ತುಮಕೂರು ಜಿಲ್ಲೆ; ಇಂದು 62 ನಾಮಪತ್ರ ಸಲ್ಲಿಕೆ
Tumkurnews
ತುಮಕೂರು; ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು(ಏಪ್ರಿಲ್ 19, 2023) 62 ನಾಮಪತ್ರಗಳು ಸ್ವೀಕೃತಗೊಂಡಿರುತ್ತವೆ.
128-ಚಿ.ನಾ.ಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿ ಕ್ಯಾಪ್ಟನ್ ಸೋಮಶೇಖರ್, ಪಕ್ಷೇತರ ಅಭ್ಯರ್ಥಿ ನಾಸೀರ್ ಬೇಗ್ ಎಂ., ಆಲ್ ಇಂಡಿಯಾ ಮಹಿಳಾ ಎಂಪವರ್‍ಮೆಂಟ್ ಪಾರ್ಟಿಯಿಂದ ಎಂ.ಕೆ. ಪಾಷ, ಪಕ್ಷೇತರ ಅಭ್ಯರ್ಥಿ ಗಿರೀಶ್ ಆರ್., ಭಾರತೀಯ ಬಹುಜನ ಕ್ರಾಂತಿ ದಳದಿಂದ ಹೆಚ್.ಟಿ. ನಾಗರಾಜು, ಇಂಡಿಯನ್ ನ್ಯಾಷನಲ್ ಕಾಂಗ್ರೇಸ್ ಪಕ್ಷದಿಂದ ಕೆ.ಎಸ್. ಕಿರಣ್ ಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ.
129-ತಿಪಟೂರು ವಿಧಾನಸಭಾ ಕ್ಷೇತ್ರಕ್ಕೆ ಆಮ್ ಆದ್ಮಿ ಪಕ್ಷದಿಂದ ಟಿ.ಎಸ್. ಚಂದ್ರಶೇಖರ್ 2 ನಾಮಪತ್ರ, ಭಾರತೀಯ ಬಹುಜನ ಕ್ರಾಂತಿ ದಳದಿಂದ ಆರ್.ಎಂ. ಮಲ್ಲಿಕಾರ್ಜುನ ಸ್ವಾಮಿ, ಭಾರತೀಯ ಜನತಾಪಕ್ಷದಿಂದ ಬಿ.ಸಿ.ನಾಗೇಶ್, ಜನತಾದಳ(ಜಾತ್ಯಾತೀತ) ಕೆ.ಟಿ. ಶಾಂತಕುಮಾರ, ಸ್ವತಂತ್ರ ಅಭ್ಯರ್ಥಿ ಬಿ.ಎನ್ ವಿಜಯಕುಮಾರ್, ಸ್ವತಂತ್ರ ಅಭ್ಯರ್ಥಿ ಭರತ್ ಬಿ.ಎಸ್., ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಗಂಗಾಧರಯ್ಯ ಕೆ.ಎಸ್., ಉತ್ತಮ ಪ್ರಜಾಕೀಯ ಪಾರ್ಟಿ ಪಕ್ಷದಿಂದ ಗಿರೀಶ್ ಎಸ್.ಬಿ., ಸ್ವತಂತ್ರ ಅಭ್ಯರ್ಥಿ ಎಂ. ರವಿ ನಾಮಪತ್ರ ಸಲ್ಲಿಸಿದ್ದಾರೆ.
130-ತುರುವೇಕೆರೆ ವಿಧಾನಸಭಾ ಕ್ಷೇತ್ರಕ್ಕೆ ಭಾರತೀಯ ಜನತಾಪಕ್ಷ ಜಯರಾಂ ಎ.ಎಸ್. 2 ನಾಮಪತ್ರ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕಾಂತರಾಜ್ ಬಿ.ಎಂ. ಅವರು 2 ನಾಮಪತ್ರ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಹಟ್ಟಯ್ಯ ಎನ್., ಉತ್ತಮ ಪ್ರಜಾಕೀಯ ಪಾರ್ಟಿ ಭರತ್ ಎಸ್., ಪಕ್ಷೇತರ ಅಭ್ಯರ್ಥಿ ನಾರಾಯಣ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕೆ.ಹುಚ್ಚೇಗೌಡ ಅವರು ನಾಮಪತ್ರ ಸಲ್ಲಿಸಿದ್ದಾರೆ.
131-ಕುಣಿಗಲ್ ವಿಧಾನ ಸಭಾ ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿ ಹೆಚ್.ಡಿ.ರಾಜೇಶ್, ಆಮ್ ಆದ್ಮಿ ಪಕ್ಷದಿಂದ ಪ್ರಶಾಂತ್ ಹೆಚ್.ಜಿ., ಜನತಾದಳ(ಜಾತ್ಯಾತೀತ) ಡಿ.ನಾಗರಾಜಯ್ಯ 2 ನಾಮಪತ್ರ, ಜನತಾದಳ(ಜಾತ್ಯಾತೀತ) ಡಾ:ರವಿ ಬಿ.ಎನ್. ಅವರು 2 ನಾಮಪತ್ರ, ಸ್ವತಂತ್ರ ಅಭ್ಯರ್ಥಿ ಬಿ.ಟಿ. ತಿರುಮಲೇಗೌಡ ಅವರು ನಾಮಪತ್ರ ಸಲ್ಲಿಸಿದ್ದಾರೆ.
