ಜ್ಯೋತಿಗಣೇಶ್ ಗೆಲುವು ಖಚಿತ; ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ

1 min read

 

ಜ್ಯೋತಿಗಣೇಶ್ ಗೆಲುವು ಖಚಿತ; ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ

Tumkurnews
ತುಮಕೂರು; ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಬಿ ಜ್ಯೋತಿಗಣೇಶ್ ಪರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಭಾನುವಾರ ರೋಡ್ ಶೋ ನಡೆಸಿ ಮತ ಯಾಚಿಸಿದರು.
ನಗರದ ಎಸ್ಐಟಿ ಕಾಲೇಜು ಮುಂಭಾಗ ಸಿಎಂರನ್ನು ಬಿಜೆಪಿ ಅಭ್ಯರ್ಥಿ ಜ್ಯೋತಿಗಣೇಶ್ ಹಾಗೂ ಮುಖಂಡರು ಬರ ಮಾಡಿಕೊಂಡರು. ಬಳಿಕ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದ ಸಿಎಂ ಬಸವರಾಜ ಬೊಮ್ಮಾಯಿ ಅವರು ಬಿಜೆಪಿ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದರು.
ರೋಡ್ ಶೋನಲ್ಲಿ ಸಾವಿರಾರು ಬಿಜೆಪಿ ಕಾರ್ಯಕರ್ತರು ಭಾಗವಹಿಸಿ ಸಿಎಂಗೆ ಜಯಕಾರ ಹಾಕಿದರು. ಎಸ್ಐಟಿಯಿಂದ ಗಂಗೋತ್ರಿ ನಗರ, ಎಸ್.ಎಸ್ ಪುರಂವರೆಗೆ ರೋಡ್ ಶೋ ನಡೆಸಿ ಮಾತನಾಡಿದ ಸಿಎಂ, ತುಮಕೂರು ನಗರ ಕ್ಷೇತ್ರದಲ್ಲಿ ಜ್ಯೋತಿಗಣೇಶ್ ಗೆಲುವು ಖಚಿತ. ಸ್ಮಾರ್ಟ್ ಸಿಟಿ ಯೋಜನೆಯ ಕೆಲಸಗಳು ಆಗಿವೆ ಎಂದರೆ ಅದಕ್ಕೆ ಕಾರಣ ಜ್ಯೋತಿ ಗಣೇಶ್. ನಮ್ಮ ಡಬಲ್ ಇಂಜಿನ್ ಸರ್ಕಾರ, ನರೇಂದ್ರ ಮೋದಿ ನೇತೃತ್ವದಲ್ಲಿ ತುಮಕೂರಿಗೆ ಸ್ಮಾರ್ಟ್ ಸಿಟಿ ಯೋಜನೆ ಕೊಟ್ಟಿದೆ ಎಂದರು.
ನಾವು ಜನ ಪರ ರಾಜಕಾರಣ ಮಾಡಿದ್ದೇವೆ, ರಾಜ್ಯದ ಅಭಿವೃದ್ಧಿ ಮಾಡುತ್ತಿದ್ದೇವೆ, ಜನರ ಮನಗೆದ್ದು ಕರ್ನಾಟಕದಲ್ಲಿ ಈ ಬಾರಿ ಪುನಃ ಅಧಿಕಾರಕ್ಕೆ ಬಂದೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಸದ ಜಿ.ಎಸ್ ಬಸವರಾಜು, ಎಂಎಲ್ ಸಿ ಚಿದಾನಂದ್ ಗೌಡ, ಮಾಜಿ ಎಂ.ಎಲ್.ಸಿ ಹುಲಿನಾಯ್ಕರ್, ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ, ಮುಖಂಡರಾದ ಚಿದಾನಂದ್ ಇನ್ನಿತರರು ಹಾಜರಿದ್ದರು.

ವಿಧಾನಸಭೆ ಚುನಾವಣೆ; ಸಭೆ, ಸಮಾರಂಭಗಳನ್ನು ನಡೆಸಲು ಈ ನಿಯಮಗಳು ಕಡ್ಡಾಯ

About The Author

You May Also Like

More From Author

+ There are no comments

Add yours