ಪಡಿತರ ಚೀಟಿದಾರರ ಗಮನಕ್ಕೆ
Tumkurnews
ತುಮಕೂರು: ಏಪ್ರಿಲ್-23ರ ಮಾಹೆಗೆ ಸಾರ್ವಜನಿಕ ವಿತರಣಾ ಪದ್ಧತಿಯಡಿ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸಲಾಗುತ್ತಿರುವ ಪಡಿತರದಲ್ಲಿ ಸಾರವರ್ಧಿತ ಅಕ್ಕಿಯು ಸೇರಿರುತ್ತದೆ. ಈ ಬಗ್ಗೆ ಕೆಲವು ಗ್ರಾಮಗಳ ಗ್ರಾಮಸ್ಥರು ಸಾರವರ್ಧಿತ ಅಕ್ಕಿಯ ಬಗ್ಗೆ ತಿಳುವಳಿಕೆಯ ಕೊರತೆಯಿಂದ ಸಂಶಯವನ್ನು ವ್ಯಕ್ತಪಡಿಸಿರುವುದು ಕಂಡು ಬಂದಿದ್ದು, ಸದರಿ ಸಾರವರ್ಧಿತ ಅಕ್ಕಿಯು ಪೌಷ್ಠಿಕಯುಕ್ತ ಆಹಾರವಾಗಿದ್ದು, ಮಾನವನ ಉಪಯೋಗಕ್ಕೆ ಅರ್ಹವಾಗಿರುತ್ತದೆ. ಆದ್ದರಿಂದ ಸಾರವರ್ಧಿತ ಅಕ್ಕಿಯು ಯಾವ ಯಾವ ನ್ಯಾಯಬೆಲೆ ಅಂಗಡಿಗಳಿಗೆ ಎತ್ತುವಳಿಯಾಗಿ ವಿತರಣೆಯಾಗುತ್ತಿದೆಯೋ ಅಂತಹ ನ್ಯಾಯಬೆಲೆ ಅಂಗಡಿಗಳ ಪಡಿತರ ಚೀಟಿದಾರರು ಸಾರವರ್ಧಿತ ಅಕ್ಕಿಯ ಬಗ್ಗೆ ಗಾಬರಿ, ಗೊಂದಲಗೊಳ್ಳದೆ ಪಡೆದುಕೊಂಡು ಉಪಯೋಗಿಸುವಂತೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.
+ There are no comments
Add yours