132-ತುಮಕೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿ ಕುಮಾರ್ ಎಸ್., ಭಾರತೀಯ ಜನತಾ ಪಾರ್ಟಿ ಜಿ.ಬಿ ಜ್ಯೋತಿಗಣೇಶ್ 2 ನಾಮಪತ್ರ, ಸ್ವತಂತ್ರ ಅಭ್ಯರ್ಥಿ ಎಸ್. ಶಿವಣ್ಣ, ಸ್ವತಂತ್ರ ಅಭ್ಯರ್ಥಿ ಶ್ರೀನಿವಾಸ್ ಜಿ.ಕೆ., ಸ್ವತಂತ್ರ ಅಭ್ಯರ್ಥಿ ಎನ್. ಗೋವಿಂದರಾಜು ನಾಮಪತ್ರ ಸಲ್ಲಿಸಿದ್ದಾರೆ.
133-ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಜನತಾದಳ(ಜಾತ್ಯಾತೀತ) ಡಿ.ಸಿ.ಗೌರಿಶಂಕರ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಜಿ.ಹೆಚ್.ಷಣ್ಮುಖಪ್ಪ ನಾಮಪತ್ರ ಸಲ್ಲಿಸಿರುತ್ತಾರೆ.
134-ಕೊರಟಗೆರೆ ವಿಧಾನಸಭಾ ಕ್ಷೇತ್ರಕ್ಕೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಡಾ:ಜಿ.ಪರಮೇಶ್ವರ ಅವರು 3 ನಾಮಪತ್ರ, ಭಾರತೀಯ ಜನತಾ ಪಾರ್ಟಿಯಿಂದ ಬಿ.ಹೆಚ್.ಅನಿಲ್ ಕುಮಾರ್, ಅವರು ನಾಮಪತ್ರ ಸಲ್ಲಿಸಿದ್ದಾರೆ.
135-ಗುಬ್ಬಿ ವಿಧಾನಸಭಾ ಕ್ಷೇತ್ರಕ್ಕೆ ಜಾತ್ಯಾತೀತ ಜನತಾದಳದಿಂದ ನಾಗರಾಜು ಬಿ.ಎಸ್., ಪಕ್ಷೇತರ ಅಭ್ಯರ್ಥಿ ಎ.ನಂಜುಂಡಯ್ಯ, ಪಕ್ಷೇತರ ಅಭ್ಯರ್ಥಿ ಎ.ಎಸ್ ಮಲ್ಲಿಕಾರ್ಜುನಯ್ಯ ಅವರು ನಾಮಪತ್ರ ಸಲ್ಲಿಸಿದ್ದಾರೆ.
136-ಶಿರಾ ವಿಧಾನ ಸಭಾ ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿ ಬಿ.ಎ.ಮಂಜುನಾಥ, ಸ್ವಯಂ ಕೃಷಿ ಪಾರ್ಟಿಯಿಂದ ಕೆ.ಟಿ.ಗುಂಡರಾಜ್, ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ ಪಕ್ಷದಿಂದ ಗಿರೀಶ್, ಭಾರತೀಯ ಜನತಾ ಪಾರ್ಟಿಯಿಂದ ಸಿ.ಎಂ ರಾಜೇಶ್‍ಗೌಡ, ಸ್ವತಂತ್ರ ಅಭ್ಯರ್ಥಿ ಎಸ್.ಎನ್ ಕಾಂತರಾಜು, ಡಾ: ಅಂಬೇಡ್ಕರ್ ಪೀಪಲ್ಸ್ ಪಾರ್ಟಿಯಿಂದ ಎನ್. ಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ.
137-ಪಾವಗಡ ವಿಧಾನಸಭಾ ಕ್ಷೇತ್ರಕ್ಕೆ ಜನತಾದಳ (ಜಾತ್ಯಾತೀತ) ಪಕ್ಷದಿಂದ ಕೆ.ಎಂ.ತಿಮ್ಮರಾಯಪ್ಪ 3 ನಾಮಪತ್ರ, ಪಕ್ಷೇತರ ಅಭ್ಯರ್ಥಿಯಾಗಿ ಹನುಮಂತರಾಯಪ್ಪ, ಭಾರತೀಯ ಬಹುಜನ ಕ್ರಾಂತಿ ದಳ(ಬಿಬಿಕೆಡಿ) ಪಕ್ಷದಿಂದ ಬಿ.ಟಿ.ರಾಮಸುಬ್ಬಯ್ಯ, ಪಕ್ಷೇತರ ಅಭ್ಯರ್ಥಿ ನಾಗರಾಜಪ್ಪ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ನಾಗೇಂದ್ರ ಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ.
138-ಮಧುಗಿರಿ ವಿಧಾನಸಭಾ ಕ್ಷೇತ್ರಕ್ಕೆ ಭಾರತೀಯ ಜನತಾಪಕ್ಷ ಎಲ್.ಸಿ.ನಾಗರಾಜ್ 2 ನಾಮಪತ್ರ, ಬಹುಜನ ಸಮಾಜ ಪಕ್ಷ ಎನ್. ಮಧು ಅವರು ನಾಮಪತ್ರ ಸಲ್ಲಿಸಿದ್ದಾರೆ.
(ಚಿತ್ರ; ಕೊರಟಗೆರೆ ವಿಧಾನಸಭೆ(ಮೀಸಲು) ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಾ.ಜಿ ಪರಮೇಶ್ವರ್ ಬುಧವಾರ ನಾಮಪತ್ರ ಸಲ್ಲಿಸಿದರು)
ತುಮಕೂರು; ಒಂದೇ ದಿನ 40 ನಾಮಪತ್ರ ಸಲ್ಲಿಕೆ! ಯಾರ್ಯಾರು? ಇಲ್ಲಿದೆ ಪಟ್ಟಿ
+ There are no comments
Add yours