂದ್ ಆಗುತ್ತಿರುವ ಬಗ್ಗೆ ನಿಗಮದ ಸಿಬ್ಬಂದಿ ಧ್ವನಿವರ್ಧಕ ಮೂಲಕ ಘೋಷಣೆ ಮಾಡಿದರು. ಈ ಪ್ರಕಟಣೆ ಹೊರ ಬೀಳುತ್ತಿದ್ದಂತೆ ಸಾರ್ವಜನಿಕ ಪ್ರಯಾಣಿಕರು ಹೊಸ ಬಸ್ ನಿಲ್ದಾಣಕ್ಕೆ ದೌಡಾಯಿಸಿದರು.
ನೋಡನೋಡುತ್ತಿದ್ದಂತೆ ತಾತ್ಕಾಲಿಕ ಬಸ್ ನಿಲ್ದಾಣವು ಜನರು, ಬಸ್ ಇಲ್ಲದೇ ಬಿಕೋ ಎನ್ನಲಾರಂಭಿಸಿತು. ಕೇವಲ ಹತ್ತು ನಿಮಿಷಗಳಲ್ಲಿ ಸಂಪೂರ್ಣ ಬಸ್ ನಿಲ್ದಾಣವು ಹೊಸ ಬಸ್ ನಿಲ್ದಾಣಕ್ಕೆ ಸ್ಥಳಾಂತರವಾಗುವ ಮೂಲಕ ಸ್ಥಳಾಂತರ ಪ್ರಕ್ರಿಯೆಯು ಅಚ್ಚರಿ ಮೂಡಿಸಿತು. ಒಟ್ಟಾರೆಯಾಗಿ ಕಳೆದ ನಾಲ್ಕು ವರ್ಷಗಳಿಂದ ಜನರ ಜೀವನದಲ್ಲಿ ಹಾಸುಹೊಕ್ಕಾಗಿದ್ದ ತಾತ್ಕಾಲಿಕ ಬಸ್ ನಿಲ್ದಾಣವು ಇನ್ನು ನೆನಪು ಮಾತ್ರ.
+ There are no comments
Add yours